ಸೌತ್‌ಬ್ಯೂಟಿ ಸಮಂತಾ, ಅಕ್ಕಿನೇನಿ ನಾಗಚೈತನ್ಯರಿಂದ ವಿಚ್ಚೇದನ ಪಡೆದಿರುವುದು ಎಲ್ಲರಿಗೂ ತಿಳಿದಿರುವಂತಹದ್ದೇ. ಪರಸ್ಪರ ಒಪ್ಪಿಗೆಯ ಮೇರೆಗೆ ಡೈವರ್ಸ್ ಪಡೆದುಕೊಂಡು ನಾಲ್ಕು ವರ್ಷದ ವೈವಾಹಿಕ ಬದುಕಿಗೆ ಗುಡ್‌ಬೈ ಹೇಳಿದ್ದಾರೆ. ಸದ್ಯ ಚೈ ಅಂಡ್ ಸ್ಯಾಮ್ ಬೇರೆ ಬೇರೆಯಾಗಿ ಬದುಕುತ್ತಿದ್ದಾರೆ. ಇಬ್ಬರು ಕೂಡ ತಮ್ಮ ತಮ್ಮ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮಧ್ಯೆ ಸ್ಯಾಮ್ `ಉಹ್ಞೂಂ ಅಂತೀಯಾ? ಅಥವಾ ಹ್ಞೂಂ ಅಂತೀಯಾ ಹೇಳ್ ಬುಡು ಮಾವ'ಅಂತೇಳಿ ಸಂಚಲನ ಸೃಷ್ಟಿಸಿದ್ದಾರೆ.ಅಷ್ಟಕ್ಕೂ, ಸಮ್ಮು ಈ ರೀತಿ ಹೇಳಿದ್ದು ಯಾವ ಮಾವನ ಮುಂದೆ?ಏನ್ ನಡೀತಿದೆ
‘ರಾಜಿ’ ಸುತ್ತ ಮುತ್ತ? ಆ ಇಂಟ್ರೆಸ್ಟಿಂಗ್ ಸ್ಟೋರಿ ನಿಮ್ಮ ಮುಂದೆ
‘ಮನಂ'ಜೋಡಿಯ ನಾಲ್ಕು ವರ್ಷದ ದಾಂಪತ್ಯ ಜೀವನ ಮುಗಿದುಹೋದ ಅಧ್ಯಾಯ.11 ವರ್ಷ ಪ್ರೀತ್ಸಿ ಮದುವೆಯಾದ ಚೈ-ಸ್ಯಾಮ್ ಮಧ್ಯೆ ಅದ್ಯಾವ ಘಟನೆ ಘಟಿಸಿತೋ? ಇವರಿಬ್ಬರ ಸಂಸಾರದಲ್ಲಿ ಅದ್ಯಾರು ಉಳಿ ಹಿಂಡಿದ್ರೋ ಏನೋ ಗೊತ್ತಿಲ್ಲ?
‘ಮಜಿಲಿ’ ಜೋಡಿ ಡೈವರ್ಸ್ ತೆಗೆದುಕೊಳ್ಳುವಂತಾಯ್ತು. ಕೋಟ್ಯಾಂತರ ಅಭಿಮಾನಿಗಳ ಹೊಟ್ಟೆಗೆ ಬೆಂಕಿ ಬಿತ್ತು. ಹೀಗೆ ಹೊಟ್ಟೆಗೆ ಬೆಂಕಿ ಹಾಕಿಕೊಂಡವರೆಲ್ಲ ಫ್ಯಾನ್ಸ್ ಈಗ್ಲೂ ಕೇಳಿಕೊಳ್ತಿರುವುದು ಒಂದೇ ಚೈ-ಸ್ಯಾಮ್ ಇಬ್ಬರು ವೈಮನಸ್ಸು ಮರೆತು ಒಂದಾಗ್ಬೇಕು ಅನ್ನೋದು. ಅಭಿಮಾನಿಗಳ ಈ ಕನಸು ಈಡೇರುತ್ತೋ? ಇಲ್ಲವೋ? ಗೊತ್ತಿಲ್ಲ. ಆದರೆ, ಫ್ಯಾನ್ಸ್ ಗೆ ಮನರಂಜನೆ ಕೊಡುವುದಕ್ಕೆ ಸಮಂತಾ ಹಾಗೂ ನಾಗ ಚೈತನ್ಯ ಇಬ್ಬರು ಕೂಡ ಸಿನಿಮಾದ ಮೊರೆ ಹೋಗಿದ್ದಾರೆ. ಅದರಲ್ಲೂ ಸ್ಯಾಮ್ ಅಂತೂ `ಪುಷ್ಪ’ ಸಿನಿಮಾದ ಸ್ಪೆಷಲ್ ಹಾಡಿನಲ್ಲಿ ಇಡೀ ಸೌತ್ ಸಿನಿಮಾ ಇಂಡಸ್ಟ್ರಿಯ ಚಿತ್ರಪ್ರೇಮಿಗಳು ಬೆರಗುಗಣ್ಣಿನಿಂದ ನೋಡುವಂತಹ ಪರ್ಫಾಮೆನ್ಸ್ ಕೊಟ್ಟಿದ್ದಾರೆ.
ಅಲ್ಲಾ, ಉಹ್ಞೂಂ ಅಂತೀಯಾ? ಅಥವಾ ಹ್ಞೂಂ ಅಂತೀಯಾ ಹೇಳ್ ಬುಡು ಮಾವ ಅಂತ ಸಮಂತಾ ಕೇಳಿದ್ದಾರೆ. ಅದರ ಕಥೆ ಹೇಳ್ತೀವಿ ಅಂತೇಳಿ ಮತ್ತದೇ ಹಳೆ ಕಥೆ ಕ್ಯಾಸೆಟ್ ಪ್ಲೇ ಮಾಡ್ತಿದ್ದಾರೆ ಅಂದ್ಕೋಬೇಡಿ. ತಾಜಾ ಸಮಾಚಾರ ಹೇಳಲಿಕ್ಕಾಗಿಯೇ ಇಷ್ಟೆಲ್ಲಾ ಹೇಳಿದ್ದು. ಉಹ್ಞೂಂ ಅಂತೀಯಾ? ಅಥವಾ ಹ್ಞೂಂ ಅಂತೀಯಾ ಹೇಳ್ ಬುಡು ಮಾವ'? ಹೀಗಂತ ಆ್ಯಪಲ್ ಬ್ಯೂಟಿ ಸಮಂತಾ ಕೇಳಿದ್ದೇನೋ ನಿಜ ಆದರೆ,ರೀಲ್ ಲೈಫ್‌ನಲ್ಲಿರುವ ಮಾವನ ಮುಂದೆ ಅಲ್ಲಾ? ಬದಲಾಗಿ ರಿಯಲ್ ಲೈಫ್ನಲ್ಲಿ
ಪುಷ್ಪ’ ಸಿನಿಮಾದ ಸ್ಪೆಷಲ್ ಹಾಡಿನಲ್ಲಿ ಬರುವ ಸ್ಟೈಲಿಷ್ ಮಾವನ ಮುಂದೆ.
ಹೌದು, ಸ್ಟೈಲಿಷ್ ಐಕಾನ್ ಅಲ್ಲು ಅರ್ಜುನ್ ಅಭಿನಯದ ಪ್ಯಾನ್ ಇಂಡಿಯಾ ಪುಷ್ಪ' ಚಿತ್ರದಲ್ಲಿ ಸಮಂತಾ ಐಟಂ ಹಾಡಿಗೆ ಸೊಂಟ ಕುಣಿಸಿದ್ದಾರೆ.ಇದೇ ಮೊದಲ ಭಾರಿಗೆ ಸ್ಪೆಷಲ್ ನಂಬರ್ ಹಾಡಿಗೆ ಬೆಲ್ಲಿ ಬಳುಕಿಸಿರುವ ಸ್ಯಾಮ್
‘ಸೀರೆ.. ಸೀರೆ.. ಸೀರೆಯುಟ್ಟರೆ ಕಣ್.. ಕಣ್.. ಬಿಟ್ಕೊಂಡು ನೋಡ್ತೀರಾ, ಪುಟ್ಟ..ಪುಟ್ಟ.. ಗೌನು ತೊಟ್ರೆ..ಹಿಂದೆ ಹಿಂದೆ ಬೀಳ್ತೀರಾ, ಸೀರೆಯಲ್ಲ..ಗೌನು ಅಲ್ಲ..ಉಟ್ಟ ಬಟ್ಟೇಲಿ ಏನೈತೆ, ನೀವು ನೋಡೋದ್ರಾಗೆ ಎಲ್ಲಾ ಐತೆ ನಿಮ್ಮ ಬುದ್ದಿ ಇಲ್ಲ ಶುದ್ದಿ, ಉಹ್ಞೂಂ ಅಂತೀಯಾ ಮಾವ ? ಹ್ಞೂಂ ಅಂತೀಯಾ ಮಾವ’? ಅಂತ ಅಲ್ಲು ಅರ್ಜುನ್ ಮುಂದೆ ಕೇಳಿದ್ದಾರೆ.
ಈ ಹಾಡಿಗಾಗಿ ದುಬಾರಿ ಸಂಭಾವನೆ ಪಡೆದಿರುವ ಸ್ಯಾಮ್, ನೀಲಿ ಬಣ್ಣದ ಲೆಹೆಂಗಾ ತೊಟ್ಟು ಸಖತ್ತಾಗೆ ಕುಣಿದಿದ್ದಾರೆ. ಈ ಸ್ಪೆಷಲ್ ನಂಬರ್ ಸಾಂಗ್ ಮೂರು ಸೀಸನ್‌ಗೂ ಮ್ಯಾಚ್ ಆಗುತ್ತೆ. ಚಳಿಗಾಲ..ಮಳೆಗಾಲ..ಬೇಸಿಗೆಕಾಲ ಈ ಮೂರು ಕಾಲದಲ್ಲೂ ಪಡ್ಡೆಹೈಕ್ಳು ಬೆವರುವಂತೆ ಮಾಡುವ ಸಾಂಗ್ ಇದು.
'ಕಣ್ಣೇ ಅದಿರಿಂದಿ'ಅಂತ ಹಾಡಿ ಪಡ್ಡೆ ಹುಡಗರ ಹಗಲು-ರಾತ್ರಿ ನಿದ್ದೆಕದ್ದ ಸಿಂಗರ್ ಮಂಗ್ಲಿ,ಈಗ
‘ಹ್ಞೂಂ ಅಂತೀಯಾ ಮಾವ? ಉಹ್ಞೂಂ ಅಂತೀಯಾ ಮಾವ’? ಅಂತ ಹಾಡಿ ಸಕಲ ಸೋದರ ಮಾವಂದಿರು-ಸಕಲ ಸೊಸೆಯಂದಿರನ್ನು ಅಟ್ರ್ಯಾಕ್ಟ್ ಮಾಡುತ್ತಿದ್ದಾರೆ. ವರದರಾಜ್ ಚಿಕ್ಕಬಳ್ಳಾಪುರ ಕನ್ನಡ ವರ್ಷನ್ ಹಾಡಿಗೆ ಕ್ಯಾಚಿ ಲಿರಿಕ್ಸ್ ಬರೆದುಕೊಟ್ಟಿದ್ದಾರೆ. ದೇವಿ ಶ್ರೀ ಪ್ರಸಾದ್ ಟ್ಯೂನ್ ಕಂಪೋಸ್ ಮಾಡಿದ್ದಾರೆ.
ತೆಲುಗು ಸೇರಿದಂತೆ ಐದು ಭಾಷೆಗಳಲ್ಲಿ ‘ಹ್ಞೂಂ ಅಂತೀಯಾ ಮಾವ? ಉಹ್ಞೂಂ ಅಂತೀಯಾ ಮಾವ'? ಹಾಡು ಬಿಡುಗಡೆಯಾಗಿದ್ದು ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.ಸುಕುಮಾರ್ ಬತ್ತಳಿಕೆಯಿಂದ ಹೊರಬರುತ್ತಿರುವ
‘ಪುಷ್ಪ’ಕ್ಕೆ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಜೀವ ತುಂಬಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್‌ನಲ್ಲಿ ‘ಪುಷ್ಪ'ಅದ್ದೂರಿಯಾಗಿ ನಿರ್ಮಾಣಗೊಂಡಿದ್ದು, ಡಿಸೆಂಬರ್ 17ರಂದು ಬಿಗ್‌ಸ್ಕ್ರೀನ್ ಮೇಲೆ
‘ಪುಷ್ಪ’ ಅರಳಲಿದೆ. ಪ್ಯಾನ್ ಇಂಡಿಯಾ ತುಂಬೆಲ್ಲಾ ಘಮಘಮಿಸೋಕೆ ಹೊರಟಿದೆ.
ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ