ಕಿಚ್ಚನ ಮತ್ತೊಂದು ಹೊಸ ದಾಖೆಲೆ!‌ ವಿಕ್ರಾಂತ್‌ ರೋಣ ಪಾತ್ರಕ್ಕೆ ಇಂಗ್ಲಿಷ್‌ನಲ್ಲಿ ಡಬ್ ಮಾಡಿದ ಸುದೀಪ್

ಕನ್ನಡ ಚಿತ್ರರಂಗದಲ್ಲಿ ಮತ್ತೆ ಕಲರವ ಶುರುವಾಗಿದೆ. ಕೊರೊನಾ ಹೊಡೆತಕ್ಕೆ ತತ್ತರಿಸಿದ್ದ ಚಿತ್ರರಂಗ ಈಗ ಮೆಲ್ಲನೆ ಚೇತರಿಸಿಕೊಂಡು, ಪುನಃ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆದುಕೊಳ್ಳುವಲ್ಲಿ ರೆಡಿಯಾಗಿದೆ. ಹೌದು, ಈಗಾಗಲೇ ಕನ್ನಡ ಸಿನಿಮಾ ಪ್ರಪಂಚದಲ್ಲೂ ಮಿನುಗತೊಡಗಿದೆ. ಈಗಾಗಲೇ ಅದಕ್ಕೆ ಸಾಕ್ಷಿಯಾಗಿ ‘ಕೆಜಿಎಫ್’ ಇದೆ. ಈಗ ‘ವಿಕ್ರಾಂತ್ ರೋಣ’ ಸಿನಿಮಾ ಕೂಡ ಸಾಕ್ಷಿಯಾಗುತ್ತಿದೆ. ಹೌದು, ಸುದೀಪ್‌ ಅಭಿನಯದ ವಿಕ್ರಾಂತ್‌ ರೋಣ ಈಗ ಮತ್ತೊಂದು ದಾಪುಗಾಲು ಇಟ್ಟಿದೆ. ಈ ಚಿತ್ರ ಇಂಗ್ಲೀಷ್ ಭಾಷೆಗೂ ಡಬ್ ಆಗಿದ್ದು, ವಿಶ್ವದ ಪ್ರಮುಖ ನಗರಗಳಲ್ಲಿ ಇಂಗ್ಲೀಷ್ ಅವತರಣಿಕೆಯಲ್ಲೇ ಬಿಡುಗಡೆಯಾಗಲು ಸಜ್ಜಾಗಿದೆ.‌

‘ವಿಕ್ರಾಂತ್ ರೋಣ’ ಪ್ಯಾನ್ ಇಂಡಿಯಾ ಸಿನಿಮಾ ಅನ್ನೋದು ಎಲ್ಲರಿಗೂ ಗೊತ್ತಿದೆ. ಈಗ ಅದು ವಿಶ್ವಮಟ್ಟದ ಸಿನಿಮಾ ಕೂಡ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಮಾತ್ರವಲ್ಲ, ಇದೀಗ ಇಂಗ್ಲೀಷ್ ಭಾಷೆಯಲ್ಲಿಯೂ ‘ವಿಕ್ರಾಂತ್ ರೋಣ’ ಬಿಡುಗಡೆಯಾಗಲಿದೆ ಎಂಬುದು ವಿಶೇಷ. ಅಂದಹಾಗೆ, ಇಂಗ್ಲೀಷ್ ಭಾಷೆಯಲ್ಲಿ ಸ್ವತಃ ಸುದೀಪ್ ಅವರೇ ತಮ್ಮ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ಕನ್ನಡದ ನಟರೊಬ್ಬರು ಕಮರ್ಷಿಯಲ್ ಸಿನಿಮಾಕ್ಕೆ ಇಂಗ್ಲೀಷ್‌ನಲ್ಲಿ ಡಬ್ ಮಾಡಿರುವುದು ಇದೇ ಮೊದಲು. ಹಾಗಾಗಿ ಇದೊಂದು ದಾಖಲೆಯೇ ಹೀಗೆ ಕಮರ್ಷಿಯಲ್ ಸಿನಿಮಾ ಒಂದರ ಪಾತ್ರಕ್ಕಾಗಿ ಪೂರ್ಣ ಇಂಗ್ಲೀಷ್‌ನಲ್ಲಿ ಡಬ್ ಮಾಡಿದ ಭಾರತೀಯ ಕಲಾವಿದರು ಬಹಳ ವಿರಳ. ಈ ವಿರಳ ಕಲಾವಿದರ ಪಟ್ಟಿಗೆ ಈಗ ಸುದೀಪ್ ಸಹ ಸೇರಿಕೊಂಡಿದ್ದಾರೆ.

ಸುದೀಪ್ ಅವರು ‘ವಿಕ್ರಾಂತ್ ರೋಣ’ ಸಿನಿಮಾಕ್ಕಾಗಿ ಇಂಗ್ಲೀಷ್‌ನಲ್ಲಿ ಡಬ್ಬಿಂಗ್ ಮಾಡುತ್ತಿರುವ ವಿಡಿಯೋ ಒಂದನ್ನು ಸಿನಿಮಾದ ನಿರ್ದೇಶಕ ಅನುಪ್ ಭಂಡಾರಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಸಿನಿಮಾದ ಒಂದು ಸಣ್ಣ ತುಣುಕನ್ನು ಸಹ ವಿಡಿಯೋದಲ್ಲಿ ಸೇರಿಸಿದ್ದಾರೆ. ಸುದೀಪ್ ಕಂಠದಲ್ಲಿ ಕನ್ನಡ ಮಾತ್ರವಲ್ಲ ಇಂಗ್ಲೀಷ್ ಡೈಲಾಗ್ ಸಖತ್‌ ಖಡಕ್‌ ಆಗಿದೆ. ‘ವಿಕ್ರಾಂತ್ ರೋಣ’ ಸಿನಿಮಾದ ಚಿತ್ರೀಕರಣ ಆರಂಭವಾದಾಗಿನಿಂದಲೂ ಸಿನಿಮಾ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.

ಟೀಸರ್ ಕೂಡ ದುಬೈನ ಬುರ್ಜ್‌ ಖಲೀಫಾದ ಮೇಲೆ ಬಿಡುಗಡೆ ಮಾಡಲಾಗಿತ್ತು. ಕನ್ನಡದ ಮಟ್ಟಿದೆ ಇದೊಂದು ದಾಖಲೆಯಾಗಿ ಉಳಿದಿದೆ. ವಿಕ್ರಾಂತ್ ರೋಣ’ ಆಕ್ಷನ್ ಥ್ರಿಲ್ಲರ್ ಸಿನಿಮಾ. ಅನೂಪ್ ಭಂಡಾರಿ ನಿರ್ದೇಶನದ ಈ ಚಿತ್ರದಲ್ಲಿ ನಿರೂಪ್ ಭಂಡಾರಿ, ರವಿಶಂಕರ್, ನೀತಾ ಅಶೋಕ್, ಶ್ರದ್ಧಾ ಶ್ರೀನಾಥ್ ಇತರರು ಇದ್ದಾರೆ. ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಕೂಡ ಹೈಲೈಟ್‌ ಆಗಿದ್ದಾರೆ. ಜಾಕ್ ಮಂಜು ನಿರ್ಮಾಣವಿದೆ.

Related Posts

error: Content is protected !!