ಕನ್ನಡ ಚಿತ್ರರಂಗ ಈಗ ಎಂದಿಗಿಂತಲೂ ಶೈನ್ ಆಗಿದೆ. ಅದರಲ್ಲೂ ಬಹುಕೋಟಿ ವೆಚ್ಚದ ಚಿತ್ರಗಳು ರಿಲೀಸ್ ಅಗೋಕೆ ಸಾಲಾಗಿ ನಿಂತಿವೆ. ಅದಕ್ಕೆ ತಕ್ಕಂತಹ ವಿತರಣಾ ಸಂಸ್ಥೆಗಳು ಕೂಡ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಸಾಥ್ ನೀಡುತ್ತಿವೆ. ಆ ಸಾಲಿಗೆ ಈಗ ಕನ್ನಡದ ಸದಭಿರುಚಿಯ ಚಿತ್ರಗಳನ್ನು ಬಿಡುಗಡೆ ಮಾಡುವ ಮೂಲಕ ಪ್ರೇಕ್ಷಕರಲ್ಲಿ ಹೊಸ ಉತ್ಸಾಹ ತುಂಬುವ ನಿಟ್ಟಿನಲ್ಲಿ ಹೀಗೊಂದು ವಿತರಣೆ ಸಂಸ್ಥೆ ಸಜ್ಜಾಗಿದೆ. ಹೌದು, ಬೆಂಗಳೂರು ಕುಮಾರ್ ಫಿಲಂಸ್ ಎಂಬ ವಿತರಣೆ ಸಂಸ್ಥೆ ಚಿತ್ರರಂಗಕ್ಕೇನು ಹೊಸದಲ್ಲ. ಈಗಾಗಲೇ ಹಲವಾರು ಚಿತ್ರಗಳಿಗೆ ಮತ್ತು ಪ್ರೇಕ್ಷಕರಿಗೆ ಸೇತುವೆಯಾಗಿದೆ
ಅಂದಹಾಗೆ, ಬೆಂಗಳೂರು ಕುಮಾರ್ ಫಿಲಂಸ್ ಕಳೆದ ಹಲವಾರು ವರ್ಷಗಳಿಂದಲೂ ಕನ್ನಡದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಸಿನಿಮಾಗಳನ್ನು ವಿತರಣೆ ಮಾಡಿದೆ. ಆದರೆ, ಅವೆಲ್ಲವೂ ಹೇಳಿಕೊಳ್ಳುವಂತಹ ಬಿಜಿನೆಸ್ ಆಗಿರಲಿಲ್ಲ. ಈಗ ಕನ್ನಡದ ಹೊಸ ಬಗೆಯ ಸಿನಿಮಾಗಳೂ ಸೇರಿದಂತೆ, ದೊಡ್ಡ ಬಜೆಟ್ ನ ಸ್ಟಾರ್ ವ್ಯಾಲ್ಯು ಇರುವಂತಹ ಸಿನಿಮಾಗಲು ಹಾಗು ಸದಭಿರುಚಿಯ ಮತ್ತು ಉತ್ತಮ ಸಂದೇಶ ಸಾರುವ ಚಿತ್ರಗಳನ್ನು ವಿತರಣೆ ಮಾಡಲು ಮುಂದಾಗಿದೆ.
ಬೆಂಗಳೂರು ಕುಮಾರ್ ಫಿಲಂಸ್ ಹೆಸರಿನ ವಿತರಣೆ ಸಂಸ್ಥೆ ಮೂಲಕ ಕನ್ನಡದ ಸಿನಿಮಾಗಳನ್ನು ವಿತರಿಸಲು ಉತ್ಸಾಹಗೊಂಡಿದೆ. ಈಗಾಗಲೇ ಕನ್ನಡದಲ್ಲಿ ಹಲವು ವಿತರಣೆ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಕ್ವಾಲಿಟಿ ಹಾಗು ಕಂಟೆಂಟ್ ಸಿನಿಮಾಗಳನ್ನು ವಿತರಿಸಲು ಸಂಸ್ಥೆ ಈಗಾಗಲೇ ತಯಾರಿ ನಡೆಸಿದೆ.
ಹೊಸ ಪ್ರಯತ್ನಕ್ಕೆ ಈಗಾಗಲೇ ಬೆಂಬಲ ಸಿಕ್ಕಿದ್ದು, ಯಾವುದೇ ಚಿತ್ರಮಂದಿರಗಳ ಬಾಡಿಗೆ ಇಲ್ಲದೆ, ಪರ್ಸಂಟೇಜ್ ಮೂಲಕ ಎಲ್ಲಾ ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಿಕೊಡಲಿದ್ದಾರೆ. ಇನ್ನು, ಒಳ್ಳೆಯ ಕಂಟೆಂಟ್ ಇರುವ ಸಿನಿಮಾಗಳಿಗೆ ನಮ್ನ ಕಡೆಯಿಂದ ಫೈನಾನ್ಸಿಯಲ್ ಸಪೋರ್ಟ್ ಮಾಡಿ ರಿಲೀಸ್ ಮಾಡಿಕೊಡುತ್ತೇವೆ ಎಂಬುದು ಬೆಂಗಳೂರು ಕುಮಾರ್ ಫಿಲಂಸ್ ಮಾತು.
ಕುಮಾರ್
ಈಗ ವಿತರಣೆ ಮಾಡಲು ರೆಡಿಯಾಗಿದ್ದು, ಉಪೇಂದ್ರ ಅಭಿನಯದ ಹೋಮ್ ಮಿನಿಸ್ಟರ್ ಚಿತ್ರವನ್ನು ರಾಜ್ಯಾದ್ಯಂತ ರಿಲೀಸ್ ಮಾಡಲಾಗುತ್ತಿದೆ. ಕೆಲವು ಸಿನಿಮಾಗಲ ಜೊತೆ ಮಾತುಕತೆ ನಡೆಯುತ್ತಿದೆ. ಇದರ ಜೊತೆಗೆ ಸಂಸ್ಥೆ ನಿರ್ಮಾಣ ಕೂಡ ಮಾಡುತ್ತಿದೆ. ಈಗಾಗಲೇ ಪ್ರಜ್ವಲ್ ದೇವರಾಜ್ ಅವರ “ಮಾಫಿಯಾ” ಕೂಡ ತಯಾರಾಗುತ್ತಿದೆ. ಮುಂದಿನ ದಿನಗಳಲ್ಲಿ ಒಳ್ಳೆಯ ಸಿನಿಮಾಗಳನ್ನು ವಿತರಣೆ ಮಾಡುವುದರ ಜೊತೆಗೆ ನಿರ್ಮಾಪಕರ ಸಮಸ್ಯೆಗೆ ಸ್ಪಂದಿಸುವುದಾಗಿ ಹೇಳುತ್ತಾರೆ ಸಂಸ್ಥೆಯ ಕುಮಾರ್.