ನಾಲ್ಕು ರಾಜ್ಯಗಳಲ್ಲಿ ಈಗಾಗಲೇ ತನ್ನ ಟ್ರೇಲರ್ ಮೂಲಕವೇ ವೀಕ್ಷಕರನ್ನು ಹೊಸದೊಂದು ಪ್ರಪಂಚಕ್ಕೆ ಕರೆದುಕೊಂಡು ಹೋಗಿರುವ ಚಿತ್ರ ವಿಕ್ರಾಂತ್ ರೋಣ, ಕಿಚ್ಚ ಸುದೀಪ್ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡೀಸ್ ನಟಿಸಿರುವ ಈ ಚಿತ್ರ ಕನ್ನಡ,ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಹಲವಾರು ಭಾಷೆಗಳಲ್ಲಿ ನಿರ್ಮಾಣಗೊಂಡಿರುವ ಪ್ಯಾನ್ ಇಂಡಿಯಾ ಸಿನಿಮಾ.
ಜುಲೈ 28ರಂದು ಪ್ರಪಂಚದಾದ್ಯಂತ ಬಿಡುಗಡೆಯಾಗುತ್ತಿರುವ ವಿಕ್ರಾಂತ್ ರೋಣ ಚಿತ್ರದ ಟ್ರೇಲರ್ ರಿಲೀಸ್ ಇವೆಂಟ್ ಇದೀಗ ದಕ್ಷಿಣ ಭಾರತದ 4 ರಾಜ್ಯಗಳಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ.
ಬುಧವಾರ ಬೆಂಗಳೂರಿನ ಒರಾಯನ್ ಮಾಲ್ ಹಾಗೂ ಗುರುವಾರ ಮುಂಬೈನ ಜಹುವಿನ ಪಿವಿಆರ್ ಥೇಟರಿನಲ್ಲಿ ಮಾದ್ಯಮ ಸಂವಾದ ಹಾಗೂ ಟ್ರೇಲರ್ ಇವೆಂಟ್ ನಡೆದಿದೆ. ಶುಕ್ರವಾರ ಚೆನ್ನೈನ ಸತ್ಯಂ ಸಿನಿಮಾಸ್ ನಲ್ಲಿ ಹಾಗೂ ಕೊಚ್ಚಿಯ ಲುಲು ಮಾಲ್ ನಲ್ಲಿ ಇದೇ ಕಾರ್ಯಕ್ರಮ ನಡೆಯಲಿದೆ.
ಶನಿವಾರ ಹೈದರಾಬಾದ್‌ನ ಬಂಜಾರ ಹಿಲ್ಸ್ ನ ಆರ್.ಕೆ. ಸಿನಿಮಾಸ್ ನಲ್ಲಿ ಟ್ರೇಲರ್ ರಿಲೀಸ್ ಹಾಗೂ ಪ್ರೆಸ್ ಮೀಟ್ ನಡೆಯಲಿದೆ. ಈ ನಾಲ್ಕೂ ರಾಜ್ಯಗಳಲ್ಲಿ ಸುದೀಪ್ ಹಾಗೂ ಜಾಕ್ವೆಲಿನ್ ಸಿನಿರಸಿಕರನ್ನು ಭೇಟಿಯಾಗುವ ಮೂಲಕ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.