ಈಗ ಎಲ್ಲೆಲ್ಲೂ IPL ಫೀವರ್. ಈ ಐಪಿಎಲ್ ಹಂಗಾಮದ ನಡುವೆ YPL ಟೂರ್ನಿ ಶುರುವಾಗುತ್ತಿದೆ. ನಾವು ಕೆಪಿಎಲ್(ಕರ್ನಾಟಕ ಪ್ರೀಮಿಯರ್ ಲೀಗ್) ಸಿಸಿಎಲ್ ಸೆಲೆಬ್ರಿಟಿ ಪ್ರೀಮಿಯರ್ ಲೀಗ್) ಕೇಳಿದ್ದೇವೆ ಇದು ಯಾವುದು YPL ಅನ್ನೋ ಪ್ರಶ್ನೆಗೆ ಉತ್ತರವೇ ಯಜಮಾನ ಪ್ರೀಮಿಯರ್ ಲೀಗ್
ವಿಷ್ಣುಸೇನಾ ಸಮಿತಿಯಿಂದ ಆಯೋಜಿಸಲಾಗಿರುವ ಈ ಟೂರ್ನಿಯ ಸಂಪೂರ್ಣ ಜವಾಬ್ದಾರಿಯನ್ನು ವಿಷ್ಣುಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ವಹಿಸಿಕೊಂಡಿದ್ದಾರೆ. ಇದೇ 7 ಮತ್ತು 8ರಂದು ನಡೆಯಲಿರುವ YPL ಟೂರ್ನಿಮೆಂಟ್ ಗಾಗಿ ವಿಷ್ಣುಸೇನಾ ಸಮಿತಿ ಥೀಮ್ ಸಾಂಗ್ ಬಿಡುಗಡೆ ಮಾಡಿದೆ. ಥೀಮ್ ಸಾಂಗ್ ಗೆ ಪ್ರಮೋದ್ ಮರವಂತೆ ಸಾಹಿತ್ಯ ನೀಡಿದ್ದು, ಹೇಮಂತ್ ಜೋಯಿಸ್ ಮ್ಯೂಸಿಕ್ ಮಾಡಿದ್ದಾರೆ. ಚೇತನ್ ನಾಯ್ಕ್ ಹಾಡಿದ್ದಾರೆ.
ಈ ಲೀಗ್ ಕುರಿತಿ ವೀರಕಪುತ್ರ ಶ್ರೀನಿವಾಸ್ ಹೇಳಿದ್ದಿಷ್ಟು., ಈ ಪ್ರೀಮಿಯರ್ ಲೀಗ್ ಜವಾಬ್ದಾರಿಯನ್ನು ಬೆಂಗಳೂರು ವಿಷ್ಣುಸೇನಾ ಸಮಿತಿಯ ಅಧ್ಯಕ್ಷ ಯದುನಂದನ್ ಗೌಡ , ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್, ಆನಂದ್ ವಹಿಸಿಕೊಂಡಿದ್ದಾರೆ. ಕ್ರಿಕೆಟ್ ಅನ್ನೋದನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿಸಿದ್ದು ಯಜಮಾನ್ರು.
ಅವರಿಗೆ ಕ್ರಿಕೆಟ್ ಅಂದ್ರೆ ಪ್ರೀತಿ. ಕ್ರಿಕೆಟ್ ದಂತಕಥೆಯ ಅನೇಕರ ಜೊತೆ ಸಂಪರ್ಕವಿತ್ತು. ನಾಗರಹಾವು ಕ್ರಿಕೆಟ್ ಟೂರ್ನಮೆಂಟ್ ಮಾಡಿದಾಗ ಕಪಿಲ್ ದೇವ್ ಭಾಗಿಯಾಗಿದ್ರು. ಅನೇಕ ಸಂಬಂಧಗಳನ್ನು ಬೆಸೆಯುವ ನಿಟ್ಟಿನಲ್ಲಿ ಯಜಮಾನ ಪ್ರೀಮಿಯರ್ ಲೀಗ್ ನಡೆಸಲಾಗ್ತಿದೆ ಎಂದರು.
ಬರೋಬ್ಬರಿ 12 ಟೀಂಗಳು YPLನಲ್ಲಿ ಭಾಗಿಯಾಗಲಿದ್ದು, ಸಿನಿಮಾ ಇಂಡಸ್ಟ್ರೀಯ ಕುಟುಂಬ ಜೊತೆಗೆ ಅಭಿಮಾನಿಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಷ್ಟಕ್ಕೂ ವಿಷ್ಣುಸೇನಾ ಸಮಿತಿ ಈ ರೀತಿ ಟೂರ್ನಿಮೆಂಟ್ ಆಯೋಜನೆಗೆ ಕಾರಣ ಸಾಹಸಸಿಂಹನ ಕ್ರಿಕೆಟ್ ಮೇಲಿನ ಪ್ರೀತಿ.
ಈ ಹಿಂದೆ ವಿಷ್ಣುವರ್ಧನ್ ಅವರು ಸ್ನೇಹಲೋಕ ಎಂಬ ಸಂಘ ಕಟ್ಟಿ ಕ್ರಿಕೆಟ್ ಆಡುತ್ತಿದ್ದರು. ಇದೀಗ ವಿಷ್ಣುಸೇನಾ ಸಮಿತಿ ಕೂಡ ಸಿಂಹ ನಡೆದ ದಾರಿಯಲ್ಲಿ ಸಾಗಿದೆ.