ಚಿತ್ರ ವಿಮರ್ಶೆ
ನಿರ್ದೇಶನ ವಿಜಯ್ ಕುಮಾರ್ ಕೊಂಡ
ನಿರ್ಮಾಣ : ಸುನೀಲ್ ಗೌಡ, ಲಹರಿ ಸಂಸ್ಥೆ
ತಾರಾಗಣ; ನಿಖಿಲ್ ಕುಮಾರ್, ಕಶ್ಮೀರಾ, ದತ್ತಣ್ಣ, ಅಚ್ಯುತಕುಮಾರ್, ಚಿಕ್ಕಣ್ಣ, ಗರುಡ ರಾಮ್, ರಾಜೇಶ್ ನಟರಂಗ ಇತರರು
ಒಂದು ಸಿನಿಮಾ ಅಂದರೆ ಹೇಗಿರಬೇಕು? ಮೊದಲಿಗೆ ಒಂದೊಳ್ಳೆಯ ಕಥೆ ಇರಬೇಕು. ಅಲ್ಲಿ ಚಿತ್ರಕಥೆಯೇ ಹೈಲೈಟ್ ಆಗಿರಬೇಕು. ಒಂದೇ ವರ್ಗಕ್ಕೆ ಸೀಮೀತವಾಗಿರಬಾರದು. ಅಲ್ಲಿ ಪ್ರೀತಿ, ಪ್ರೇಮ, ಗೆಳೆತನ, ಸೆಂಟಿಮೆಂಟ್, ಬಾಂಧವ್ಯ, ಹಾಸ್ಯ ಹೀಗೆ ಎಲ್ಲದರ ಪಾಕವಿರಬೇಕು. ಅಂಥದ್ದೊಂದು ರುಚಿಯಾದ ಹೂರಣದ ಸವಿಯಿರುವ ಸಿನಿಮಾಗಳ ಸಾಲಿಗೆ ನಿಖಿಲ್ ಕುಮಾರ್ ಅಭಿನಯದ ‘ರೈಡರ್’ ಸಿನಿಮಾದಲ್ಲಿದೆ.
ಹೌದು, ಈ ವಾರ ತರೆಗೆ ಅಪ್ಪಳಿಸಿರುವ ‘ರೈಡರ್’ ಅಪ್ಪಟ ಪ್ರೇಮಕಥೆಯೊಂದಿಗೆ
ಭರ್ಜರಿ ಆ್ಯಕ್ಷನ್ ಇರುವ ಮಜಭೂತಾದ ಚಿತ್ರವಾಗಿ ಹೊರಹೊಮ್ಮಿದೆ.
ಇದೊಂದು ಲವ್ ಸ್ಟೋರಿ, ಸೆಂಟಿಮೆಂಟ್, ಎಮೋಶನ್ಸ್, ಕಾಮಿಡಿ, ಭರ್ಜರಿ ಆ್ಯಕ್ಷನ್ ಜೊತೆಗೆ ನೆನಪಿಸೋ ಹಾಡುಗಳು ಚಿತ್ರದ ವೇಗಕ್ಕೆ ಅಡ್ಡಿಯಾಗಿಲ್ಲ.
ಇನ್ನು, ಸಿನಿಮಾ ಕಥೆ, ಚಿತ್ರಕಥೆಯಲ್ಲಷ್ಟೇ ಅಲ್ಲ ಎಲ್ಲದರಲ್ಲೂ ಶ್ರೀಮಂತಿಕೆ ಇದೆ. ಅದರಲ್ಕೂ ಅದ್ಧೂರಿ ಮೇಕಿಂಗ್ ಖುಷಿ ಕೊಡುತ್ತದೆ. ಇದು ಔಟ್ ಆ್ಯಂಡ್ ಔಟ್ ಮಾಸ್ ಎಲಿಮೆಂಟ್ಸ್ ಇರುವ ಸಿನಿಮಾ ಆಗಿರುವುದರಿಂದ ಮಾಸ್ ಆಡಿಯನ್ಸ್ ಗೆ ರುಚಿಸಲಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ.
ಇದು ರೈಡರ್ ಒನ್ ಲೈನ್..
ಒಂದು ಅನಾಥಾಶ್ರಮದಲ್ಲಿ ಭೆಟಿಯಾಗುವ ಕಿಟ್ಟಿ ಮತ್ತು ಚಿನ್ನು ಆ ಬಳಿಕ ಘಟನೆಯೊಂದರಲ್ಲಿ ಅವರಿಬ್ಬರೂ ಬೇರೆಯಾಗುತ್ತಾರೆ. ಮತ್ತೆ ಅವರಿಬ್ಬರೂ ದೊಡ್ಡವರಾದ ನಂತರ ಒಬ್ಬರನ್ನೊಬ್ಬರು ಹುಡುಕಿಕೊಂಡು ಹೊರಡುತ್ತಾರೆ. ಅವರಿಬ್ಬರ ಪ್ರೀತಿಯ ಹುಡುಕಾಟ, ಒಂದಷ್ಟು ತಳಮಳದ ಸುತ್ತ ಸಾಗುವ ಕಥೆಯಲ್ಲಿ ರೋಚಕತೆ ಇದೆ, ಕುತೂಹಲವೂ ಇದೆ. ಹಾಗಾದರೆ, ಕೊನೆಗೆ ಕಿಟ್ಟಿ ಮತ್ತು ಚಿನ್ನು ಇಬ್ಬರೂ ಸಿಗ್ತಾರ, ಒಂದಾಗ್ತಾರ ಅನ್ನುವ ಕುತೂಹಲ ನಿಮಗಿದ್ದರೆ ಒಮ್ಮೆ ರೈಡರ್ ಜೊತೆ ಹಾಗೊಂದು ರೈಡ್ ಮಾಡಿಬರಬಹುದು.
ಚಿತ್ರ ನೋಡುವರಿಗೆ ಇಲ್ಲಿ ಮೋಸ ಇಲ್ಲ ಎಂಬ ಗ್ಯಾರಂಟಿ ಕೊಡಬಹುದು. ಕೊಟ್ಟ ಕಾಸಿಗೆ ಭರಪೂರ ಮನರಂಜನೆಗಂತೂ ಧೋಕ ಆಗಲ್ಲ. ನಿರ್ದೇಶಕ ವಿಜಯ್ ಕುಮಾರ್ ಕೊಂಡ ಅವರಿಗೊಂದು ಸ್ಪಷ್ಟತೆ ಇದೆ. ಈಗಿ ಯೂಥ್ಸ್ ಮನಸಲ್ಲಿಟ್ಟುಕೊಂಡು, ಫ್ಯಾನ್ಸ್ ಅನ್ನೂ ಗಮನದಲ್ಲಿಟ್ಟಕೊಂಡು ಮಜ ಎನಿಸೋ ಚಿತ್ರ ಕಟ್ಟಿಕೊಟ್ಟಿದ್ದಾರೆ.
ನಟನೆ ವಿಷಯಕ್ಕೆ ಬಂದರೆ.
ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಯಲ್ಲಿ ಎಷ್ಟು ಗಟ್ಟಿತನವಿದೆಯೋ ಪಾತ್ರದಲ್ಲೂ ಅಷ್ಟೇ ಗಟ್ಟಿತನ ಕಟ್ಟಿಕೊಡುವ ಪ್ರಯತ್ನ ಇಲ್ಲಿ ಸಾರ್ಥಕ.
ನಟ ನಿಖಿಲ್ ಕುಮಾರ್ ಇಲ್ಲಿ ಎಂದಿಗಿಂತಲೂ ಇಷ್ಟವಾಗುತ್ತಾರೆ. ಮತ್ತೆ ಅವರಿಲ್ಲಿ ಪಕ್ಜಾ ಮಾಸ್ ಹೀರೋ ಆಗಿ ಕಾಣಿಸಿಕೊಂಡಿದ್ದಾಾರೆ. ಒಂದು ಮನೆಗೆ ಒಳ್ಳೆಯ ಮಗನಾಗಿ, ಗೆಳೆಯನಾಗಿ, ಹುಡುಕಾಟದ ಲವರ್ ಬಾಯ್ ಆಗಿ ನಿಖಿಲ್ ಗಮನಸೆಳೆಯುವುದರ ತಮ್ಮ ಪಾತ್ರವನ್ನು ಅಚ್ಚುಕಟ್ಟಾಾಗಿ ಕಟ್ಟಿಕೊಟ್ಟಿದ್ದಾರೆ.
ಇನ್ನು, ಭರ್ಜರಿ ಆ್ಯಕ್ಷನ್, ಡ್ಯಾಾನ್ಸ್ ಮತ್ತು ತಮ್ಮ ಹೊಸತನದ ಮ್ಯಾನರಿಸಂ ಮೂಲಕ ತಾವು ಮಾಸ್ ಹೀರೋ ಎನ್ನುವುದನ್ನು ಮತ್ತೆ ಸಾಬೀತುಪಡಿಸಿದ್ದಾರೆ.
ನಾಯಕಿ ಕಶ್ಮೀರಾ ಕೂಡ ಇಲ್ಲಿ ಅಕರ್ಷಿಸುತ್ತಾರೆ. ತಮ್ಮ ಬ್ಯೂಟಿ ಮತ್ತು ನಟನೆ ಈ ಎರಡರಿಂದಲೂ ಇಷ್ಟವಾಗುತ್ತಾರೆ. ಉಳಿದಂತೆ ಹಿರಿಯ ನಟ ದತ್ತಣ್ಣ, ಅಚ್ಯುತ ಕುಮಾರ್, ಚಿಕ್ಕಣ್ಣ, ಶಿವರಾಜ್ ಕೆ.ಆರ್ ಪೇಟೆ, ರಾಜೇಶ್ ನಟರಂಗ, ಶೋಭರಾಜ್, ಗರುಡ ರಾಮ್ ಹೀಗೆ ಇನ್ನೂ ಅನೇಕ ಕಲಾವಿದರ ದಂಡು ತೆರೆಯ ಮೇಲೆ ಮೋಡಿ ಮಾಡಿದೆ.
ರೈಡರ್ ತಾಂತ್ರಿಕವಾಗಿ ಹೊಸತನದಿಂದ ಕೂಡಿದೆ. ಚಿತ್ರದ ಮೇಕಿಂಗ್ ನೋಡಿದವರಿಗೆ ನಿರ್ಮಾಪಕರ ಸಿನಿಮಾ ಪ್ರೀತಿ ಎಂಥದ್ದು ಅನ್ನೋದು ಗೊತ್ತಾಗುತ್ತೆ. ಭರ್ಜರಿಯಾಗಿ ಸಿನಿಮಾ ಕಥೆ ಡಿಮ್ಯಾಂಡ್ ಮಾಡಿದ್ದನ್ನು ಚಾಚೂ ತಪ್ಪದೆ ಮಾಡಿದ್ದಾರೆ.
ಅರ್ಜುನ್ ಜನ್ಯ ಸಂಗೀತ ಹಾಡುಗಳು ಗುನುಗುವಂತಿವೆ.
ನೃತ್ಯ ನಿರ್ದೇಶಕ ಭೂಷಣ್ ಹಾಗೂ ಸಾಹಸ ನಿರ್ದೇಶಕ ಚೇತನ್ ಅವರ ಕೆಲಸ ಇಲ್ಲಿ ಗಮನಸೆಳೆಯುತ್ತದೆ.
ಒಟ್ಟಾರೆ ಇದು ಎಲ್ಲ ಮನರಂಜನಾತ್ಮಕ ಅಂಶಗಳನ್ನು ಹೊತ್ತು ಬಂದ ರೈಡರ್.