ಹಿರಿಯ ನಿರ್ದೇಶಕ ಕೆ.ವಿ.ರಾಜು ಇನ್ನಿಲ್ಲ…

ಹಿರಿಯ ನಿರ್ದೇಶಕರಾದ ಕೆ.ವಿ ರಾಜು ಇನ್ನಿಲ್ಲ. ಅವರ ಸಿನಿಮಾಗಳ ಮೂಲಕ ಸದಾ ಜೀವಂತವಾಗಿರುತ್ತಾರೆ. ನೇರ ನುಡಿ, ನಿಷ್ಟುರ ವ್ಯಕ್ತಿತ್ವದವರಾಗಿದ್ದ ಅವರು, ಮೃದು ಸ್ವಭಾವದ ವ್ಯಕ್ತಿತ್ವ ಹೊಂದಿದ್ದರು. ಇದು ಅವರ ಒಡನಾಡಿಗಳಿಗೆ ಗೊತ್ತು.

ನಿರ್ದೇಶಕ ಕೆ.ವಿ ರಾಜು
ಅವರು ಚಿತ್ರರಂಗದಲ್ಲಿ ನಿರ್ದೇಶಕ, ಬರಹಗಾರ ಮತ್ತು ಚಿತ್ರಕಥೆಗಾರರಾಗಿ ಗುರುತಿಸಿಕೊಂಡಿದ್ದರು. ಖ್ಯಾತ ನಿರ್ದೇಶಕ ಕೆವಿ ಜಯರಾಮ್ ಅವರ ಸಹೋದರರಾಗಿದ್ದ ಕೆವಿ ರಾಜು, 1982 ರಲ್ಲಿ ‘ಬಾಡದ ಹೂ’ ಚಿತ್ರದಲ್ಲಿ ತಮ್ಮ ಸಹೋದರನಿಗೆ ಸಹಾಯಕ ನಿರ್ದೇಶಕರಾಗುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. 1984 ರ ‘ಒಲವೇ ಬದುಕು’ ಮೂಲಕ ಅವರು ಬರಹಗಾರ ಹಾಗೂ ನಿರ್ದೇಶಕನಾಗಿ ಚಿತ್ರರಂಗದಲ್ಲಿ ನೆಲೆಕಂಡರು. ನಂತರದ ಕೆಲವೇ ವರ್ಷಗಳಲ್ಲಿ ಚಿತ್ರರಂಗದಲ್ಲಿ ಅದ್ಭುತ ಸಿನಿಮಾಗಳ ನಿರ್ದೇಶಕರಾಗಿ ಜನಮೆಚ್ಚುಗೆ ಪಡೆದರು.

ಅವರ ಸಿನಿಮಾ ವಿವರ; ಸಂಗ್ರಾಮ (1987), ಬಂಧ ಮುಕ್ತ (1987), ಯುದ್ಧಕಾಂಡ (1989), ಬೆಳ್ಳಿ ಮೋಡಗಳು, ಬೆಳ್ಳಿ ಕಾಲುಂಗುರ, ಮುಂತಾದ ಚಿತ್ರಗಳ ಮೂಲಕ ಅವರು ಬ್ಲಾಕ್ ಬಸ್ಟರ್ ನಿರ್ದೇಶಕ ಎಂದು ಗುರುತಿಸಿಕೊಂಡಿದ್ದರು.

1991ರಲ್ಲಿ ‘ಇಂದ್ರಜಿತ್’ ಚಿತ್ರದ ಮೂಲಕ ಬಾಲಿವುಡ್​ಗೂ ಕೆವಿ ರಾಜು ಪ್ರವೇಶಿಸಿದ್ದರು. ಅಮಿತಾಭ್ ಬಚ್ಚನ್ ಹಾಗೂ ಜಯಪ್ರದಾ ಆ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಲ್ಲದೇ ಮತ್ತೆರಡು ಹಿಂದಿ ಚಿತ್ರಗಳಿಗೂ ಅವರ ನಿರ್ದೇಶನವಿತ್ತು. ಹುಲಿಯಾ ಮರೆಯಲಾರದ ಸಿನಿಮಾಗಳಲ್ಲೊಂದು.

Related Posts

error: Content is protected !!