ಕನ್ನಡದಲ್ಲಿ ಇತ್ತೀಚೆಗೆ ಸಿನಿಮಾಗಳು ರಿಲೀಸ್ ಆಗುವ ಮೊದಲೇ ಸದ್ದು ಮಾಡುತ್ತವೆ. ಅಂತಹ ಸಿನಿಮಾಗಳ ಸಾಲಿಗೆ ಅಘೋರ ಚಿತ್ರವೂ ಸೇರಿದೆ. ಆರಂಭದಲ್ಲಿ ಶೀರ್ಷಿಕೆಯೊಂದಿಗೇ ಸದ್ದು ಮಾಡಿದ “ಅಘೋರ” ವಿಭಿನ್ನ ಕಥೆ ಹೊಂದಿರುವ ಚಿತ್ರ. ಹೊಸತನಗಳಿಂದ ಕೂಡಿರುವ ಹೊಸಬರ ತಂಡ ಹೊಸ ರಿಲೀಸ್ ಡೇಟ್ನೊಂದಿಗೆ ಈಗ ಮತ್ತೆ ಸುದ್ದಿಯಲ್ಲಿದೆ.
ಹೌದು, ಅಘೋರ ಫೆಬ್ರವರಿ 25ರಂದು ಬಿಡುಗಡೆ ಆಗಲಿದೆ ಎಂದು ಹೇಳಲಾಗಿತ್ತು. ಆದರೆ ಅದರ ಬದಲು ಮಾರ್ಚ್ 4ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಮೋಕ್ಷ ಸಿನಿಮಾಸ್ ಬ್ಯಾನರಲ್ಲಿ ನಿರ್ಮಾಣವಾಗಿರುವ “ಅಘೋರ” ಚಿತ್ರವನ್ನು ಪ್ರಮೋದ್ ರಾಜ್ ಎನ್. ಎಸ್ ನಿರ್ದೆಶಿಸಿದ್ದಾರೆ. ಚಿತ್ರ ನಿರ್ದೆಶಕರಾಗುವ ಮೊದಲು ಪ್ರಮೋದ್ ಹಲವು ಚಿತ್ರಗಳಲ್ಲಿ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ಇತ್ತೀಚೆಗೆ ಸ್ಯಾಂಡಲ್ವುಡ್ನಲ್ಲಿ ಸಿನಿಮಾ ಪ್ರಚಾರವನ್ನು ಹೊಸ ಹೊಸ ರೀತಿಯಲ್ಲಿ ಮಾಡುತ್ತಿದ್ದಾರೆ.
ಈಗ ಮೆಟ್ರೋ ನಿಲ್ದಾಣಕ್ಕೂ ಸಿನಿಮಾದ ಪಬ್ಲಿಸಿಟಿ ಎಂಟ್ರಿ ಕೊಟ್ಟಿದೆ. ಈ ಹಿಂದೆ ಕೆಲ ಸಿನಿಮಾಗಳು ಮಾತ್ರ ಮೆಟ್ರೊ ನಿಲ್ದಾಣದಲ್ಲಿ ಪ್ರಚಾರ ಮಾಡಿದ್ದವು. ಈ ಸಿನಿಮಾಗಳ ಸಾಲಿಗೆ ಈಗ “ಅಘೋರ” ಸಿನಿಮಾ ತಂಡವೂ ಸಹ ಸೇರಿಕೊಂಡಿದೆ. ಬೆಂಗಳೂರಿನ ಹಲವು ಮೆಟ್ರೊ ನಿಲ್ದಾಣಗಳಲ್ಲಿ ಚಿತ್ರದ ಸ್ಟ್ಯಾಂಡೀಸ್ ನಿಲ್ಲಿಸುವ ಮೂಲಕ ಸಿನಿಪ್ರೇಮಿಗಳ ಗಮನ ಸೆಳೆಯುತ್ತಿದೆ.
ಹಾರರ್ ಕಥೆವುಳ್ಳ ಈ ಸಿನೆಮಾದಲ್ಲಿ ಸಾವಿನ ಮುನ್ಸೂಚನೆ ಹಾಗೂ ಸತ್ತ ನಂತರದ ಆಗು ಹೋಗುಗಳನ್ನು ರಿಸರ್ಚ್ ಮಾಡಿ ಕಥೆ ಮಾಡಿದ್ದಾರೆ ನಿರ್ದೇಶಕ ಪ್ರಮೋದ್. ಪಂಚ ಭೂತಗಳಾದ ಆಕಾಶ, ನೀರು, ಗಾಳಿ, ಅಗ್ನಿ, ಪ್ರಕೃತಿ ಕೂಡ ‘ಅಘೋರ”ದಲ್ಲಿ ಪಾತ್ರಧಾರಿಗಳಾಗಿದ್ದು, ಅದು ಚಿತ್ರದ ಹೈಲೈಟ್ಸ್ . ಪ್ರಕೃತಿಯೊಂದಿಗಿನ ಬದುಕು ಯಾಕೆ? ಸಾವು ಏಕೆ ಅನಿವಾರ್ಯ? ಇದನ್ನೆಲ್ಲ ಮಾಡುವವರಾರು ಎಂಬುದು ಯಾರಿಗೂ ತಿಳಿಯದ ನಿಗೂಢ. ಆದರೆ ಕರ್ಮವೆಂಬುದು ಯಾರನ್ನು ಬಿಡುವುದಿಲ್ಲ ಎನ್ನುವುದೇ ಸಿನಿಮಾದ ಸಾರಾಂಶ.
ಅಘೋರಿಯ ಪಾತ್ರದಲ್ಲಿ ಹಿರಿಯ ನಟ ಅವಿನಾಶ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ, ಅಶೋಕ್ ಶರ್ಮಾ, ಪುನೀತ್ ಗೌಡ, ರಚನಾ ದಶರಥ್, ದ್ರವ್ಯ ಶೆಟ್ಟಿ ಪ್ರಮುಖ ನಟಿಸಿದ್ದಾರೆ. ಶರತ್ ಜಿ ಕ್ಯಾಮೆರಾ ಕೆಲಸ ಕುತೂಹಲ ಮೂಡಿಸಿದೆ. ಈಗಾಗಲೇ ಟ್ರೇಲರ್ ಮೂಲಕವೇ ಅಘೋರ ನಿರೀಕ್ಷೆ ಹೆಚ್ಚಿಸಿದೆ.
ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ ಹಾಗು ಸಂಗೀತ ಚಿತ್ರಕ್ಕಿದೆ. ಎಲ್ .ಆರ್. ಜೀವನ್ ಸಂಭಾಷಣೆ ಬರೆದಿದ್ದಾರೆ. ಎ ಆರ್ ರೆಹಮಾನ್ ಬಳಿ ಕೆಲಸ ಮಾಡಿರುವ ಎ ಬಿ ಮುರುಳೀಧರನ್ ಹಾಗೂ ರಾಮ್ ಗೋಪಾಲ್ ವರ್ಮಾ ಬಳಿ ಕೆಲಸ ಮಾಡಿರುವ ಪ್ರವೀಣ್ ಬಿಜಿಎಂ ವರ್ಕ್ ಮಾಡಿದ್ದಾರೆ.
ತ್ಯಾಗರಾಜ್ ಚಿತ್ರಕ್ಕೆ ಶೀರ್ಷಿಕೆ ಸಂಗೀತ ನೀಡಿದ್ದಾರೆ. ಸಂಚಿತ್ ಹೆಗ್ಡೆ, ಸರಿಗಮಪ ಖ್ಯಾತಿಯ ಹನುಮಂತ, ಸಚಿನ್ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಚಿತ್ರಕ್ಕೆ ಯುಡಿವಿ ವೆಂಕಟೇಶ್ ಸಂಕಲನವಿದೆ. ಮಾಸ್ ಮಾದ ಅವರ ಸಾಹಸವಿದೆ. ಚಿತ್ರದ ಟ್ರೇಲರ್ ಎಲ್ಲೆಡೆ ಸದ್ದು ಮಾಡಿದ್ದು ಇದೇ ಮಾರ್ಚ್ 4ರಂದು ಕೆಆರ್ಜಿ ಸ್ಟುಡಿಯೋಸ್ ಮೂಲಕ ರಿಲೀಸ್ ಆಗಲಿದೆ.