ಮಸಣದಲ್ಲಿ ತಯಾರಾದ ಸಿನಿಮಾಗೆ ಪ್ರಶಸ್ತಿಗಳ ಸುರಿಮಳೆ! ದಾರಿ ಯಾವುದಯ್ಯ ವೈಕುಂಠಕೆ ಚಿತ್ರದ ಟ್ರೇಲರ್‌ಗೆ ಮೆಚ್ಚುಗೆ…

ದೇಶ, ವಿದೇಶಗಳ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳ ಹಲವು ವಿಭಾಗಗಳಲ್ಲಿ ನೂರೈವತ್ತಕ್ಕೂ ಅಧಿಕ ಪ್ರಶಸ್ತಿ ಪಡೆದುಕೊಂಡಿರುವ “ದಾರಿ ಯಾವುದಯ್ಯ ವೈಕುಂಠಕೆ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ನೋಡುಗರಿಂದ ಮೆಚ್ಚುಗೆ ಪಡೆದುಕೊಂಡಿದೆ. ಮಾಜಿ ಸಭಾಪತಿ‌ ವೀರಣ್ಣ ಮತ್ತಿಕಟ್ಟಿ ಸೇರಿದಂತೆ ಹಲವು ಕ್ಷೇತ್ರಗಳ ಗಣ್ಯರು ಈ ವೇಳೆ ಇದ್ದರು.

ನಿರ್ದೇಶಕ ಸಿದ್ದು ಪೂರ್ಣಚಂದ್ರ ಮಾತನಾಇಡ, “ನನ್ನ ಮೊದಲ ಚಿತ್ರ “ಕೃಷ್ಣ ಗಾರ್ಮೆಂಟ್ಸ್” ನಿರೀಕ್ಷಿತ ಗೆಲವು ಪಡೆಯಲಿಲ್ಲ. ಎರಡನೇ ಚಿತ್ರ “ದಾರಿ ಯಾವುದಯ್ಯ ವೈಕುಂಠಕೆ” ಚಿತ್ರ ಬಿಡುಗಡೆ ಮೊದಲೇ ಜನಪ್ರಿಯವಾಗಿದೆ.‌ ನೂರವತ್ತಕ್ಕೂ ಅಧಿಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಇಂತಹ ನನ್ನ ಕನಸಿಗೆ ಆಸರೆ ನೀಡಿದ ನಿರ್ಮಾಪಕರಿಗೆ ಧನ್ಯವಾದ. ನನ್ನ ಚಿತ್ರತಂಡಕ್ಕೆ ವಿಶೇಷ ಧನ್ಯವಾದ. ಈ ಚಿತ್ರದ ಚಿತ್ರೀಕರಣ ಬಹುತೇಕ ಭಾಗ ರಾಮನಗರದ ಸ್ಮಶಾನದಲ್ಲಿ ನಡೆದಿದೆ.‌ ಅಲ್ಲಿ ಹೋಗಿ ಸಮಾಧಿಯಲ್ಲಿ ಮಲಗಿರುವ ಹಿರಿಯರ ಆಶೀರ್ವಾದ ಪಡೆದು ಚಿತ್ರ ಮಾಡಿದ್ದೇನೆ ಎಂದರು.

ಈ ಚಿತ್ರದ ಕಥೆ ಕೇಳಿದ ದಿನವೇ ನಿರ್ಮಾಣ ಮಾಡಬೇಕೆಂದು ಮನಸು ಮಾಡಿದ್ದೆ. ನನ್ನ ಸ್ನೇಹಿತ ಪ್ರಶಾಂತ್ ಅವರ ಮೂಲಕ ನಿರ್ದೇಶಕ ಸಿದ್ದು ಪೂರ್ಣಚಂದ್ರ ಪರಿಚಿತರಾದರು. ಉತ್ತಮ ಚಿತ್ರ ಮಾಡಿಕೊಟ್ಟಿದ್ದಕ್ಕೆ ಸಿದ್ದು ಅವರಿಗೆ ಧನ್ಯವಾದಗಳು. ಮೇ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುತ್ತೇವೆ ಎಂದರು ನಿರ್ಮಾಪಕ ಶರಣಪ್ಪ ಎಂ ಕೊಟಗಿ.

ನನಗೆ ಉತ್ತಮ ಪಾತ್ರ ನೀಡಿದ ನಿರ್ದೇಶಕರಿಗೆ ನಾನು ಆಭಾರಿ. ಚಿಕ್ಕವಯಸ್ಸಿನಲ್ಲಿ ಅಶೋಕ ಹೋಟೆಲ್‌ ಮುಂದೆ ಓಡಾಡುವಾಗ ಒಂದು ದಿನ ಈ ಹೋಟೆಲ್ ಒಳಗೆ ಹೋಗಬೇಕು ಅಂದುಕೊಳ್ಳುತ್ತಿದೆ. ಈಗ ಇದೇ ಹೋಟೆಲ್ ನಲ್ಲಿ ನನ್ನ ಸಿನಿಮಾದ ಟ್ರೇಲರ್ ಬಿಡುಗಡೆಯಾಗುತ್ತಿರುವುದು ಖುಷಿ ಎಂದರು ನಾಯಕ ವರ್ಧನ್.

ಚಿತ್ರದ ಕಲಾವಿದ ಬಲರಾಜವಾಡಿ ಸೇರಿದಂತೆ ತಂಡದ ಅನೇಕ ಕಲಾವಿದರು, ಗಣ್ಯರು ಚಿತ್ರದ ಬಗ್ಗೆ ಮಾತನಾಡಿದರು. ಮ್ಯೂಸಿಕ್ ಬಾಕ್ಸ್ ಆಡಿಯೋ ಕಂಪನಿ ಹಾಡುಗಳನ್ನು ಹೊರತಂದಿದೆ. ಹಿರಿಯ ಛಾಯಾಗ್ರಾಹಕ ಜೆ.ಜಿ.ಕೃಷ್ಣ, ಗಾಯಕ ಶಶಿಧರ್ ಕೋಟೆ ಇತರರು ಇದ್ದರು.

Related Posts

error: Content is protected !!