ನಿರ್ದೇಶಕ ಶಿವತೇಜಸ್ ಈಗ ಡಾರ್ಲಿಂಗ್ ಡಾರ್ಲಿಂಗ್ ಅಂತ ಜಪ ಮಾಡುತ್ತಿದ್ದಾರೆ. ಹೀಗಂದರೆ ಅಪಾರ್ಥವಾದೀತು. ವಿಷಯವಿಷ್ಟೇ, ಶಿವ ತೇಜಸ್ ತಮ್ಮ ನಿರ್ದೇಶನದ ದಿಲ್ ಪಸಂದ್ ಚಿತ್ರದ ಸುದ್ದಿಯೊಂದನ್ನು ಹೊರ ಬಿಟ್ಟಿದ್ದಾರೆ. ಚಿತ್ರ ಬಹುತೇಕ ಮುಗಿಯೋ ಹಂತಕ್ಕೆ ಬಂದಿದ್ದು, ನೋಡುಗರ ಮುಂದ ಬರಲು ಮಾತ್ರ ಬಾಕಿ ಇದೆ.
ಈ ನಡುವೆ ಅವರು ದಿಲ್ ಪಸಂದ್ ಚಿತ್ರದ ಹೊಸದೊಂದು ಗ್ಲಿಂಪ್ಸ್ ರಿಲೀಸ್ ಮಾಡೋಕೆ ರೆಡಿಯಾಗಿದ್ದಾರೆ. ಅಂದಹಾಗೆ, ಜೂನ್ 12ರಂದು ಚಿತ್ರದ ಹೀರೋ ಡಾರ್ಲಿಂಗ್ ಕೃಷ್ಣನ ಹುಟ್ಟುಹಬ್ಬ. ಅದರ ಅಂಗವಾಗಿ ಈ ಫಸ್ಟ್ ಗ್ಲಿಂಪ್ಸ್ ರಿಲೀಸ್ ಮಾಡಲು ಅಣಿಯಾಗಿದ್ದಾರೆ. ಸದ್ಯ ಹೊಸ ಪೋಸ್ಟರ್ ವೊಂದನ್ನು ರಿಲೀಸ್ ಮಾಡಿರುವ ನಿರ್ದೇಶಕರು. ಆದಷ್ಟು ಬೇಗ ಚಿತ್ರದ ಟೀಸರ್, ಟ್ರೇಲರ್ ಗೆ ಪ್ಲಾನ್ ಮಾಡುತ್ತಿದ್ದಾರೆ.
ಅಂದಹಾಗೆ ಸುಮಂತ್ ಕ್ರಾಂತಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕೆ.ಆರ್.ರಂಗಸ್ವಾಮಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತವಿದೆ. ಶೇಖರ್ ಚಂದ್ರ ಅವರ ಛಾಯಾಗ್ರಹಣ ಮತ್ತು ಕೆ.ಎಂ.ಪ್ರಕಾಶ್ ಅವರ ಸಂಕಲನ ಚಿತ್ರಕ್ಕಿದೆ.
ವಿನೋದ್‌ಸ್ಟಂಟ್ ಮಾಡಿದರೆ, ಮುರಳಿ ಅವರ ನೃತ್ಯ ನಿರ್ದೇಶನವಿದೆ. ಜೂನ್ 12ರಂದು 11.14ಕ್ಕೆ ಆನಂದ್ ಆಡಿಯೋದಲ್ಲಿ ಚಿತ್ರದ ಮೊದಲ ಗ್ಲಿಂಪ್ಸ್ ರಿಲೀಸ್ ಆಗಲಿದೆ.