ಅಪೂರ್ವ ನಿರ್ದೇಶನ! ಕನ್ನಡಕ್ಕೆ ಮತ್ತೊಬ್ಬ ನಿರ್ದೇಶಕಿ ಬಂದ್ರು…

ಅಪೂರ್ವ, ವಿಕ್ಟರಿ, ಕೃಷ್ಣ ಟಾಕೀಸ್ ಖ್ಯಾತಿಯ ನಟಿ ಅಪೂರ್ವ ಈಗ ನಿರ್ದೇಶಕಿಯಾಗಿದ್ದಾರೆ.
ಕನ್ನಡ ಚಿತ್ರರಂಗದ ನಿರ್ದೇಶಕಿಯರ ಸಾಲಿಗೆ ಮತ್ತೊಂದು ಯುವ ನಿರ್ದೇಶಕಿ ಸೇರ್ಪಡೆಯಾದಂತಾಗಿದೆ.


“ಓ ನನ್ನ ಚೇತನ ” ಸ್ಮಾರ್ಟ್ ಪೋನ್ ಜೀವನ ಅನ್ನೊ ಅಡಿ ಬರಹವಿರೋ ಈ ಚಿತ್ರವನ್ನ ಅಪೂರ್ವ, ಇಂದಿನ ಮಕ್ಕಳು ಹಾಗೂ ಸ್ಮಾರ್ಟ್ ಪೋನ್ ವಿಚಾರವನ್ನಿಟ್ಟುಕೊಂಡು ಚಿತ್ರವನ್ನ ನಿರ್ದೇಶಿಸಿದ್ದಾರೆ. ಅಪೂರ್ವ ಚೊಚ್ಚಲ ನಿರ್ದೆಶನದ ಚಿತ್ರಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಸಿಕ್ಕಿದೆ.

ಬೆಂಗಳೂರು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಓ‌ ನನ್ನ ಚೇತನ ಆಯ್ಕೆಯಾಗಿದ್ದು, ಮಾರ್ಚ್ 9 ರಂದು 3:15ಕ್ಕೆ ಒರಾಯನ್ ಮಾಲ್ ಪಿವಿಆರ್ ನಲ್ಲಿ ಪ್ರದರ್ಶನವಾಗಲಿದೆ.

ಓ ನನ್ನ ಚೇತನ ಚಿತ್ರಕ್ಕೆ ನಿರ್ದೇಶಕ ಹರಿಸಂತು ಕಥೆ ಚಿತ್ರಕಥೆ ಸಂಭಾಷಣೆ ಬರೆದಿದ್ದು, ಗುರುಪ್ರಶಾಂತ್ ರೈ ಛಾಯಾಗ್ರಹಣವಿದೆ. ಪ್ರದೀಪ್ ವರ್ಮಾ ಸಂಗೀತ, ಕೆ.ಎಂ. ಪ್ರಕಾಶ್ ಅವರ ಸಂಕಲನ ಚಿತ್ರಕ್ಕಿದೆ.
ಎಸ್ ಅಂಡ್ ಎಸ್ ಎಂಟರ್ ಪ್ರೈಸಸ್ ಬ್ಯಾನರ್ ಅಡಿಯಲ್ಲಿ ದೀಪಕ್,ಸಾಯಿ ಅಶೋಕ್,ಹರೀಶ್,ಪ್ರಶಾಂತ್ ನಿರ್ಮಾಣ ಮಾಡಿದ್ದಾರೆ.

ಮಾಸ್ಟರ್ ಪ್ರತೀಕ್, ಬೇಬಿ ಡಿಂಪನಾ, ಮಾಸ್ಟರ್ ಶೌರ್ಯ, ಮಾಸ್ಟರ್ ಹರ್ಷ ಮುಖ್ಯಭೂಮಿಕೆಯಲ್ಲಿರೋ
ಓ ನನ್ನ ಚೇತನ ಚಿತ್ರವನ್ನ, ಎಲ್ಲಾ ಬಗೆಯ ರಂಜನೀಯ ಅಂಶಗಳೊಂದಿಗೆ ಕರ್ಮಷಿಯಲ್ ಚೌಕಟ್ಟಿನಲ್ಲೇ ಮಾಡಲಾಗಿದೆ. ಇದೀಗ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿರೋ ಚಿತ್ರತಂಡ, ಸದ್ಯದಲ್ಲೇ ಟ್ರೈಲರ್ ನ ರಿಲೀಸ್ ಮಾಡಲಿದೆ.

Related Posts

error: Content is protected !!