ಖಡಕ್‌ ಹಾಡಿಗೆ ಟೈಗರ್‌ ಸಾಥ್!‌ ಫಸ್ಟ್‌ ಟೈಮ್ ಧರ್ಮ ಪೊಲೀಸ್‌ ಅಧಿಕಾರಿ…

ಧರ್ಮ ಕೀರ್ತಿರಾಜ್‌ ಅವರನ್ನು ಕ್ಯಾಟ್‌ಬರೀಸ್‌ ಅಂತ ಕರೆಯುವುದುಂಟು. ಅದರಲ್ಲೂ ಅವರನ್ನು ಆಕ್ಷನ್‌ ಬಾಯ್‌ ಆಗಿ ನೋಡಿದವರಿಲ್ಲ. ಲವರ್‌ಬಾಯ್‌ ಆಗಿಯೇ ಅವರು ಕಾಣಿಸಿಕೊಂಡಿರೋದುಂಟು. ಈಗ ಅವರು ಪಕ್ಕಾ ರಗಡ್‌ ಲುಕ್‌ ನಲ್ಲಿ ಕಾಣಿಸಿಕೊಂಡಿರುವ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಹೌದು, ಅದರ ಹೆಸರು ಖಡಕ್.‌ ಇತ್ತೀಚೆಗೆ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಖಡಕ್‌ ಚಿತ್ರದ ಹಾಡು ಬಿಡುಗಡೆಗೆ ನಟ ವಿನೋದ್‌ ಪ್ರಭಾಕರ್‌, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌, ಪ್ರಥಮ್‌ ಸೇರಿದಂತೆ ಹಲವರು ಆಗಮಿಸಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ.

ಚಿತ್ರರಂಗ ಕೊರೋನ ಸಮಯದಲ್ಲಿ ಸಾಕಷ್ಟು ನಷ್ಟ ಅನುಭವಿಸಿದೆ. ಈಗ ಮತ್ತೆ ಚಿತ್ರರಂಗದ ಚಟುವಟಿಕೆಗಳು ಗರಿಗೆದರುತ್ತಿದೆ. ನಿರ್ಮಾಪಕ ವಲ್ಲಿ, ನನ್ನ ಅನೇಕ ಚಿತ್ರಗಳಿಗೆ ವಸ್ತ್ರಾಲಂಕಾರ ಮಾಡಿದ್ದಾರೆ. ತಾವು ಚಿತ್ರರಂಗದಲ್ಲಿ ದುಡಿದ ದುಡ್ಡನ್ನು ಮತ್ತೆ ಚಿತ್ರರಂಗಕ್ಕೆ ಹಾಕುತ್ತಿದ್ದಾರೆ. ಅವರ ಈ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು ಎಂದು ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.

ನಟ ವಿನೋದ್‌ ಪ್ರಭಾಕರ್‌ ಮಾತನಾಡಿ, ಟ್ರೇಲರ್ ಹಾಗೂ ಹಾಡುಗಳು ಚೆನ್ನಾಗಿವೆ. ನನ್ನ ಹಾಗೂ ಧರ್ಮನ ಸ್ನೇಹ ತುಂಬಾ ವರ್ಷಗಳದ್ದು. ನಾನು ಇಲ್ಲಿಗೆ ಬರಲು ಆ ಸ್ನೇಹವೇ ಕಾರಣ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು ಅವರು. ಈ ವೇಳೆ ನಟ ಪ್ರಥಮ್ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಇದೊಂದು ಆಕ್ಷನ್ ಥ್ರಿಲ್ಲರ್ ಚಿತ್ರ. ಇದೇ ಮೊದಲ ಬಾರಿ ನಾನು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ ನೋಡಿ ಹಾರೈಸಿ ಎಂದರು ನಾಯಕ ಧರ್ಮ ಕೀರ್ತಿರಾಜ್. ತಮ್ಮ ಪಾತ್ರದ ಬಗ್ಗೆ ನಾಯಕಿ ಅನೂಶ ರೈ ವಿವರಿಸಿದರು. ಸಂಗೀತ ಕುರಿತು ಎಂ.ಎನ್ ಕೃಪಾಕರ್ ಮಾತನಾಡಿದರು.

ನಂದಿನಿ ಕಂಬೈನ್ಸ್ ಮೂಲಕ ವಲ್ಲಿ ಹಾಗೂ ಸಿದ್ದರಾಮಯ್ಯ ಸಿಂಗಾಪುರ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಟಿ.ಎನ್ ನಾಗೇಶ್ ನಿರ್ದೇಶಿಸಿದ್ದಾರೆ. ಶಂಕರ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಚಿತ್ರದಲ್ಲಿ ಕಬೀರ್ ದುಹಾನ್ ಸಿಂಗ್, ಸುಮನ್, ಕಮಲ್ ಇತರರು ಇದ್ದಾರೆ. ನಮ್ಮ ಮ್ಯೂಸಿಕ್ ಸಂಸ್ಥೆ ಮೂಲಕ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ.

Related Posts

error: Content is protected !!