ತುಪ್ಪದ ಬೆಡಗಿಯ ಹುಟ್ಟು ಹಬ್ಬದ ಸಂಭ್ರಮ: ಸಾರಿ ಚಿತ್ರ ತಂಡದಿಂದ ಮೋಷನ್ ಪೋಸ್ಟರ್ ರಿಲೀಸ್…

ವೀರ ಮದಕರಿ” ಚಿತ್ರದಿಂದ ಕನ್ನಡಿಗರ ಮನ ಗೆದ್ದಿರುವ ರಾಗಿಣಿ, ಈವರೆಗೂ ಇಪ್ಪತ್ತೈದಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಪ್ರಸ್ತುತ ಅವರ ನಟನೆಯ ಚಿತ್ರ “ಸಾರಿ” (ಕರ್ಮ ರಿಟರ್ನ್ಸ್) ರಿಲೀಸ್ ಗೆ ರೆಡಿಯಾಗುತ್ತಿದೆ. ರಾಗಿಣಿ ಹುಟ್ಟು ಹಬ್ಬದ ಅಂಗವಾಗಿ ಚಿತ್ರತಂಡ ಮೋಷನ್ ಪೋಸ್ಟರ್ ರಿಲೀಸ್ ಮಾಡಿದೆ

ರಾಗಿಣಿ ಬರ್ತ್ ಡೇಗೆ ವಿಷ್ ಮಾಡಿದವರಿಗೆ ಥ್ಯಾಂಕ್ಸ್ ಹೇಳುತ್ತಲೆ, ಸಿನಿಮಾ ಕುರಿತು ಹೇಳಿಕೊಂಡರು. ‘ ನನ್ನನ್ನು ಪತ್ರಕರ್ತ ಅಫ್ಜಲ್ ಭೇಟಿಯಾಗಿ ಈ ಚಿತ್ರದ ಕುರಿತು ವಿವರಿಸಿದರು. ಕಥೆ ಇಷ್ಟವಾಯಿತು. ನಿರ್ದೇಶಕ ಬ್ರಹ್ಮ ಅತ್ಯುತ್ತಮ ತಂತ್ರಜ್ಞರು. ನಾನು ಒಂದೇ ತರಹದ ಪಾತ್ರ ಮಾಡಲು ಇಷ್ಟ ಪಡುವುದಿಲ್ಲ. ಬೇರೆ ಬೇರೆ ಪಾತ್ರ ಮಾಡಬೇಕೆಂಬುದು ನನ್ನ ಆಸೆ. ಇದರಲ್ಲೂ ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ನಿಮ್ಮ ಹಾರೈಕೆ ಇರಲಿ ಎನ್ನುತ್ತಾರೆ ನಾಯಕಿ ರಾಗಿಣಿ ದ್ವಿವೇದಿ.

ನಾನು 2000 ನೇ ಇಸವಿಯಿಂದಲ್ಲೂ ಅನಿಮೇಷನ್‌ ಹಾಗೂ ವಿ ಎಫ್ ಎಕ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ಕುರಿತು ಕೆಲವರಿಗೆ ತರಗತಿ ಕೂಡ ತೆಗೆದುಕೊಳ್ಳುತ್ತೇನೆ. ಹಿಂದೆ “ಸಿದ್ದಿ ಸೀರೆ” ಎಂಬ ಚಿತ್ರ ನಿರ್ದೇಶಿಸಿದ್ದ ನನಗೆ ಇದು ಎರಡನೇ ಚಿತ್ರ. ಅಫ್ಜಲ್ ಅವರು ಹೇಳಿದ ಒಂದೆಳೆ ಕಥೆ ಇಷ್ಟವಾಯಿತು. ನಾನು ಅದನ್ನು ಮುಂದುವರೆಸಿದೆ. ಇದರಲ್ಲಿ ಮಾಟ-ಮಂತ್ರ, ಬ್ಲ್ಯಾಕ್ ಮ್ಯಾಜಿಕ್ ಅಂತ ಏನು ಇಲ್ಲ. ಇದೊಂದು ಕ್ರೈಂ ಥ್ರಿಲ್ಲರ್. ಸೂಪರ್ ಹೀರೋ ಕಾನ್ಸೆಪ್ಟ್ ನ ಚಿತ್ರ ಕೂಡ ಎನ್ನುತ್ತಾರೆ ನಿರ್ದೇಶಕ ಬ್ರಹ್ಮ.

ಸಮಾರಂಭವೊಂದರಲ್ಲಿ ಬ್ರಹ್ಮ ಅವರ ಬಳಿ ಈ ಸಿನಿಮಾ ವಿಷಯ ಹೇಳಿದೆ. ನಂತರ ರಾಗಿಣಿ ಅವರು ಈ ಪಾತ್ರಕ್ಕೆ ಸೂಕ್ತ ಅನಿಸಿತು. ಅವರ ಬಳಿ ಹೋಗಿ ನೀವು ಈ ಚಿತ್ರದಲ್ಲಿ ನಟಿಸಬೇಕು ಎಂದು ಕೇಳಿದಾಗ, ತಕ್ಷಣ ಒಪ್ಪಿಕೊಂಡರು. ಅವರಿಗೆ ಧನ್ಯವಾದ. ಕೆನಡಾ ನಿವಾಸಿ ನವೀನ್ ಕುಮಾರ್ ಈ ಚಿತ್ರದ ನಿರ್ಮಾಪಕರು. ಜೈ ಕೃಪ್ಲಾನಿ ಹಾಗೂ ಜೇನ್ ಜಾರ್ಜ್ ಸಹ ನಿರ್ಮಾಪಕರು. ಬೆಂಗಳೂರು, ಸಕಲೇಶಪುರದ ಸುತ್ತ ಚಿತ್ರೀಕರಣ ಮಾಡಿದ್ದೇವೆ. ಮುಂದಿನ ಭಾಗದ ಚಿತ್ರೀಕರಣ ಹೈದರಾಬಾದ್ ನಲ್ಲಿ ನಡೆಯಲಿದೆ ಎಂದು ಕಾರ್ಯಕಾರಿ ನಿರ್ಮಾಪಕ ಅಫ್ಜಲ್ ಮಾಹಿತಿ ನೀಡಿದರು.

ಛಾಯಾಗ್ರಾಹಕ ರಾಜೀವ್ ಗಣೇಶನ್ ಹಾಗೂ ನಟ ಸ್ವರ್ಣ ಚಂದ್ರ ಕೂಡ “ಸಾರಿ” ಚಿತ್ರದ ಬಗ್ಗೆ ಮಾತನಾಡಿದರು.

Related Posts

error: Content is protected !!