ಬಘೀರನ ವಿಶ್ರಾಂತಿಗೆ ವೈದ್ಯರ ಸಲಹೆ; ಜಿಮ್ ವೇಳೆ ನಟ ಶ್ರೀಮುರಳಿಗೆ ಲೋವರ್ ಬ್ಯಾಕ್ ಪೇನ್‌- ಭಯ ಪಡುವ ಅಗತ್ಯವಿಲ್ಲ ಅಂದ ರೋರಿಂಗ್‌ ಸ್ಟಾರ್

ಕನ್ನಡದ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರಿಗೆ ಜಿಮ್ ಮಾಡುವ ವೇಳೆ ಲೋವರ್ ಬ್ಯಾಕ್ ಪೇನ್ ಆಗಿದ್ದು, ಸದ್ಯ ಅವರ ಫ್ಯಾಮಿಲಿ ಡಾಕ್ಟರ್ ಕೆಲವು ದಿನಗಳ ಕಾಲ ವಿಶ್ರಾಂತಿಗೆ ಸೂಚಿಸಿದ್ದಾರೆ.‌ ಹೌದು, ಶ್ರೀ ಮುರಳಿ ಅವರು ನಿತ್ಯವೂ ಗಂಟೆಗಳ ಕಾಲ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಾರೆ. ಇದು ಈಗಿನಿಂದಲ್ಲ, ಹಲವು ವರ್ಷಗಳಿಂದಲೂ ಅವರು ಜಿಮ್‌ಗೆ ಹೋಗಿ ಬಾಡಿ ಫಿಟ್‌ ಆಗಿಟ್ಟುಕೊಂಡವರು. ಈಗ ಸದ್ಯ ಅವರು ಹೊಂಬಾಳೆ ಪ್ರೊಡಕ್ಷನ್ಸ್ ನಲ್ಲಿ “ಬಘೀರ” ಸಿನಿಮಾ ಮಾಡುತ್ತಿದ್ದಾರೆ. ಆ ಸಿನಿಮಾ ಪಾತ್ರಕ್ಕಾಗಿ ಶ್ರೀಮುರಳಿ ಅವರು ಜೋರಾಗಿಯೇ ತಯಾರಿ ನಡೆಸುತ್ತಿದ್ದರು. ಇತ್ತೀಚೆಗೆ ಅವರು ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಲೋವರ್‌ ಬ್ಯಾಕ್ ಪೇನ್ ಮಾಡಿಕೊಂಡಿದ್ದರು. ಇದರಿಂದ ಶ್ರೀಮುರಳಿ ಅವರು ನಡೆದಾಡಲೂ ಸಹ ತೊಂದರೆ ಪಟ್ಟಿದ್ದರು. ಅದರಲ್ಲೂ ಅವರು ನಟ ಪ್ರಥಮ್ ಅಭಿನಯದ “ನಟ ಭಯಂಕರ” ಚಿತ್ರದ ಪತ್ರಿಕಾಗೋಷ್ಠಿಗೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದರು. ಆಗಲೂ ಅವರು ನಿಂತು ಮಾತನಾಡದಷ್ಟು ನೋವಿತ್ತು. ಅದರಲ್ಲೂ ಶ್ರೀಮುರಳಿ ಅವರು ಬಂದು ಸಿನಿಮಾ ತಂಡವನ್ನು ಬೆಂಬಲಿಸಿ ಪ್ರೋತ್ಸಾಹಿಸಿದ್ದರು.

ಅದಾದ ಎರಡು ದಿನಗಳ ಬಳಿಕವೂ ಅವರಿಗೆ ಲೋವರ್‌ ಬ್ಯಾಕ್ ಪೇನ್ ಕಡಿಮೆಯಾಗಿಲ್ಲ. ಅವರಿಗೆ ಆ ನೋವು ತೀವ್ರಗೊಂಡ ಹಿನ್ನೆಲೆಯಲ್ಲಿ ಅವರ ಕುಟುಂಬ ವೈದ್ಯರ ಬಳಿ ಹೋಗಿದ್ದಾರೆ. ನಂತರ ವೈದ್ಯರು ಪರಿಶೀಲಿಸಿ ಅವರಿಗೆ ಒಂದು ವಾರದ ಕಾಲ ವಿಶ್ರಾಂತಿಗೆ ಸೂಚಿಸಿದ್ದಾರೆ. ಹೀಗಾಗಿ ಶ್ರೀಮುರಳಿ ಅವರು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ವೇಳೆ ಸಿನಿಲಹರಿ ಜೊತೆ ಮಾತನಾಡಿದ ನಟ ಶ್ರೀಮುರಳಿ, ಜಿಮ್ ವೇಳೆ ತೊಂದರೆ ಆಗಿರೋದು ನಿಜ. ಒಂದಷ್ಟು ವರ್ಕೌಟ್‌ ಮಾಡುವಾಗ ಇದೆಲ್ಲಾ ಕಾಮನ್‌ ಅಂದುಕೊಂಡೆ. ಅದು ನನಗೆ ಲೋವರ್ ಬ್ಯಾಕ್ ಪೇನ್ ಕಾಣಿಸಿಕೊಂಡಿದ್ದು, ಓಡಾಡಲು ಸ್ವಲ್ಪ ತೊಂದರೆ ಆಗುತ್ತಿದೆ. ಹಾಗಾಗಿ ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆಯುತ್ತಿದ್ದೇನೆ. ಫ್ಯಾನ್ಸ್ ಗಾಬರಿ ಪಡುವ ಅಗತ್ಯವಿಲ್ಲ. ಸ್ವಲ್ಪ ದಿನ ರೆಸ್ಟ್‌ ಮಾಡಿದರೆ ಎಲ್ಲವೂ ಸರಿ ಹೋಗುತ್ತೆ ಎಂದಿದ್ದಾರೆ ಶ್ರೀಮುರಳಿ.

ಶ್ರೀಮುರಳಿ ಅವರು, ಸದ್ಯ ಬಘೀರ ಸಿನಿಮಾ ತಯಾರಿಯಲ್ಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಷ್ಟೊತ್ತಿಗೆ ಬಘೀರ ಸಿನಿಮಾಗೆ ಚಾಲನೆ ಸಿಗಬೇಕಿತ್ತು. ಈಗ ನೋಡಿದರೆ ಶ್ರೀಮುರಳಿ ಅವರು ನೋವು ಮಾಡಿಕೊಂಡಿದ್ದಾರೆ. ಅವರು ವಿಶ್ರಾಂತಿ ಪಡೆದು,ಎಲ್ಲವೂ ಓಕೆ ಅಂದ ಬಳಿಕ ಸಿನಿಮಾ ಚಿತ್ರೀಕರಣ ಶುರುವಾಗಲಿದೆ. ಬಘೀರ ತುಂಬಾ ನಿರೀಕ್ಷೆ ಹುಟ್ಟಿಸಿದೆ. ಕಾರಣ, ಹೊಂಬಾಳೆ ಪ್ರೊಡಕ್ಷನ್ಸ್ ನಿರ್ಮಾಣದ ಸಿನಿಮಾ. ಡಾ.ಸೂರಿ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಸಿನಿಅದ ಟೈಟಲ್‌ ನೋಡಿದವರಿಗೆ ಕುತೂಹಲ ಮೂಡಿಸಿದ್ದು ಸುಳ್ಳಲ್ಲ. ಅದರಲ್ಲೂ ಫಸ್ಟ್‌ ಲುಕ್‌ ಪೋಸ್ಟರ್‌ ಕೂಡ ಸಾಕಷ್ಟು ನಿರೀಕ್ಷೆ ಹೆಚ್ಚಿಸಿದೆ. ಆದಷ್ಟು ಬೇಗ ಶ್ರೀಮುರಳಿ ಅವರು ನೋವಿನಿಂದ ಚೇತರಿಸಿಕೊಳ್ಳಲಿ ಅನ್ನೋದು ಸಿನಿಲಹರಿ ಆಶಯ.

Related Posts

error: Content is protected !!