ಶ್ರೀಲೀಲ ಈಗ ಮಹಾತಾಯಿ! ಇಬ್ಬರು ಮಕ್ಕಳನ್ನು ದತ್ತು ಪಡೆದ ನಟಿ…


ನಟಿ ಶ್ರೀಲೀಲಾ ಭಾವುಕರಾಗಿದ್ದಾರೆ! ಅರೇ ಅವರೇಕೆ ಹಾಗಾದರು ಎಂಬ ಪ್ರಶ್ನೆ ಸಹಜ. ಆದರೆ, ಅವರು ಭಾವುಕರಾಗಿರೋದು ನಿಜ. ಹಾಗಂತ ಅದು ಸಿನಿಮಾ ದೃಶ್ಯದಲ್ಲಲ್ಲ. ಬದಲಾಗಿ ರಿಯಲ್‌ ಆಗಿ ಭಾವುಕರಾಗಿದ್ದಾರೆ. ಅಂದಹಾಗೆ, ವಿಷಯ ಏನೆಂದರೆ, ಶ್ರೀ ಲೀಲ ಅವರು ಇಬ್ಬರು ದಿವ್ಯಾಂಗ ಮಕ್ಕಳನ್ನು ದತ್ತು ಪಡೆದಿದ್ದಾರೆ.

ಹೌದು, ಶ್ರೀಲೀಲ ಅವರು ಮಾತೃಶ್ರೀ ಮನೋವಿಕಾಸ ಕೇಂದ್ರದ ಇಬ್ಬರು ಮಕ್ಕಳನ್ನು ದತ್ತು ಪಡೆಯುವ ಮೂಲಕ ಭಾವುಕ ಕ್ಷಣಗಳನ್ನು ಅನುಭವಿಸಿದ್ದಾರೆ. ಮಾತೃಶ್ರೀ ಮನೋವಿಕಾಸ ಕೇಂದ್ರದ ಎಂಟು ತಿಂಗಳ ಮಗು ಗುರು ಮತ್ತು ಶೋಭಿತ ಎನ್ನುವ ಹೆಣ್ಣು ಮಗಳನ್ನು ದತ್ತು ಪಡೆದ ಶ್ರೀಲಿಲ ಕಣ್ತುಂಬಿಕೊಂಡಿದ್ದಾರೆ. ಬೈ ಟು ಲವ್ ಚಿತ್ರದಲ್ಲಿ ಮಗುವಿನ ಜೊತೆ ನಟಿಸಿರುವ ಶ್ರೀಲೀಲ, ಆ ಮಗುವಿನೊಂದಿಗೆ ಬೆಸೆದಿದ್ದ ಬಂಧ ಮತ್ತು ಮಾತೃ ಶ್ರೀ‌ಮನೋವಿಕಾಸ ಕೇಂದ್ರದಲ್ಲಿ ಆ ಮಕ್ಕಳನ್ನು ನೋಡಿದ ಕ್ಷಣವೇ ಅವರು ಭಾವುಕರಾದರು.

ಅದೇ ಫೀಲಿಂಗ್‌ನಲ್ಲಿದ್ದ ಅವರು ಇಬ್ಬರು ಮಕ್ಕಳನ್ನ ದತ್ತು ಪಡೆದು ಇತರರಿಗೆ ಮಾದರಿಯಾಗಿ, ಸ್ಫೂರ್ತಿ ತುಂಬಿದ್ದಾರೆ. ಈ ವೇಳೆ ಬೈ ಟು ಲವ್ ಚಿತ್ರದ ನಿರ್ದೇಶಕ‌ ಹರಿ ಸಂತು ಅವರು ನಟಿ ಶ್ರೀಲೀಲ ಅವರಿಗೆ ಸಾಥ್‌ ನೀಡಿದರು. ಅಂದಹಾಗೆ, ಶ್ರೀಲೀಲ ಅಭಿನಯದ ಬೈಟು ಲವ್ ಚಿತ್ರಕ್ಕೂ ಮಕ್ಕಳಿಗೂ ವಿಶೇಷ ನಂಟಿದ್ದು, ಈ‌ ಸಿನಿಮಾ ಇಂದಿನ ಪೀಳಿಗೆಗೆ ಬದುಕಿನ ಪಾಠ ಮಾಡಲಿದಯಂತೆ. ಅಂತಹ ವಿಶೇಷ ವಿಚಾರಗಳು ಚಿತ್ರದಲ್ಲಿವೆ ಎಂಬುದು ಶ್ರೀಲೀಲ ಮಾತು. ಬೈ ಟು ಲವ್ ಚಿತ್ರ ಫೆಬ್ರವರಿ 18ಕ್ಕೆ ರಾಜ್ಯದಾದ್ಯಂತ ರಿಲೀಸ್ ಆಗ್ತಿದೆ.

Related Posts

error: Content is protected !!