ಇತ್ತೀಚೆಗೆ ಚಡ್ಡಿದೋಸ್ತ್ ಕಡ್ಡಿ ಅಲ್ಲಾಡ್ಸ್ಬುಟ್ಟ ಸಿನಿಮಾ ನಿರ್ದೇಶಿಸಿದ್ದ ಆಸ್ಕರ್ ಕೃಷ್ಣ ಮತ್ಯಾವ ಸಿನಿಮಾ ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಮಾರ್ಚ್ 14 ರಂದು ಅವರು ತಮ್ಮ ಹೊಸ ಚಿತ್ರದ ಶೀರ್ಷಿಕೆ ಅನಾವರಣ ಮಾಡಲಿದ್ದಾರೆ. ಅಂದಹಾಗೆ, ಮಾರ್ಚ್ 14 ಅವರ ಬರ್ತ್ ಡೇ. ಸೋ ಅಂದೇ ಅವರು ಹೊಸ ಚಿತ್ರ ಅನೌನ್ಸ್ ಮಾಡುತ್ತಿದ್ದಾರೆ
ನಟ, ನಿರ್ದೇಶಕ ಕಮ್ ನಿರ್ಮಾಪಕ ಆಸ್ಕರ್ ಕೃಷ್ಣ ಹೊಸದೊಂದು ಸಿನಿಮಾ ಮಾಡಲು ತಯಾರಿ ನಡೆಸುತ್ತಿದ್ದಾರೆ. ಆ ವಿಷಯವನ್ನು ಮಾರ್ಚ್ 14ರಂದು ಹೇಳಲಿದ್ದಾರೆ, ಆ ದಿನ ಆಸ್ಕರ್ ಕೃಷ್ಣ ಅವರ ಹುಟ್ಟು ಹಬ್ಬ. ಹಾಗಾಗಿ ಅವರು ತಮ್ಮ ಮುಂದಿನ ಚಿತ್ರದ “ಶೀರ್ಷಿಕೆ” ಬಿಡುಗಡೆಗೊಳಿಸಲಿದ್ದಾರೆ.
ಈ ಹಿಂದೆ ” ಆಸ್ಕರ್”, “ಮಿಸ್ ಮಲ್ಲಿಗೆ”, ” ಮೋನಿಕಾ ಈಸ್ ಮಿಸ್ಸಿಂಗ್”, “ಮನಸಿನ ಮರೆಯಲಿ” ಹಾಗೂ “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ” ಎಂಬ ಚಿತ್ರಗಳನ್ನು ನಿರ್ದೇಶನ ಮಾಡಿದ್ದರು.
ಇತ್ತೀಚೆಗಷ್ಟೇ “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡ್ಸ್ಬುಟ್ಟ” ಸಿನಿಮಾ ನಿರ್ದೇಶಿಸಿದ್ದರು. ಜೊತೆಗೆ ಆ ಚಿತ್ರದಲ್ಲಿ ಹೀರೋ ಆಗಿಯೂ ಕಾಣಿಸಿಕೊಂಡಿದ್ದರು. ಅದಾದ ಮೇಲೆ ಮುಂದೆ ಒಂದು ಚಿತ್ರ ಮಾಡುವುದಾಗಿ ಹೇಳಿದ್ದರು. ಆದರೆ, ಯಾವ ಸಿನಿಮಾ ಅಂತ ಘೋಷಣೆ ಮಾಡಿರಲಿಲ್ಲ. ಮಾರ್ಚ್ 14ರಂದು ಹೊಸ ಸಿನಿಮಾದ ಶೀರ್ಷಿಕೆ ಬಗ್ಗೆ ಹೇಳಲಿದ್ದಾರೆ.
ತಮ್ಮ ಮುಂದಿನ ಚಿತ್ರವನ್ನು ಆಸ್ಕರ್ ಕೃಷ್ಣ ಅವರೇ ನಿರ್ಮಿಸಿ, ನಿರ್ದೇಶಿಸುತ್ತಿರುವುದರ ಜೊತೆಗೆ ಪ್ರಧಾನ ಪಾತ್ರ ಮಾಡುತ್ತಿದ್ದಾರೆ. ನಾಯಕ ನಟನಾಗಿ ಇದು ಅವರಿಗೆ ಎರಡನೇ ಚಿತ್ರ.
ಗೌತಮ್ ರಾಮಚಂದ್ರ ಎಂಬುವವರು ಈ ಚಿತ್ರದ ಮೂಲಕ ಸಹ ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಆಸ್ಕರ್ ಕೃಷ್ಣ ಅವರ ಜೊತೆ ಹಲವು ವರ್ಷಗಳಿಂದ ಒಡನಾಟದಲ್ಲಿರುವ ಗೌತಮ್ ರಾಮಚಂದ್ರ ರವರು ಸಾಫ್ಟ್ ವೇರ್ ಉದ್ಯೋಗಿ. ಸಿನಿಮಾ ಮೇಲಿನ ಪ್ರೀತಿಯಿಂದಾಗಿ ಆಸ್ಕರ್ ಕೃಷ್ಣ ಅವರ ಜೊತೆ ಸೇರಿ ನಿರ್ಮಾಣಕ್ಕಿಳಿದಿರುವ ಇವರಿಗೆ ಮುಂದೆ ಕನ್ನಡ ಚಿತ್ರರಂಗದಲ್ಲಿ ಹಲವಾರು ಪ್ರಯೋಗಾತ್ಮಕ ಚಿತ್ರಗಳನ್ನು ನಿರ್ಮಿಸುವ ಆಸೆ.