ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ಜುಲೈ 28ಕ್ಕೆ ಪ್ರಪಂಚಾದ್ಯಂತ ರಿಲೀಸ್ ಆಗಲಿದೆ.
ಅದಕ್ಕೂ ಮೊದಲು ಸಿನಿಮಾದ 3 ಡಿ ಮಾಧ್ಯಮ ಮಿತ್ರರಿಗೆ ಟ್ರೇಲರ್ ಅನ್ನು ಚಿತ್ರತಂಡ ತೋರಿಸಿದೆ.
ಮಾಧ್ಯಮ ಎದುರು 3ಡಿ ಟ್ರೇಲರ್ ಜೊತೆಗೆ ರಾ ರಾ ರಕ್ಕಮ್ಮ 3 ಡಿ ಸಾಂಗ್ ಕೂಡ ಪ್ರದರ್ಶನವಾಯಿತು. ಈ ವೇಳೆ ರವಿಚಂದ್ರನ್, ಶಿವರಾಜ್ ಕುಮಾರ್, ರಮೇಶ್ ಅರವಿಂದ್, ಡಾಲಿ ಧನಂಜಯ್, ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ, ರಾಜ್ ಬಿ.ಶೆಟ್ಟಿ ಅವರುಗಳು ಟ್ರೇಲರ್ ಲಾಂಚ್ ಮಾಡಿ ಶುಭ ಹಾರೈಸಿದರು.
ಈ ವೇಳೆ ಎಲ್ರೂ ಮಾತಿಗಿಳಿದು ವಿಕ್ರಾಂತ್ ರೋಣನ ಗುಣಗಾನ ಮಾಡಿದರು. ಮೊದಲು ಮಾತಿಗಿಳಿದದ್ದು, ಶಿವರಾಜ ಕುಮಾರ್.
ಸುದೀಪ್ ನನಗೆ ಸಹೋದರ. ಅವರು ಪ್ಯಾಷನೆಟ್ ಮೇಕರ್ . ಸಿನಿಮಾ ಮೇಲೆ ಇಂಟ್ರೆಸ್ಟ್ ಇರುವ ನಟ. ನಿರ್ದೇಶಕ ಅನೂಪ್ ಅವರು ಒಳ್ಳೆಯ ನಿರ್ದೇಶಕ. ಕೊರೊನಾ ವೇಳೆ ಸುದೀಪ್ ಶುರು ಮಾಡಿದ್ದು, ಎಲ್ಲರಿಗೂ ಧೈರ್ಯ ಬಂತು. ಇನ್ನು ಎಲ್ಲರಿಗೂ ಈ ಚಿತ್ರ ನಿರೀಕ್ಷೆ ಹೆಚ್ಚಿಸಿದೆ. ಇನ್ನು ಟ್ರೇಲರ್ ನೋಡಿದೆ. 3 ಡಿ ಟ್ರೇಲರ್ ನೋಡಿದೆ ಖುಷಿಯಾಯ್ತು. ಸಿನಿಮಾ ನೋಡೋಕೆ ಆತುರನಾಗಿದ್ದೇನೆ ಎಂದರು ಶಿವರಾಜಕುಮಾರ್.
ರವಿಚಂದ್ರನ್ ಮಾತನಾಡಿ, ಅನೂಪ್ ಭಂಡಾರಿ ಎಲ್ಲಿ? ಭಯ ಅಂತ ಹೇಳಿದ್ದೀರಿ. ನನ್ ಮಗ ಸುದೀಪ್ ಅವನಿಗೆ ಭಯ ಎಲ್ರಿ. ವಿ.ಆರ್. ಅಂದರೆ ವಿಕ್ರಾಂತ್ ರೋಣ ಅಷ್ಟೇ ಅಲ್ಲ, ವಿ.ರವಿಚಂದ್ರನ್ ಅಂತ. ಈ ಚಿತ್ರ ಪ್ರಪಂಚಕ್ಕೆ ರೀಚ್ ಮಾಡುವ ಉದ್ದೇಶವಿದೆ. ಕನಸುಗಾರ ಅಂತ ನನಗೆ ಹೇಳ್ತಾ ಇದ್ರಿ. ಈಗ ಬಹಳಷ್ಟು ಜನ ಕನಸುಗಾರರಿದ್ದಾರೆ.ಈ ವಿಕ್ರಾಂತ್ ರೋಣ ಬೇರೆ ಲೆವೆಲ್ ಸಿನಿಮಾ ಆಗಲಿದೆ ಅಂದರು ರವಿಚಂದ್ರನ್.
ರಮೇಶ್ ಅರವಿಂದ್ ಮಾತನಾಡಿ, 3 ಡಿ ನೋಡಿದೆ ಬೇರೆ ಲೆವೆಲ್ ನಲ್ಲಿದೆ. ಒಳ್ಳೆಯ ಫ್ಯಾಂಟಸಿ ಕ್ರಿಯೇಟ್ ಮಾಡಿದ್ದಾರೆ. ಅನೂಪ್ ಒಳ್ಳೇ ಕೆಲಸವಾಗಿದೆ. ಇಂದು ರವಿ ಸರ್, ಶಿವಣ್ಣ, ಡಾಲಿ, ರಕ್ಷಿತ್ ಎಲ್ಲರೂ ಈ ಚಿತ್ರಕ್ಕೆ ಶುಭ ಹಾರೈಸಿದ್ದಾರೆ ಎಂದರು ರಮೇಶ್.
ಧನಂಜಯ್, ರಿಷಭ್,ರಾಜ.ಬಿ.ಶೆಟ್ಟಿ, ಸೃಜನ್ ಲೋಕೇಶ್ ಟ್ರೇಲರ್ ಕುರಿತು ಮಾತನಾಡಿದರು.
ನಿರ್ದೇಶಕ ಅನೂಪ್ ಭಂಡಾರಿ, ಸುದೀಪ್, ಜಾಕ್ ಮಂಜು, ಇಂದ್ರಜಿತ್ ಇತರರು ಮಾತನಾಡಿದರು.