ವಿಷ್ಣು ಪುತ್ಥಳಿ ಎದುರು ಅಭಿಮಾನಿ ಮದ್ವೆ; ಈ ರೀತಿಯ ಆದರ್ಶ ವಿವಾಹ ಇದೇ ಮೊದಲು!

ಸಿನಿಮಾ ನಟರೆಂದರೆ ಅದೇನೋ ಗೊತ್ತಿಲ್ಲ. ಒಂದಷ್ಟು ಅಭಿಮಾನಿಗಳು ಪ್ರೀತಿಯ ಅಭಿಮಾನ ತೋರಿಸುತ್ತಾರೆ. ಅದರಲ್ಲೂ ನಾಯಕ ನಟರನ್ನು ಆರಾಧ್ಯ ದೈವ ಅನ್ನುವಂತೆಯೇ ಆರಾಧಿಸುತ್ತಾರೆ. ಅಂತೆಯೇ ನಾಯಕ ನಟರು ಕೂಡ ಅಭಿಮಾನಿಗಳನ್ನೂ ದೇವರು ಅಂತಾನೂ ಕರೆಯುತ್ತಾರೆ. ಅವರಿಂದಲೇ ನಾವು ಅನ್ನುತ್ತಲೇ ಸದಾ ಫ್ಯಾನ್ಸ್‌ ಖುಷಿಪಡಿಸುವಂತಹ ಸಿನಿಮಾ ಕೊಡುವಲ್ಲಿ ನಿರತರಾಗುತ್ತಾರೆ. ಇಲ್ಲೀಗ ಹೇಳ ಹೊರಟಿರುವ ವಿಷಯ ಅಂದರೆ, ಅದು ಡಾ.ವಿಷ್ಣುವರ್ಧನ್‌ ಅವರ ಅಪ್ಪಟ ಅಭಿಮಾನಿಯೊಬ್ಬರ ಬಗ್ಗೆ.

ಹೌದು, ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ತೋರಣಗಟ್ಟೆ ಎಂಬ ಗ್ರಾಮದಲ್ಲಿ ಡಾ.ವಿಷ್ಣುವರ್ಧನ್‌ ಅವರ ಅಪ್ಪಟ ಅಭಿಮಾನಿಯೊಬ್ಬ ಡಾ.ವಿಷ್ಣುವರ್ಧನ್‌ ಅವರ ಪುತ್ಥಳಿ ಎದುರೇ ಮದುವೆ ಆಗುವ ಮೂಲಕ ವಿಶೇಷ ಪ್ರೀತಿ ತೋರಿದ್ದಾರೆ. ನಿಜಕ್ಕೂ ಇದು ವಿಷ್ಣುವರ್ಧನ್‌ ಮೇಲಿನ ಅತಿಯಾದ ಪ್ರೀತಿ ಮತ್ತು ಗೌರವಕ್ಕೆ ಸಾಕ್ಷಿ ಎನ್ನಬಹುದು.

ಶುಕ್ರವಾರ ಬೆಳಗ್ಗೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ತೋರಣಗಟ್ಟೆ ಗ್ರಾಮದ ಡಾ.ವಿಷ್ಣುವರ್ಧನ್ ಅವರ ಅಭಿಮಾನಿ ನಾಗರಾಜ್ ಕೆಸಿ ಎಂಬುವವರು ದೇವಸ್ಥಾನ ಅಥವಾ ಕಲ್ಯಾಣ ಮಂಟಪದಲ್ಲಿ ವಿವಾಹ ಆಗಬಹುದಿತ್ತು. ಆದರೆ, ಅದರ ಬದಲಾಗಿ ಅವರು ಡಾ.ವಿಷ್ಣು ಅವರ ಪುತ್ಥಳಿ ಎದುರು ವಿವಾಹವಾಗುವ ಮೂಲಕ ತಮ್ಮ ಅಭಿಮಾನ ತೋರಿದ್ದಾರೆ. ಅಂದಹಾಗೆ, ಈ ರೀತಿಯ ಮದುವೆ ಇದೇ ಮೊದಲು ಅನ್ನೋದು ವಿಶೇಷ.

Related Posts

error: Content is protected !!