ಉತ್ತರ ಪ್ರದೇಶದ ಹನುಮ ದೇವಾಲಯದಲ್ಲಿ ಭೈರವನಿಗೆ ಪೂಜೆ! ಸಂಕ್ರಾಂತಿಗೆ ಹೊಸಬರ ಸಿನಿಮಾ ಶುರು…

ಸಂಕ್ರಾಂತಿ ಹಬ್ಬದಂದೇ ಭಜರಂಗಿ ಆಶೀರ್ವಾದ ಪಡೆದು “ಭೈರವ” ಚಿತ್ರಕ್ಕೆ ಚಾಲನೆ ದೊರೆತಿದೆ. ಶುಕ್ರವಾರ ಮುಹೂರ್ತ ನಡೆಸಿ ಶೂಟಿಂಗ್‌ ಚಟುವಟಿಕೆ ಶುರುಮಾಡಿದೆ. ಈ ಹಿಂದೆ ಮುಂಬೈನಲ್ಲಿ ಟೈಟಲ್ ಲಾಂಚ್ ಮಾಡಿ ಸುದ್ದಿಯಾಗಿದ್ದ ರಾಮತೇಜ್ ನಿರ್ದೇಶನದ ಭೈರವ ಇಂದು ಮೂಹರ್ತ ಕಾರ್ಯ ಮಾಡುವ ಮೂಲಕ ಚಿತ್ರೀಕರಣ ಪ್ರಾರಂಭಿಸಿದೆ.

ಉತ್ತರ ಪ್ರದೇಶದ ಗೋವಿಂದಪುರಿ ನಗರದ ಹನುಮಾನ್ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ನಡೆದಿರುವುದು ವಿಶೇಷತೆಗಳಲ್ಲೊಂದು. ಉತ್ತರ ಪ್ರದೇಶದ ಬಿಜೆಪಿಯ ಮಖಂಡ ಡಾ.ಮಂಜು ಶಿವಾಜ್ ಅವರು ಮುಖ್ಯ ಅತಿಥಿಯಾಗಿ, ಚಿತ್ರಕ್ಕೆ ಕ್ಲಾಪ್ ಮಾಡಿದರು. ಚಿದಂಬರ ಕುಲಕರ್ಣಿ ಕಾಮೆರಾ ಚಾಲನೆ ಮಾಡಿದರು. ವೈಭವ ಬಜಾಜ್ ಮತ್ತು ಹನಿ ಚೌಧರಿ (ವಿಸಿಕಾ ಫಿಲ್ಮ್ಸ್ ಸಂಸ್ಥೆ) ಸೇರಿ ಅದ್ದೂರಿಯಾಗಿ ಈ ಚಿತ್ರವನ್ನು ಶುರುಮಾಡಿದ್ದಾರೆ.

ಉಳಿದಂತೆ ಕಮರೊಟ್ಟು ಚೆಕ್‌ಪೋಸ್ಟ್ ಖ್ಯಾತಿಯ ನಾಯಕ ಸನತ್, ಹಾಗೂ ಒಂದು ಮೊಟ್ಟೆಯ ಕಥೆ ಚಿತ್ರದ ನಾಯಕಿ ಶೈಲಶ್ರಿ ಮುಲ್ಕಿ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಖಳನಟರಾಗಿ ಉಮೇಶ ಸಕ್ಕರೆನಾಡು ಇದ್ದಾರೆ. ಚಿತ್ರಕ್ಕೆ ಸಂದೀಪ್‌ ಫ್ರೇಡಿಕ್‌ ಕ್ಯಾಮೆರಾ ಹಿಡಿದರೆ, ಕಪಿಲ್ ದೀಕ್ಷಿತ್‌ ಸಹಾಯಕ ನಿರ್ದೆಶಕರು. ಕರುಣ್ ಕ್ಷೀತಿ ಸುವರ್ಣ ಸೇರಿದಂತೆ ಮೀರತ್ ನಗರದ ವಕೀಲರಾದ ರಾಜಕುಮಾರ ಗುಪ್ತಾ ಮತ್ತು ಡಾ.ಸಂಜೀವ ಚೌಧರಿ ಈ ವೇಳೆ ಇದ್ದರು.

Related Posts

error: Content is protected !!