ಜುಲೈ 8ಕ್ಕೆ ಭಾಗ್ಯವಂತರ ಆಗಮನ! ಹೊಸ ತಂತ್ರಜ್ಞಾನದೊಂದಿಗೆ ಅಣ್ಣಾವ್ರ ಭಾಗ್ಯವಂತರು ಚಿತ್ರ ದರ್ಶನ…

ಡಾ. ರಾಜಕುಮಾರ್ ಹಾಗೂ ಬಿ.ಸರೋಜಾದೇವಿ ಅಭಿನಯಸಿದ್ದ ಸೂಪರ್ ಹಿಟ್ “ಭಾಗ್ಯವಂತರು” ಚಿತ್ರವನ್ನು ಭಾರ್ಗವ ನಿರ್ದೇಶಿಸಿದ್ದರು. ದ್ವಾರಕೀಶ್ ಚಿತ್ರ ನಿರ್ಮಾಣ ಮಾಡಿತ್ತು. ಈಗ ನಲವತ್ತೈದು ವರ್ಷಗಳ ನಂತರ ನವೀನ ತಂತ್ರಜ್ಞಾನದೊಂದಿಗೆ “ಭಾಗ್ಯವಂತರು” ಚಿತ್ರ ಮರು ಬಿಡುಗಡೆಯಾಗುತ್ತಿದೆ.‌ ಮುನಿರಾಜು.ಎಂ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.

7.1 ಡಿಜಿಟಲ್ ಸೌಂಡ್, ಕಲರಿಂಗ್, ಡಿಟಿಎಸ್ ಮುಂತಾದ ಆಧುನಿಕ ಸೌಲಭ್ಯಗಳೊಂದಿಗೆ
ಈ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ.
ಜುಲೈ 8ರಂದು ರಾಜ್ಯಾದ್ಯಂತ 50ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ “ಭಾಗ್ಯವಂತರು” ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಮುನಿರಾಜು ತಿಳಿಸಿದ್ದಾರೆ.

ಡಾ. ರಾಜಕುಮಾರ್ ಅವರ ಅಪಟ್ಟ ಅಭಿಮಾನಿಯಾಗಿರುವ ಮುನಿರಾಜು, ಈ ಹಿಂದೆ “ಆಪರೇಷನ್ ಡೈಮೆಂಡ್ ರಾಕೆಟ್”, ” ನಾನೊಬ್ಬ ಕಳ್ಳ”, “ದಾರಿ ತಪ್ಪಿದ ಮಗ” ಸೇರಿದಂತೆ ಕೆಲವು ಚಿತ್ರಗಳನ್ನು ಹೊಸ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಿದ್ದಾರೆ. ಈಗ “ಭಾಗ್ಯವಂತರು” ಚಿತ್ರವನ್ನು ತೆರೆಗೆ ತರುತ್ತಿದ್ದಾರೆ.
ಮುಂದೆ “ಹುಲಿ ಹಾಲಿನ ಮೇವು” ಸೇರಿದಂತೆ ಅಣ್ಣಾವ್ರ ಇನ್ನಷ್ಟು ಚಿತ್ರಗಳನ್ನು ಹೊಸ ತಂತ್ರಜ್ಞಾನದೊಂದಿಗೆ
ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ.

Related Posts

error: Content is protected !!