ಜೋಗಿ ಪ್ರೇಮ್ ನಿರ್ದೇಶನದ, ಧ್ರುವಾ ಸರ್ಜಾ ಅಭಿನಯದಲ್ಲಿ ಕೆ.ವಿ.ಎನ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ತಯಾರಾಗುತ್ತಿರುವ ಪ್ಯಾನ್ ಇಂಡಿಯಾ ಚಿತ್ರದ, ಮುಹೂರ್ತ ಏಪ್ರಿಲ್ 24ಕ್ಕೆ ನಡೆಯಲಿದೆ.
ಇದಕ್ಕೆ ನಿರ್ದೇಶಕ ಪ್ರೇಮ್ ತಮ್ಮದೇ ಸ್ಟೈಲಲ್ಲಿ ಇನ್ವಿಟೇಷನ್ ಡಿಸೈನ್ ಮಾಡಿ, ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿದ್ದಾರೆ.
ಇದರಲ್ಲಿ 1970 ಇಸವಿ, ಡೆಲ್ಲಿ ಗೇಟ್ ಮಾದರಿಯ ಗೇಟ್ , ಗನ್ ಹಿಡಿದು ನಿಂತಿರೋ ವ್ಯಕ್ತಿ, ಹೀಗೆ ರೆಟ್ರೋ ಸ್ಟೈಲಲ್ಲಿ ಪ್ರೇಮ್ ಪೋಸ್ಟರ್ ಬಿಟ್ಟಿದ್ದಾರೆ. ಜೊತೆಗೆ ಯುದ್ಧದ ಮುನ್ನುಡಿ ಇಲ್ಲಿಂದ ಆರಂಭ ಅಂತ ಬರೆದು ಅಡಿ ಬರಹದಲ್ಲಿ ಇದು ನೈಜ ಘಟನೆಯನ್ನಾಧರಿಸಿದ ಕಥೆ ಅನ್ನೋದನ್ನ ಹೇಳಿದ್ದಾರೆ.