ಹುಲಿಬೇಟೆಗೆ ಚೇಂಬರ್ ಸಾಥ್: ಟೀಸರ್ ಗೆ ಭರಪೂರ ಮೆಚ್ಚುಗೆ…

ಹೊಸ ಯುವ ಉತ್ಸಾಹಿ ತಂಡದ ಸಮಾಗಮದಲ್ಲಿ “ಹುಲಿಬೇಟೆ ಚಿತ್ರ ತಯಾರಾಗಿದೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಭಾರೀ ಮೆಚ್ಚುಗೆ ಪಡೆದಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಎಸ್ ಎ ಚಿನ್ನೇಗೌಡ,
ಸಾ.ರಾ.ಗೋವಿಂದು, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ಕೆ.ಎಂ.ವೀರೇಶ್, ಗೌರೀಶ್ ಅಕ್ಕಿ ಇತರರು ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದರು.

ನಾನು ಚಿತ್ರ ಆರಂಭಿಸಿದಾಗ ಕೆಲವು ಅಡೆತಡೆಗಳು ಎದುರಾದವು. ಮಕ್ಕಳಿಗೆ ಕಷ್ಟ ಬಂದಾಗ ಮೊದಲು ನೆನಪಾಗುವುದು ತಾಯಿ. ನನಗೆ ತಾಯಿಯ ತರಹ ವಾಣಿಜ್ಯ ಮಂಡಳಿ ಹಾಗೂ ತಂದೆಯ ಸ್ಥಾನದಲ್ಲಿ ನಿರ್ಮಾಪಕರ ಸಂಘ. ಈ ಎರಡು ಸಂಸ್ಥೆಗಳ ಸಹಕಾರದಿಂದ ನನಗೆ ಎದುರಾದ ಕಷ್ಟ ದೂರವಾಗಿದೆ. ಆ ಎರಡೂ ಸಂಸ್ಥೆಗಳಿಗೆ ಧನ್ಯವಾದ. ಚಿತ್ರದ ಬಗ್ಗೆ ಹೇಳುವುದಾದರೆ ಭೂಗತಲೋಕದ ಒಂದಿಷ್ಟು ಕಥೆ ಜೊತೆಗೆ ನವಿರಾದ ಪ್ರೇಮಕಾವ್ಯ ಸಹ ಇದರಲ್ಲಿದೆ. ಕಲ್ಯಾಣ ಕರ್ನಾಟಕದ ಭಾಗದಲ್ಲೇ ಚಿತ್ರೀಕರಣ ನಡೆದಿದೆ . ಮೇ ಅಂತ್ಯಕ್ಕೆ ಚಿತ್ರ ತೆರೆಗೆ ಬರಲಿದೆ. ಸಹಕಾರ ನೀಡಿದ ಎಲ್ಲರಿಗೂ ವಂದನೆ ಅಂದರು ನಿರ್ದೇಶಕ ರಾಜ್ ಬಹದ್ದೂರ್.

ಕೇವಲ ಒಂದುವರೆ ಸಾವಿರ ರೂಪಾಯಿಯಿಂದ ಆರಂಭವಾದ ಸಿನಿಮಾವಿದು. ಕ್ಯಾಮೆರಾ ಅಸಿಸ್ಟೆಂಟ್ ಹಾಗೂ ಇನ್ನಿತರ ಕೆಲಸ ಮಾಡಿರುವ ನನಗೆ ನಟನೆಯಲ್ಲಿ ಆಸಕ್ತಿ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನನ್ನ ತಂದೆ-ತಾಯಿಯ ಬೆಂಬಲ ದೊರಕಿತು. ಈ ಸಿನಿಮಾ ಆರಂಭವಾಯಿತು. ಚಿತ್ರೀಕರಣ ನಡೆಯುತ್ತಿದ್ದ ಸಮಯದಲ್ಲಿ ಅನಿರೀಕ್ಷಿತವಾಗಿ ನಮ್ಮ ತಂದೆ ನನ್ನಿಂದ ದೂರಾದರು. ಆದರೂ ಧೃತಿಗೆಡದೆ ನನ್ನ ತಾಯಿ, ನೀನು ಈ ಸಿನಿಮಾ ಪೂರ್ಣಮಾಡು ಎಂದು ನನ್ನ ಜೊತೆಗೆ ನಿಂತರು ಎಂದು ಹೇಳುತ್ತಾ ನಾಯಕ ವಿಶ್ವ ಭಾವುಕರಾದರು.

ನಾಯಕಿ ರೋಹಿಣಿ ಹಾಗೂ ಛಾಯಾಗ್ರಾಹಕ ಧನಪಾಲ್ “ಹುಲಿ ಬೇಟೆ” ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.

ಧಾನುಬಾಯಿ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಹರ್ಷವರ್ಧನ್ ರಾಜ್ ಸಂಗೀತ ನಿರ್ದೇಶನ, ಅರವಿಂದ ರಾಜ್ ಸಂಕಲನ ಹಾಗೂ ಮಂಜು ನಾಗಪ್ಪ ಅವರ ಸಾಹಸ ನಿರ್ದೇಶನವಿದೆ.

Related Posts

error: Content is protected !!