ಅಪ್ಪನಿಲ್ಲದ ಆ 21 ವರ್ಷಗಳು… ಟೈಗರ್‌ ನೆನೆದು ಪುತ್ರ ವಿನೋದ್‌ ಪ್ರಭಾಕರ್‌ ಭಾವುಕ ಪೋಸ್ಟ್

ಟೈಗರ್‌ ಪ್ರಭಾಕರ್‌ ಕನ್ನಡ ಚಿತ್ರರಂಗ ಕಂಡ ಹೆಮ್ಮೆಯ ನಟ. ಈ ಹೆಸರು ಕೇಳಿದೊಡನೆ ಕಣ್ಮುಂದೆ ಬರೋದೇ ಅಜಾನುಬಾಹುವಿನಂತಹ ವ್ಯಕ್ತಿ. ಟೈಗರ್‌ ಪ್ರಭಾಕರ್‌ ಎಷ್ಟು ಎತ್ತರದ ಗಟ್ಟಿತನದ ವ್ಯಕ್ತಿಯಾಗಿದ್ದರೋ, ಅವರ ವ್ಯಕ್ತಿತ್ವವೂ ಕೂಡ ಹಾಗೆ ಇತ್ತು. ಅವರ ಬಗ್ಗೆ ಈಗ ವಿಷಯ ಪ್ರಸ್ತಾಪವೇಕೆ ಎಂಬ ಪ್ರಶ್ನೆ ಎದುರಾಗಬಹುದು. ವಿಷಯವಿಷ್ಟೇ. ಪ್ರಭಾಕರ್‌ ಅವರಿಲ್ಲದೆ ಇಂದಿಗೆ ಇಪ್ಪತ್ತೊಂದು (ಮಾರ್ಚ್‌ 30 1950- 25 ಮಾರ್ಚ್ 2001)‌ ವರ್ಷಗಳು ಗತಿಸಿವೆ. ಕನ್ನಡ ಸೇರಿದಂತೆ ಪರಭಾಷೆಯ ಚಿತ್ರಗಳೂ ಸೇರಿದಂತೆ ಸುಮಾರು 450ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಟೈಗರ್‌ ಪ್ರಭಾಕರ್‌ ಸದಾ ನೆನಪಲ್ಲುಳಿಯೋ ನಟ.

ಅವರು ಇಲ್ಲದ ಈ ಇಪ್ಪತ್ತೊಂದು ವರ್ಷಗಳನ್ನು ನೆನಪಿಸಿಕೊಂಡು ಅವರ ಪುತ್ರ ನಟ ಮತ್ತು ನಿರ್ಮಾಪಕ ವಿನೋದ್‌ ಪ್ರಭಾಕರ್‌ ಅವರು ಅಪ್ಪನಿಗೊಂದು ಭಾವುಕ ಪೋಸ್ಟ್‌ ಮಾಡಿದ್ದಾರೆ. ಅದರ ಸಾರ ಹೀಗಿದೆ…

“ಅಭಿಮಾನಿಗಳಿಂದಲೇ ಟೈಗರ್‌ ಎಂಬ ಬಿರುದು ಪಡೆದು ಅದೇ ರೀತಿಯಲ್ಲೇ ಬದುಕಿ ಅಪ್ಪ ನಮ್ಮನ್ನಗಲಿದ ದಿನಕ್ಕೆ ಇಂದಿಗೆ 21 ವರ್ಷಗಳು. ಅಪ್ಪ ಉಳಿಸಿ ಹೋದ ನೆನಪುಗಳು ಒಂದಡೆಯಾದರೆ, ಪಡೆದ ಅಭಿಮಾನಿಗಳ ಆಶೀರ್ವಾದ ಇನ್ನೂ ನಮ್ಮ ಕುಟುಂಬದ ಮೇಲಿ ಉಳಿದಿರುವ ಖುಷಿ ಇನ್ನೊಂದೆಡೆ. ಇದ್ದಷ್ಟು ಕಾಲ ಸಿನಿರಸಿಕರನ್ನು ಆಲ್‌ ರೌಂಡರ್‌ ರೀತಿಯಲ್ಲಿ ರಂಜಿಸುತ್ತಲೇ ನಮ್ಮನ್ನಗಲಿದರೂ ಕೂಡ ಈಗಲೂ ನಮ್ಮ ನಿಮ್ಮ ನಡುವೆ ತಮ್ಮ ಸುಮಾರು 450 ಪ್ಲಸ್‌ ಚಿತ್ರಗಳ ಮೂಲಕ ಅಜರಾಮರ. ಅಪ್ಪ ದೈಹಿಕವಾಗಿ ನಮ್ಮನ್ನಗಲಿದ ನೋವು ಇದ್ದೇ ಇದೆ. ಆದರೆ, ನಿಮ್ಮೆಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿರುವ ತನ ನಮ್ಮೊಂದಿಗಿದ್ದಾರೆ ಎಂಬ ನಂಬಿಕೆ ನಮ್ಮದು.
ಪ್ರಚಂಡ ನಟರಾಗಿ, ಸಾಹಸ ಚಕ್ರವರ್ತಿಯಾಗಿ ಬದುಕಿದ್ದ ಟೈಗರ್‌ ಪ್ರಭಾಕರ್‌ ಅವರ ಮಗನಾಗಿ, ಒಬ್ಬ ಅಭಿಮಾನಿಯಾಗಿ ನನಗೆ ಹೆಮ್ಮೆ ಇದೆ. ನಿಮ್ಮ ನೆನಪು ನಿತ್ಯ ಹರಿದ್ವರ್ಣದ ಕಾಡಿನಂತೆ ಸದಾ ಹಸಿರಾಗಿರುತ್ತದೆ… ಮಿಸ್‌ ಯೂ ಅಪ್ಪ
ಎಂದು ವಿನೋದ್‌ ಪ್ರಭಾಕರ್‌ ಬರೆದುಕೊಂಡಿದ್ದಾರೆ.

ಮರಿ ಟೈಗರ್ ಹೊಸ ಹೆಜ್ಜೆ! ಟೈಗರ್ ಟಾಕೀಸ್ ನಿರ್ಮಾಣ ಶುರು

ಅದೇನೆ ಇರಲಿ, ವಿನೋದ್‌ ಪ್ರಭಾಕರ್‌ ಅವರು
ಕಳೆದ ವರ್ಷ ತೆರೆಕಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ರಾಬರ್ಟ್” ಚಿತ್ರದಲ್ಲಿ ವಿನೋದ್ ಪ್ರಭಾಕರ್ ವಿಶೇಷ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಅವರ ಹೊಸ ಲುಕ್ ಗೆ ಅಭಿಮಾನಿಗಳು ಫಿದಾ‌ ಆಗಿದ್ದರು. ತಮ್ಮ ನಟನೆ ಮೂಲಕ ಜನಮನಸೂರೆಗೊಂಡಿರುವ ವಿನೋದ್ ಪ್ರಭಾಕರ್ ಈಗ ನಿರ್ಮಾಪಕರಾಗಿದ್ದಾರೆ. ತಮ್ಮ ನಿರ್ಮಾಣದ ಮೊದಲ ಹೆಜ್ಜೆಯಾಗಿ‌ “ಲಂಕಾಸುರ” ಚಿತ್ರ ನಿರ್ಮಿಸುತ್ತಿದ್ದಾರೆ.‌ ವಿನೋದ್ ಪ್ರಭಾಕರ್ ಅವರ ಪತ್ನಿ ವಿನೋದ್ ಪ್ರಭಾಕರ್ ನಿರ್ಮಾಪಕರು.

Related Posts

error: Content is protected !!