ಪುರುಷೋತ್ತಮನ ಅತ್ಯುತ್ತಮ ಟ್ರೇಲರ್!‌ ಜಿಮ್‌ ರವಿ ಸಿನಿಮಾ ತುಣುಕು ನೋಡಿದವರ ಭರಪೂರ ಮೆಚ್ಚುಗೆ…

ಅಪ್ಪ ನನಗೊಂದು ಡೌಟು, ಅಮ್ಮನಿಗೇನಾದ್ರೂ ಬೇರೆ ಕನೆಕ್ಷನ್‌ ಇದೆಯಾ ಅಂತ…!
ಕೆಲವು ಹೆಂಗಸರಿಗೆ ಜೀವನದಲ್ಲಿ ಇಂತಹ ಸುಖಗಳೇ ದೊಡ್ಡದಾಗಿ ಕಾಣ್ತವೆ. ಇದ್ರಲ್ಲಿ ನಿಮ್ಮದೇನೂ ತಪ್ಪಿಲ್ಲ ಬಿಡಿ…
ಕೆಲವರಿಗೆ ಹೆಂಡ್ತೀರು ವರವಾಗಿ ಸಿಕ್ಕಿದ್ರೆ, ಕೆಲವರಿಗೆ ಶಾಪ ಆಗ್ತಾರೆ…

ಇದು “ಪುರುಷೋತ್ತಮ” ಚಿತ್ರದ ಟ್ರೇಲರ್‌ ಒಳಗಿರುವ ಡೈಲಾಗ್.‌ ಇಡೀ ಟ್ರೇಲರ್‌ ಗಮನಿಸಿದರೆ, ಅಲ್ಲೊಂದು ಮೋಸ, ವಂಚನೆಯ ಅಂಶಗಳು ಕಾಣಸಿಗುತ್ತವೆ. ಅಷ್ಟೇ ಅಲ್ಲ, ನಂಬಿಕೆ ದ್ರೋಹ ಮೇಲಿನ ಕಥೆ ಇರಬಹುದೇನೋ ಎಂಬ ಪ್ರಶ್ನೆಯೂ ಕಾಡುತ್ತದೆ. ಎಲ್ಲದರ ಜೊತೆಯಲ್ಲಿ ಅದೊಂದು ಒಳ್ಳೆಯ ವ್ಯಕ್ತಿತ್ವ ಇರುವ ವ್ಯಕ್ತಿಗೆ ಆಗುತ್ತಿರುವ ಮೋಸವೂ ಗೊತ್ತಾಗುತ್ತೆ. ಅದೇನೆ ಇರಲಿ, ಜಿಮ್‌ ರವಿ ನಿರ್ಮಿಸಿ ಮೊದಲ ಸಲ ಈ ಚಿತ್ರದಲ್ಲಿ ಹೀರೋ ಆಗಿಯೂ ಕಾಣಿಸಿಕೊಂಡಿರುವ ಈ ಚಿತ್ರದ ಟ್ರೇಲರ್‌ ಈಗಾಗಲೇ ಜೋರಾಗಿಯೇ ಸದ್ದು ಮಾಡಿದೆ.

ಅಷ್ಟೇ ಅಲ್ಲ, ಟ್ರೇಲರ್‌ ನೋಡಿದವರಿಂದ ಒಳ್ಳೆಯ ಪ್ರತಿಕ್ರಿಯೆಗಳೂ ಸಿಕ್ಕಿವೆ. ಇಲ್ಲಿಯವರೆಗೂ ಸಿನಿಲೋಕದಲ್ಲಿ ಸಕ್ಸಸ್ ಜರ್ನಿ ಮಾಡಿರುವ ಜಿಮ್ ರವಿ ಅಭಿನಯದ ಈ ಚಿತ್ರ ಮೇ 6ರಂದು ತೆರೆಗೆ ಬರಲಿದೆ. ತೆರೆಗೆ ಬರುವ ಮೊದಲೇ ಚಿತ್ರ ಸಾಕಷ್ಟು ಸುದ್ದಿಯಾಗಿದೆ. ಚಿತ್ರದ ಪೋಸ್ಟರ್‌ ಮೂಲಕವೇ ಒಂದಷ್ಟು ಕುತೂಹಲ ಕೆರಳಿಸಿದ್ದ “ಪುರುಷೋತ್ತಮ” ಆ ಬಳಿಕ ಒಳ್ಳೆಯ ಹಾಡುಗಳು ಕೂಡ ಗಮನಸೆಳೆದಿದ್ದವು. ಈಗ ಟ್ರೇಲರ್‌ಗೂ ಸಿಕ್ಕಾಪಟ್ಟೆ ರೆಸ್ಪಾನ್ಸ್‌ ಸಿಗುತ್ತಿದೆ. ಈಗ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದು, ಸಿನಿಮಾ ಕೂಡ ನೋಡುಗರ ಮನ ಗೆಲ್ಲುತ್ತದೆ ಅನ್ನೋದು ಚಿತ್ರತಂಡದ ಮಾತು.

ಜಿಮ್ ರವಿ ಈವರೆಗೆ ಕನ್ನಡ ಸೇರಿದಂತೆ ತೆಲುಗು, ತಮಿಳು ಭಾಷೆಯ ನೂರಾರು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಇಷ್ಟು ವರ್ಷಗಳ ಕಾಲ‌ ಬಣ್ಣದ ಬದುಕಲ್ಲಿ ಮಿಂದೆದ್ದ ಅವರು, ಅದೇ ಅನುಭವದ ಮೇಲೆ ಹೀರೋ ಆಗಿ, ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. “ಪುರುಷೋತ್ತಮ” ಮೇ. 6 ತೆರೆಗೆ ಬರಲು ಸಜ್ಜಾಗಿದೆ. ಇದೊಂದು ಹೊಸ ಕಥಾಹಂದರ ಹೊಂದಿರುವ ಸಿನಿಮಾ. ಅದರಲ್ಲೂ ಕೌಟುಂಬಿಕ ಚಿತ್ರ. ಜಿಮ್ ರವಿ ರವರು ಕಥೆಯನ್ನು ಮೆಚ್ಚಿ ಅವರೇ ನಿರ್ಮಾಣ ಕೂಡ ಮಾಡಿದ್ದಾರೆ ಅಂದರೆ, ಆ ಚಿತ್ರದ ಕಥೆ ಇಲ್ಲಿ ನಂಬಿಕೆ ಉಳಿಸಿಕೊಂಡಿದೆ ಎಂದರ್ಥ. ಸಮಾಜಕ್ಕೆ ಉತ್ತಮ ಸಂದೇಶ ಮತ್ತು ಮನರಂಜನೆ ಕೊಡುವುದು ನಿರ್ಮಾಪಕ ರವಿ ಅವರ ಉದ್ದೇಶ. ಹಾಗಾಗಿ ಅವರಿಗೆ ಈ ಚಿತ್ರದ ಮೇಲೆ ವಿಶ್ವಾಸವುದೆ, ಎಲ್ಲೂ ಹೊಂದಾಣಿಕೆ ಮಾಡಿಕೊಳ್ಳದೆ, ಸಿನಿಮಾಗೆ ಏನೆಲ್ಲಾ ಬೇಕೋ ಅದೆಲ್ಲವನ್ನೂ ಅವರು ನೀಡುವ ಮೂಲಕ ಸದಭಿರುಚಿಯ ಸಿನಿಮಾ ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು, ಈ ಚಿತ್ರಕ್ಕೆ “ದಿಲ್ದಾರ, ‘ನಾನು ನಮ್ಮುಡ್ಗಿ ಖರ್ಚ್ಗೊಂದು ಮಾಫಿಯಾ, ಸಿನಿಮಾಗಳನ್ನು ನಿರ್ದೇಶಿಸಿದ್ದ ಎಸ್.ವಿ. ಅಮರನಾಥ್ ಅವರು “ಪುರುಷೋತ್ತಮ” ಸಿನಿಮಾಗೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಜಿಮ್‌ ರವಿ ಅವರಿಗೆ ಅಪೂರ್ವ ಸಿನಿಮಾ ನಾಯಕಿ ಅಪೂರ್ವ ಇಲ್ಲೂ ನಾಯಕಿಯಾಗಿದ್ದಾರೆ. ನಿವೇದಿತಾ ಇದ್ದಾರೆ. ಅವರೂ ಸಹ ಡ್ರಾಮಾ ಆರ್ಟಿಸ್ಟ್ ವರ್ಸಟೈಲ್ ಆಕ್ಟಿಂಗ್ ಸ್ಕಿಲ್ಸ್ ಮತ್ತು ಡ್ಯಾನ್ಸರ್. ಪುರುಷೋತ್ತಮ ಸಿನಿಮಾದ ಹಾಡುಗಳು ಈಗಾಗಲೇ ಹಿಟ್ ಆಗಿವೆ. ಟ್ರೇಲರ್‌ ಕೂಡ ಸದ್ದು ಮಾಡಿದೆ. ಈ ಸಿನಿಮಾಗೆ ಶ್ರೀಧರ್ ವಿ ಸಂಭ್ರಮ್ ಸಂಗೀತವಿದೆ. ಅದೇನೆ ಇರಲಿ, ಒಂದೊಳ್ಳೆಯ ಕಥಾ ಹಂದರ ಹೊಂದಿರುವ “ಪುರುಷೋತ್ತಮ” ಎಲ್ಲಾ ವರ್ಗಕ್ಕೂ ಇಷ್ಟ ಅಗುವ ಚಿತ್ರ. ಜಿಮ್‌ ರವಿ ಅವರ ಕನಸಿನ ಈ ಚಿತ್ರ ಎಲ್ಲರ ಮನ ಗೆಲ್ಲಲಿ ಅನ್ನೋದೆ ಆಶಯ.

Related Posts

error: Content is protected !!