ಕನ್ನಡ ಚಿತ್ರರಂಗಕ್ಕೆ ದಿನ ಕಳೆದಂತೆದೆ ಹೊಸ ಹೊಸ ನಟಿಯರ ಆಗಮನವಾಗುತ್ತಿದೆ. ಆದ್ರೆ ಗ್ಲಾಮರ್ ಜೊತೆಗೆ ಪ್ರತಿಭೆ, ಅದೃಷ್ಟ ಇದ್ದವರು ಮಾತ್ರ ಇಲ್ಲಿ ಗಟ್ಟಿಯಾಗಿ ನೆಲೆಯೂರುತ್ತಾರೆ. ಈ ಪೈಕಿ ಪ್ರತಿಭಾನ್ವಿತ ನಾಯಕಿ ಚೈತ್ರಾ ಆಚಾರ್ ಕೂಡ ಒಬ್ಬರು. ಮಹಿರಾ, ಗಿಲ್ಕಿ, ತಲೆದಂಡ ಹೀಗೆ ಪ್ರತಿ ಸಿನಿಮಾಗಳಲ್ಲೂ ವಿಶೇಷ ಪಾತ್ರಗಳ ಮೂಲಕ ಗಮನಸೆಳೆದಿರುವ ಚೈತ್ರಾ ಈಗ ಅಕಟಕಟ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಪಾಸಿಟಿವ್ ಗರ್ಲ್
ನಾಗರಾಜ್ ಸೋಮಯಾಜಿ ನಿರ್ದೇಶನ ಮಾಡುತ್ತಿರುವ ಅಕಟಕಟ ಸಿನಿಮಾದಲ್ಲಿ ಚೈತ್ರಾ ಆಚಾರ್ ಜಾನಕಿ ಎಂಬ ಪಾತ್ರ ಮಾಡಲಿದ್ದಾರೆ. ಸದಾ ಖುಷಿ ಖುಷಿಯಿಂದ ಜೀವನವನ್ನು ಜೀವಿಸುವ.. ನೆಗೆಟಿವ್ ಬಿಟ್ಟು ಪಾಸಿಟಿವ್ ಬಗ್ಗೆ ಯೋಚಿಸುವ, ಮಧ್ಯಮ ವರ್ಗದ ಹುಡುಗಿಯಾಗಿ ಚೈತ್ರಾ ಬಣ್ಣ ಹಚ್ಚಲಿದ್ದು, ಇಂಥ ನಾಯಕಿ ನಾಯಕ ಬದುಕಿಗೆ ಎಂಟ್ರಿ ಕೊಟ್ಟಾಗ ಏನಾಗುತ್ತೇ ಅನ್ನೋದೇ ಚೈತ್ರಾ ಆಚಾರ್ ಪಾತ್ರ.
ಸಂಚಾರಿ ವಿಜಯ್ ನಟಿಸಿದ್ದ ‘ಪುಕ್ಸಟ್ಟೆ ಲೈಫು’ ಸಿನಿಮಾ ನಿರ್ಮಾಣ ಮಾಡಿದ್ದ ನಿರ್ದೇಶಕ ನಾಗರಾಜ್ ಸೋಮಯಾಜಿ ಮೂಲತಃ ಫೋಟೊಗ್ರಾಫರ್. ರಂಗಭೂಮಿಯಲ್ಲಿಯೂ ಸಕ್ರಿಯರಾಗಿರುವ ಅವರು ಕಿರುಚಿತ್ರವೊಂದನ್ನು ನಿರ್ದೇಶನ ಮಾಡಿದ್ದರು.
ಈಗ ಅಕಟಕಟ ಸಿನಿಮಾಗೆ ಕಥೆಯನ್ನು ನಾಗರಾಜ್ ಅವರೇ ಬರೆದಿದ್ದು ನಿರ್ದೇಶನ ಕೂಡ ಮಾಡ್ತಿದ್ದು, ಶೀಘ್ರದಲ್ಲೇ ನಾಯಕ ಮತ್ತು ಉಳಿದ ವಿವರಗಳನ್ನು ಶೀಘ್ರದಲ್ಲಿ ರಿವೀಲ್ ಮಾಡಲಿದೆ.