ಪರ್ಪಲ್ ರಾಕ್ ಎಂಟರ್ ಟೈನರ್ ಹಾಗೂ ವಿಂಟರ್ ಬ್ರಿಡ್ಜ್ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಗಣೇಶ್ ಪಾಪಣ್ಣ, ಯತೀಶ್ ವೆಂಕಟೇಶ್, ಶ್ರೀನಿವಾಸ್ ಶ್ರೀಭಕ್ತ ಹಾಗೂ ಅಜಯ್ ಅಪರೂಪ ನಿರ್ಮಿಸಿರುವ “ಡಿಯರ್ ಸತ್ಯ” ಚಿತ್ರದ ಟ್ರೇಲರ್ ಅಮ್ಮಿ ನಟ ಶ್ರೀಮುರಳಿ ಅವರು ಬಿಡುಗಡೆ ಮಾಡಿ ಶುಭ ಕೋರಿದರು.
“ಸಂತೋಷ್ ನನಗೆ ತುಂಬಾ ವರ್ಷಗಳ ಸ್ನೇಹಿತ. ಈಗ ಆರ್ಯನ್ ಸಂತೋಷ್ ಆಗಿದ್ದಾರೆ. ನಿರ್ಮಾಪಕ ಯತೀಶ್, ಗಣೇಶ್ ಪಾಪಣ್ಣ ಕೂಡ ನನಗೆ ಬಹಳ ದಿನಗಳ ಪರಿಚಯ. ಟ್ರೇಲರ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ಈ ಚಿತ್ರದಲ್ಲಿ ಉಪ್ಪಿ ಸರ್ ಹಾಡಿರುವ ಹಾಡು ನನಗಿಷ್ಟ. ಎಲ್ಲಕ್ಕಿಂತ ನನ್ನ ಸ್ನೇಹಿತ ಸಂತೋಷ್ ಗೆ ಈ ಚಿತ್ರ
ಯಶಸ್ಸು ತಂದು ಕೊಡಲಿ ಎಂದು ಹಾರೈಸಿದರು ಶ್ರೀಮುರಳಿ.
ಚಿತ್ರ ಆರಂಭವಾದ ಬಗ್ಗೆ ಹಾಗೂ ಸಾಗಿ ಬಂದ ದಾರಿ ಕುರಿತು ನಿರ್ಮಾಪಕರಾದ ಯತೀಶ್ ವೆಂಕಟೇಶ್, ಗಣೇಶ್ ಪಾಪಣ್ಣ, ಶ್ರೀನಿವಾಸ್ ಶ್ರೀಭಕ್ತ ವಿವರಿಸಿದರು.
ಈ ಚಿತ್ರವನ್ನು ಮೊದಲು ತಮಿಳಿನಲ್ಲಿ ಮಾಡಬೇಕೆಂದುಕೊಂಡಿದ್ದೆ. ಚೆನ್ನೈ ನ ಹೈಕೋರ್ಟ್ ಎದುರು ಪ್ಯಾರಿಸ್ ಕಾರ್ನರ್ ಎಂಬ ಸ್ಥಳವಿದೆ. ಆ ಜಾಗವೇ ನನಗೆ ಕಥೆ ರಚಿಸಲು ಸ್ಪೂರ್ತಿ. ಇದೊಂದು ನೈಜ ಘಟನೆ ಆಧಾರಿತ ಚಿತ್ರ. ಕಥೆ ಸಿದ್ದ ಮಾಡಿಕೊಂಡ ಮೇಲೆ ನಿರ್ಮಾಪಕರ ಹುಡುಕಾಟದಲ್ಲಿ ಸಾಕಷ್ಟು ವರ್ಷ ಕಳೆದಿದ್ದೇನೆ. ನಂತರ ಗಣೇಶ್ ಪಾಪಣ್ಣ ಅವರು ಫೋನ್ ಮಾಡಿ ಕಥೆ ಕೇಳಿದರು. ಗಣೇಶ್,
ಯತೀಶ್, ಶ್ರೀನಿವಾಸ್ ಶ್ರೀಭಕ್ತ ಹಾಗೂ ಅಜಯ್ ಸಹ ಪರ್ಪಲ್ ರಾಕ್ ಸಂಸ್ಥೆ ಮೂಲಕ ಈ ಚಿತ್ರ ನಿರ್ಮಾಣಕ್ಕೆ ಮುಂದಾದರು. ಚಿತ್ರೀಕರಣ ಮುಗಿದ ತಕ್ಷಣ ಕೋವಿಡ್ ಶುರುವಾಯಿತು.
ಎಲ್ಲಾ ಮುಗಿದು , ಈಗ ನಮ್ಮ ಚಿತ್ರ ಮಾರ್ಚ್ ಹತ್ತರಂದು ತೆರೆಗೆ ಬರುತ್ತಿದೆ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಗೆಳೆಯ ಶ್ರೀಮುರಳಿ ಹಾಗೂ ನನ್ನ ಗೆಳೆತನ ದಶಕಕ್ಕೂ ಮೀರಿದ್ದು. ನಿರ್ಮಾಪಕರಿಗೆ ಹಾಗೂ ಚಿತ್ರತಂಡಕ್ಕೆ ನಾನು ಆಬಾರಿ ಎಂದರು ನಾಯಕ ಆರ್ಯನ್ ಸಂತೋಷ್. ಚಿತ್ರದ ನಿರ್ದೇಶಕ ಶಿವಗಣೇಶ್ ಚಿತ್ರ ಹಾಗೂ ಚಿತ್ರತಂಡದ ಬಗ್ಗೆ ಮೆಚ್ಚುಗೆಯ ಮಾತುಗಳಾಡಿದರು.
ಚಿತ್ರದ ನಾಯಕಿ ಅರ್ಚನಾ ಕೊಟ್ಟಿಗೆ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಅನೇಕ ಕಲಾವಿದರು. ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್, ಛಾಯಾಗ್ರಾಹಕ ವಿನೋದ್ ಭಾರತಿ ಸೇರಿದಂತೆ ಅನೇಕ ತಂತ್ರಜ್ಞರು “ಡಿಯರ್ ಸತ್ಯ” ನ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.