ತೂತು ಮಡಿಕೆ ಟೈಟಲ್ ಟ್ರ್ಯಾಕ್ ಸಾಂಗ್ ಗೆ ಮೆಚ್ಚುಗೆಯ ಮಹಾಪೂರ!

ಪ್ರತಿಭಾನ್ವಿತ ತಂಡವೇ ಸೇರಿ ತಯಾರಿಸುವ ತೂತು ಮಡಿಕೆ ಸಿನಿಮಾ ರಿಲೀಸ್ ಹೊಸ್ತಿಲಿನಲ್ಲಿ ನಿಂತಿದ್ದು, ಚಿತ್ರತಂಡ ಈಗಾಗಲೇ ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿದೆ. ಮೋಷನ್ ಪೋಸ್ಟರ್ ಹಾಗೂ ಯಾಮಾರಿದೆ ಹೃದಯ ಹಾಡಿನ ಮೂಲಕ ನಿರೀಕ್ಷೆ ಹೆಚ್ಚಿಸಿರುವ ತೂತು ಮಡಿಕೆ ಸಿನಿಮಾದ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದೆ.

ನಿತಿನ್ ನಾರಾಯಣ್ ಕ್ಯಾಚಿ-ಮ್ಯಾಚಿ ಸಾಹಿತ್ಯವಿರುವ ಹಾಡಿಗೆ, ಚೇತನ್ ನಾಯ್ಕ್ ಧ್ವನಿಯಾಗಿದ್ದು, ಸ್ವಾಮಿನಾಥನ್ ಆರ್.ಕೆ ಸಂಗೀತದ ಕಂಪು ಹಾಡಿನ ಇಂಪನ್ನು ಮತ್ತಷ್ಟು ಹೆಚ್ಚಿಸಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಯಾಮಾರಿದೆ ಹೃದಯ ಹಾಡಿನ ಚಿತ್ರೀಕರಣ ನಡೆದ ಜಾಗದಲ್ಲಿಯೇ ಟೈಟಲ್ ಟ್ರ್ಯಾಕ್ ಕೂಡ ಶೂಟ್ ಆಗಿದ್ದು, ಅಲ್ಲಿನ‌ ಸ್ಥಳೀಯರನ್ನು ಬಳಸಿಕೊಂಡು ಮೋಹನ್ ಮಾಸ್ಟರ್ ಹಾಡಿಗೆ ಕೊರಿಯೋಗ್ರಾಫಿ ಮಾಡಿದ್ದಾರೆ. ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ ಶೀರ್ಷಿಕೆ ಗೀತೆಗೆ ಮೆಚ್ಚುಗೆ ವ್ಯಕ್ತವಾಗ್ತಿದೆ.

ಕಿರುಚಿತ್ರಗಳ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ನಂತ್ರ ಮೂಕವಿಸ್ಮಿತ, ಸಿಲಿಕಾನ್ ಸಿಟಿ, ಕಿಸ್ ಸಿನಿಮಾಗಳಲ್ಲಿ ಸಪೋರ್ಟಿಂಗ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದ ಚಂದ್ರ ಕೀರ್ತಿ ತೂತು ಮಡಿಕೆ ಸಿನಿಮಾದಲ್ಲಿ ನಾಯಕನಾಗಿ ಮಿಂಚಿದ್ದು, ಜೊತೆಗೆ ಸಿನಿಮಾದ ಕಥೆ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ನಾಯಕಿಯಾಗಿ ಪಾವನಾ ಗೌಡ ನಾಯಕಿ ನಟಿಸಿದ್ದು, ಪ್ರಮೋದ್ ಶೆಟ್ಟಿ, ಉಗ್ರಂ ಮಂಜು ಮುಂತಾದ ಕಲಾಬಳಗ ಸಿನಿಮಾದಲ್ಲಿದೆ.

ಕಾಮಿಡಿ ಥ್ರಿಲ್ಲರ್ ಸಸ್ಪೆನ್ಸ್ ಕಥಾಹೂರಣದ ತೂತುಮಡಿಕೆ ಸಿನಿಮಾಗೆ ಸರ್ವತಾ ಸಿನಿ ಗ್ಯಾರೇಜ್ ಬ್ಯಾನರ್ ನಡಿ ಮಧುಸೂಧನ್ ರಾವ್ ಹಾಗೂ ಶಿವಕುಮಾರ್ ಬಂಡವಾಳ ಹೂಡಿದ್ದು, ನವೀನ್ ಚಲ್ಲ ಛಾಯಾಗ್ರಾಹಣ, ಉಜ್ವಲ್ ಚಂದ್ರ ಸಂಕಲನ ಸಿನಿಮಾಕ್ಕಿದ್ದು, ಸದ್ಯ ಎರಡು ಹಾಡುಗಳನ್ನು ರಿಲೀಸ್ ಮಾಡಿರುವ ಚಿತ್ರತಂಡ ಶೀರ್ಷದಲ್ಲಿಯೇ ಟ್ರೇಲರ್ ಬಿಡುಗಡೆ ಮಾಡಲಿದೆ.

Related Posts

error: Content is protected !!