“ಸದ್ದು ವಿಚಾರಣೆ ನಡೆಯುತ್ತಿದೆ…” ಹೀಗೊಂದು ಆಕರ್ಷಕ ಶೀರ್ಷಿಕೆ ಇಟ್ಟುಕೊಂಡು ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೇಳೋದಿಕ್ಕೆ ಉತ್ಸಾಹಿ ಕಲಾವಿದರ ತಂಡ ಸಜ್ಜಾಗಿದೆ. ಕೊರೊನಾ ವೈರಸ್ ಹಾವಳಿ ಇಲ್ಲದೇ ಹೋಗಿದ್ದರೆ ಇಷ್ಟರಲ್ಲಾಗಲೇ ಸದ್ದು ವಿಚಾರಣೆ ನಡೆಯುತ್ತಿದೆ ಸಿನಿಮಾದ ಹಾವಳಿ ತೆರೆಮೇಲೆ ಬರಬೇಕಿತ್ತು. ಸದ್ಯಕ್ಕೀಗ ಸಿನಿಮಾ ಶೂಟಿಂಗ್ ಮುಗಿಸಿದೆ. ಡಾಲಿ ಧನಂಜಯ್ ಇತ್ತೀಚೆಗೆ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಮಗಳು ಜಾನಕಿ ಸೀರಿಯಲ್ ಮೂಲಕ ಮನೆ ಮನಸು ತಲುಪಿರುವ ರಾಕೇಶ್ ಮಯ್ಯ ಈ ಸಿನಿಮಾದಲ್ಲಿ ಹೀರೋ . ರಾಕೇಶ್ ಗೆ ಜೋಡಿಯಾಗಿ ‘ಗೊಂಬೆಗಳ ಲವ್’ ಸಿನಿಮಾ ಖ್ಯಾತಿಯ ಪಾವನಾ ಗೌಡ ನಟಿಸಿದ್ದಾರೆ. ಉಳಿದಂತೆ ಅಚ್ಯುತ ಕುಮಾರ್ , ಕೃಷ್ಣ ಹೆಬ್ಬಾಳೆ, ಮಧು ನಂದನ್ , ಜಹಾಂಗೀರ್, ರಾಘು ಶಿವಮೊಗ್ಗ ,ರೋಹಿಣಿ ರಘುನಂದನ್ ಇನ್ನೂ ಮುಂತಾದವರು ನಟಿಸಿದ್ದಾರೆ.
ಶ್ರೀಮಾನ್ ಶ್ರೀಮತಿ ಸೀರಿಯಲ್ ಹಾಗೂ ಲೌಡ್ ಸ್ಪೀಕರ್, ಕೃಷ್ಣ ಗಾರ್ಮೆಂಟ್, ಫೋರ್ ವಾಲ್ಸ್ ಸಿನಿಮಾಗಳಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಭಾಸ್ಕರ್ ಆರ್ ನೀನಾಸಂ ಸದ್ದು ವಿಚಾರಣೆ ಸಿನಿಮಾ ಮೂಲಕ ನಿರ್ದೇಶನದ ಅಖಾಡಕ್ಕೆ ಧುಮುಕಿದ್ದಾರೆ. ಇದು ಇವರ ನಿರ್ದೇಶನದ ಮೊದಲ ಸಿನಿಮಾವಾಗಿದೆ.
ಅಶ್ವಿನಿ ಕೆ ಎನ್ ಕಥೆ, ದಕ್ಷಿಣ ಮೂರ್ತಿ ಸಂಭಾಷಣೆ , ರಾಜ್ ಕಾಂತ ಕ್ಯಾಮೆರಾ, ಸಚೀನ್ ಬಸ್ರೂರ್ ಮ್ಯೂಸಿಕ್, ಶಶೀಧರ್ ಪಿ ಸಂಕಲನ,
ಗಂಗಮ್ ರಾಜ್ ಕೊರಿಯೋಗ್ರಾಫಿ, ಅರ್ಜುನ್ ರಾಜ್ ಸಾಹಸ, ಅಶ್ವಿನಿ ಕೆ ಎನ್, ಪ್ರಮೋದ್ ಮರವಂತೆ ಸಾಹಿತ್ಯ , ರವಿ ಬಸ್ರೂರ್
ಸಚಿನ್ ಬಸ್ರೂರ್ ಗಾಯನ ಸಿನಿಮಾದಲ್ಲಿರಲಿದೆ.
ಪ್ರೇಮ್ ಕುಮಾರ್ ಸಹ ನಿರ್ದೇಶನವಿದೆ. ಎಂ ಎಂ ಸಿನಿಮಾಸ್ ಬ್ಯಾನರ್ ನಡಿ ಸುರಭಿ ಲಕ್ಷ್ಮಣ್ ಬಂಡವಾಳ ಹೂಡಿದ್ದಾರೆ. ಪ್ರತಿಭಾನ್ವಿತ ತಂಡವೇ ಸೇರಿ ಮಾಡಿರುವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಕೊರೊನಾ ಕೊಂಚ ಕಡಿಮೆಯಾ ಬಳಿಕ ಚಿತ್ರ ಬಿಡುಗಡೆಯಾಗಲಿದೆ.