ಕರುನಾಡಲ್ಲಿ ಎಂಇಎಸ್ ಪುಂಡಾಟಿಕೆ ಹೆಚ್ಚಾಗಿದೆ. ಕನ್ನಡ ಧ್ವಜ ಸುಟ್ಟು ಹಾಕಿ, ಸಂಗೊಳ್ಳಿ ರಾಯಣ್ಣ ಅವರಪ್ರತಿಮೆ ಭಗ್ನಗೊಳಿಸಲಾಗಿದೆ. ಇಡೀ ಕರುನಾಡೇ ಬೆಳಗಾವಿ ಕಡೆ ಧಾವಿಸಿದೆ. ಕನ್ನಡ ನೆಲದಲ್ಲಿದ್ದು, ಬದುಕು ಕಟ್ಟಿಕೊಂಡವರೆ ಇಂತಹ ಕೃತ್ಯ ಎಸಗಿದ್ದಾರೆ. ಅಂತಹವರನ್ನು ಶಿಕ್ಷಿಸಬೇಕು ಅಂತ ಕನ್ನಡಿಗರೇ ಧ್ವನಿ ಎತ್ತಿದ್ದಾರೆ.
ಚಿತ್ರರಂಗವೇ ಈಗ ಆ ವಿರುದ್ಧ ಎದ್ದು ನಿಂತಿದೆ. ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ಕೂಡ ಟ್ವೀಟ್ ಮಾಡಿ, ಆಕ್ರೋಶ ಹೊರಹಾಕಿದ್ದಾರೆ.
‘ಗಡಿಭಾಗ ಕನ್ನಡಿಗರ ಜೊತೆ ಸದಾ ನಾವಿದ್ದೇವೆ. ಕನ್ನಡ ಧ್ವಜ ಸುಟ್ಟು ಕನ್ನಡಿಗರ ಮನಸ್ಸು ಕೆರಳಿಸಿ, ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನ ಮಾಡಿ ಅಕ್ರೋಶದ ಜ್ವಾಲೆಗೆ ಕಾರಣರಾಗಿದ್ದಾರೆ. ಇದು ಹೇಯ ಕೃತ್ಯ. ಕುರುನಾಡಲ್ಲೇ ಇದ್ದು ನಮ್ಮ ನೆಲ, ಜಲದಿಂದಲೇ ಬೆಳೆದು ಕನ್ನಡಿಗರನ್ನು ಕೆಣಕ್ಕಿದ್ದು ಕಿಚ್ಚು ಹೆಚ್ಚಿಸಿದೆ. ಅಂತಹವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದಿದ್ದಾರೆ.