ಫಿಲ್ಮಾಲಿಕ್ ಫೌಂಡೇಶನ್ ಸಂಸ್ಥೆಯ ಎರಡನೇ ವರ್ಷದ ಸಿನಿಮಾ ಅಂತರಂಗ ಚಲನಚಿತ್ರೋತ್ಸವ ಹಾಗೂ ಪಬ್ಲಿಕ್ ಐ ಸೋಶಿಯಲ್ ಇಂಪ್ಯಾಕ್ಟ್ ಅವಾರ್ಡ್ಸ್ ಆಯೋಜಿಸಿರುವುದು ಗೊತ್ತೇ ಇದೆ. ಡಿಸೆಂಬರ್ 25ರಂದು ಗಾಂಧಿ ಭವನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಇಂಡಿಯನ್ ಫಿಲಂ ಮೇಕರ್ಸ್ ಅಸೋಸಿಯೇಷನ್, ಭಾರತ ಸಾರಥಿ ಹಾಗೂ ಶ್ರೀ ದಾರಿ ಆಂಜನೇಯ ಸ್ವಾಮಿ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಸಹ ಪ್ರಾಯೋಜಕರಾಗಿದ್ದಾರೆ. ಐ ಕ್ಯಾಚ್ ಮೀಡಿಯಾ, ಸಿನಿ ಲಹರಿ, ಚಿತ್ತಾರ, ನಮ್ಮ ಸೂಪರ್ ಸ್ಟಾರ್ಸ್, ಎಂಎಂಎಂ ಮೀಡಿಯಾ, ಬಿ ಸಿನಿಮಾಸ್, ಸುರ್ವೇ ನ್ಯೂಸ್ ಹಾಗೂ ಪತ್ರಿಕೆ, ಸಿರಿ ಟಿವಿ, ಮಯೂರಿ ಸ್ಟುಡಿಯೋ, ಸ್ಟಾರ್ ಕನ್ನಡ, ಕನ್ನಡ ಫಿಲ್ಮೋಲಜಿ, ಫಿಲಂ ಗಪ್ಪ, ಪೂವರಿ, ಲೈವ್ ಬೆಂಗಳೂರು ಕನ್ನಡ, ಮಫ್ತಿ ನ್ಯೂಸ್, ಜಸ್ಟ್4u ಇನ್ಫೋಟೇನ್ಮೆಂಟ್, ರಿಯಲ್ ಟೈಮ್ಸ್, ಕೆ ಬಿಟ್ಸ್ ಮಾಧ್ಯಮಗಳು ಮೀಡಿಯಾ ಪಾರ್ಟ್ನರ್ ಆಗಿದ್ದು, ಮಾರುತಿ ಮೆಡಿಕಲ್ಸ್ ಕೂಡ ಸಾಥ್ ನೀಡಿದೆ.
ಅಂದು ಪದ್ಮಶ್ರೀ ಡಾ. ದೊಡ್ಡ ರಂಗೆ ಗೌಡ, ಭಾಸ್ಕರ್ ರಾವ್, ಡಾ. ರಾಮಲಿಂಗ ವೆಂಕಟ ರೆಡ್ಡಿ, ಸುನೀಲ್ ಪುರಾಣಿಕ್, ಗಂಡಸಿ ಸದಾನಂದ ಸ್ವಾಮಿ, ಡಾ. ಅಂಬರೀಶ್ ಜಿ., ಹೆಚ್. ಆರ್. ದಿಲೀಪ್ ಕುಮಾರ್ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.
ಸಾಮಾಜಿಕ ಕಾರ್ಯಕರ್ತರು, ಸಾಹಿತಿಗಳು, ಸಿನಿಮಾ ರಂಗದ ದಿಗ್ಗಜರು ರಂಗಭೂಮಿ ಕಲಾವಿದರು ಇರಲಿದ್ದಾರೆ. ಸಿನಿಮಾ ಅಂತರಂಗ ಚಲನಚಿತ್ರೋತ್ಸವದಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಅಂದು 10ಗಂಟೆಗೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ನಂತರ ಮಧ್ಯಾಹ್ನ 3:30ರವರೆಗೆ ಚಲನಚಿತ್ರ ಪ್ರದರ್ಶನವಿದೆ.
ಆ ಬಳಿಕ ಚಲನಚಿತ್ರ ನಿರ್ಮಾಣ ಕಾರ್ಯಾಗಾರ ಮತ್ತು ಚಲನಚಿತ್ರ ನಿರ್ಮಾಣ ಬಗ್ಗೆ ಚರ್ಚೆ ನಡೆಯಲಿದೆ.
ಸಂಜೆ 5ಕ್ಕೆ ಪುನೀತ್ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಲಿದೆ. ವಿಜಯಲಕ್ಷ್ಮಿ ಸತ್ಯಮೂರ್ತಿ ಬರೆದ ವ್ಯೂಹರೆ ಕಾದಂಬರಿ ಬಿಡುಗಡೆಯಾಗಲಿದೆ. ಪದ್ಮಶ್ರೀ ಡಾ. ದೊಡ್ಡ ರಂಗೆ ಗೌಡ ಅವರು ಬಿಡುಗಡೆ ಮಾಡಲಿದ್ದು, ನಂತರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.