ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಾಯಕಿ…ಮಲೆನಾಡ ಬೆಡಗಿ ಸಮೀಕ್ಷಾ ಈಗ ಬೆಳ್ಳಿತೆರೆ ಮೇಲೆ ದಿಬ್ಬಣ ಹೋಗುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಸಿನಿಮಾ ಜೇಮ್ಸ್ ನಲ್ಲಿ ಜಗಮಗಿಸಿದ್ದ ಸಮೀಕ್ಷಾ ಈಗ ಚಿಟ್ಟೆಯೊಟ್ಟಿಗೆ ಮಿಂಚಲು ಸಜ್ಜಾಗಿದ್ದಾರೆ.
ಚಿಟ್ಟೆಯ ‘Love…ಲಿ’ ಸಿನಿಮಾದಲ್ಲಿ ಸಮೀಕ್ಷಾ
ವಸಿಷ್ಠ ಸಿಂಹ ನಾಯಕನಾಗಿ ಬಣ್ಣ ಹಚ್ಚಿರುವ ಮತ್ತೊಂದು ಬಹುನಿರೀಕ್ಷಿತ ಸಿನಿಮಾ love..ಲಿ ಇತ್ತೀಚೆಗಷ್ಟೇ ಸಿನಿಮಾದ ಮುಹೂರ್ತ ನೆರವೇರಿದ್ದು, ಈಗ ಚಿತ್ರತಂಡ ಪಾತ್ರವೊಂದನ್ನು ಪರಿಚಯಿಸ್ತಿದೆ. ಗಣೇಶ್ ಹಾಗೂ ಭಾವನಾ ನಟನೆಯ 99 ಸಿನಿಮಾ, ಫ್ಯಾನ್, ಜೇಮ್ಸ್ ಸಿನಿಮಾದಲ್ಲಿ ಅಭಿನಯಿಸಿದ್ದ ಸಮೀಕ್ಷಾ ಈಗ love…ಲಿ ಸಿನಿಮಾದಲ್ಲಿ ಬಣ್ಣ ಹಚ್ಚಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. Love..ಲಿ ಸಿನಿಮಾದಲ್ಲಿ ಸಮೀಕ್ಷಾ ಕಾರ್ಪೋರೇಟ್ ಹುಡ್ಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಅಂದಹಾಗೇ love..ಲಿ ಸಿನಿಮಾ ರೋಮ್ಯಾಂಟಿಕ್,ಲವ್ ಸ್ಟೋರಿ ಸಿನಿಮಾವಾಗಿದ್ದು, ಚೇತನ್ ಕೇಶವ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಎಂ ಆರ್ ರವೀಂದ್ರ ಕುಮಾರ್ ನಿರ್ಮಾಣ, ಅನೂಪ್ ಸೀಳಿನ್ ಸಂಗೀತ, ಅಶ್ವಿನ್ ಕೆನೆಡಿ ಛಾಯಾಗ್ರಹಣ ಸಿನಿಮಾಕ್ಕಿದೆ.