ಉಪೇಂದ್ರ ಅಂದರೆ ನೆನಪಾಗೋದೇ ಅವರ ನಿರ್ದೇಶನದ ಅದ್ಭುತ ಸಿನಿಮಾಗಳು. ಇದುವರೆಗೆ ರೆಕಾರ್ಡ್ ಮಾಡಿರುವ ಚಿತ್ರಗಳು ಎವರ್ ಗ್ರೀನ್. ನಿರ್ದೇಶನದ ಜೊತೆ ನಟನೆಯನ್ನೂ ಮಾಡುತ್ತ ಬಂದಿರುವ ಅವರು, ಅಭಿನಯದತ್ತ ಹೆಚ್ಚು ಗಮನ ಹರಿಸಿದ್ದರು.

ಅವರ ಫ್ಯಾನ್ಸ್ ನಿರ್ದೇಶನದ ಚಿತ್ರ ನೋಡಬೇಕು ಅಂತ ಬಯಸಿದ್ದರು. ಅಭಿಮಾನಿಗಳ ಆಶಯದಂತೆ ಉಪ್ಪಿ ನಿರ್ದೇಶನ ಮಾಡುವುದಾಗಿ ಅನೌನ್ಸ್ ಮಾಡಿದ್ದರು. ತಮ್ಮ ಯು ಐ ಸಿನಿಮಾದ ಮುಹೂರ್ತ ಕೂಡ ನಡೆಸಿದ್ದರು. ಈಗ ಆ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಹೌದು, ಇದ್ದದ್ದನ್ನ ಇದ್ದಂತೆ, ರಿಯಾಲಿಟಿಯನ್ನ ಸೂಪರ್ ಆಗಿ ನಿರೂಪಿಸೋ ನಿರ್ದೇಶಕ, ಮಾಸ್ಟರ್ ಮೈಂಡ್, ರಿಯಲ್ ಸ್ಟಾರ್ ,ಸೂಪರ್ ಸ್ಟಾರ್ ಉಪೇಂದ್ರ ಇಂದಿನಿಂದ ಫೀಲ್ಡಿಗಿಳಿದಿದ್ದಾರೆ. ಏಳು ವರ್ಷಗಳ ನಂತರ ಅವರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ಲಹರಿ ಫಿಲಂಸ್, ವೀನಸ್ ಎಂಟರ್ಪ್ರೈಸಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಯುಐ ಚಿತ್ರಕ್ಕೆ ಬಹುತೇಕ ಯುವ ತಂತ್ರಜ್ಞರೆ ಕೆಲಸ ಮಾಡುತ್ತಿರೋದು ವಿಶೇಷ.

ಟೈಟಲ್ ಲಾಂಚ್, ಮುಹೂರ್ತದಿಂದಲೇ ದೇಶದಾದ್ಯಂತ ಸಂಚಲನ ಸೃಷ್ಟಿಸಿರೋ ಯುಐ ಈಗ ಚಿತ್ರೀಕರಣ ಶುರು ಮಾಡಿದೆ.