ಕನ್ನಡದ ಗ್ಲಾಮರಸ್ ನಟಿ ಶುಭ ಪೂಂಜಾ ಬಿಗ್ ಬಾಸ್ ಗೆ ಹೋಗಿ ಬಂದ ನಂತರ ಹೆಚ್ಚು ಕಡಿಮೆ ಮದುವೆ ಬ್ಯುಸಿ ಯಲ್ಲಿರುವುದು ನಿಮಗೆ ತಿಳಿದಿದ್ದೇ. ಯಾಕಂದ್ರೆ ಅವರು ಈ ಮಾತನ್ನು ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ಹೇಳಿಕೊಂಡಿದ್ದರು. ಬಿಗ್ ಬಾಸ್ ಮನೆಯಿಂದ ಆಚೆ ಹೋದ ಮೇಲೆ ನಿಮಗಿರುವ ಮೊದಲ ಕೆಲಸ ಏನು ಅಂದಾಗ ಮದುವೆ ಅಂತ ಹೇಳಿದ್ದರು . ಹಾಗಾದ್ರೆ ಅವರು ಅಲ್ಲಿ ಹೇಳಿದಂತೆ ಮದುವೆ ಆದ್ರಾ?
ಸದ್ಯಕ್ಕೆ ಇಲ್ಲ, ಆದರೆ ಇಷ್ಟರಲ್ಲಿಯೇ ಅವರು ಗೆಳೆಯ ಸುಮಂತ್ ಕೈ ಹಿಡಿಯುವುದು ಗ್ಯಾರಂಟಿ ಆಗಿದೆ. ಬಿಗ್ ಬಾಸ್ ಮನೆಯಿಂದ ಆಚೆ ಬಂದ ತಕ್ಷಣವೇ ಈ ಜೋಡಿ ಗೋವಾ ಟ್ರಿಪ್ ಮುಗಿಸಿಕೊಂಡುಬಂದಿದೆ. ಈಗ ಮದುವೆ ಸಿದ್ದತೆ ನಡೆದಿದೆ. ಹೊಸ ವರ್ಷದಲ್ಲಿಯೇ ಮದುವೆ ಎನ್ನುವ ಸುದ್ದಿಯೂ ಇದೆ.ಈ ನಡುವೆಯೇ ಅವರೀಗ ಮೂರ್ನಾಲ್ಕು ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಶ್ರೀನಿ ನಿರ್ದೇಶನದ’ ಅಂಬುಜ’ ಚಿತ್ರದ ಚಿತ್ರೀಕರಣ ಶುರುವಾಗಿದೆ. ಅದರ ಜತೆಗೆಯೇ ‘ಬೀರ’ ಸೇರಿದಂತೆ ಇನ್ನೆರೆಡು ಪ್ರಾಜೆಕ್ಟ್ ಗು ಸಹಿ ಹಾಕಿದ್ದಾರಂತೆ. ಅದರ ಜತೆಗೆಯೇ ಈಗ ನಾಡಿನ ಹೆಸರಾಂತ ಪತ್ರಿಕೆಯೊಂದರಲ್ಲಿ ಕ್ರೈಮ್ ರಿಪೊರ್ಟರ್ ಆಗಿ ಕೆಲಸಕ್ಕೂ ಸೇರಿಕೊಂಡಿದ್ದಾರೆ.
ಅರೆ, ಎಲ್ಲಾ ಬಿಟ್ಟು ಇದ್ಯಾಕೆ ರಿಪೊರ್ಟರ್ ಕೆಲಸಕ್ಕೆ ಸೇರಿದರು ಅಂತ ನಿಮಗು ಅಚ್ಚರಿ ಆಗಬಹುದು. ಆದರೆ ಇದು ರಿಯಲ್ ಅಲ್ಲ, ರೀಲ್ ಕಥೆ. ಅಂದ ಹಾಗೆ, ನಟಿ ಶುಭಾ ಪೂಂಜಾ ಕ್ರೈಮ್ ರಿಪೊರ್ಟರ್ ಆಗಿರೋದು ರೈಮ್ಸ್ ಹೆಸರಿನ ಚಿತ್ರದಲ್ಲಿ . ಇದು ಯುವ ಪ್ರತಿಭೆ ಅಜಿತ್ ಕುಮಾರ್ ನಿರ್ದೇಶನದ ಚಿತ್ರ. ಡಾನ್ ಜೈರಾಜ್ ಪುತ್ರ ಅಜಿತ್ ಜೈರಾಜ್ ಇದರ ಹೀರೋ. ಡಿಸೆಂಬರ್.10ರಂದು ಸಿನಿಮಾ ತೆರೆಗೆ ಬರಲಿದೆ. ಪ್ರಚಾರದ ಭಾಗವಾಗಿ ಮೊನ್ನೆಯಷ್ಟೇ ಈ ಚಿತ್ರದ ಟ್ರೇಲರ್ ಲಾಂಚ್ ಆಯಿತು. ಅಲ್ಲಿ ಮಾತಿಗೆ ಸಿಕ್ಕ ನಟಿ ಶುಭಾ ಪೂಂಜಾ ತಾವು ಕ್ರೈಮ್ ರಿಪೊರ್ಟರ್ ಆದ ಕಥೆ ಬಿಚ್ಚಿಟ್ಟರು.
‘ಈ ಸಿನಿಮಾದಲ್ಲಿ ನನ್ನದು ಜರ್ನಲಿಸ್ಟ್ ಪಾತ್ರ. ಅದನ್ನು ನೀವು ಮಾಡಬೇಕು, ಅದಕ್ಕಾಗಿ ತಯಾರಿ ಮಾಡಿಕೊಳ್ಳಿ ಎಂದು ನಿರ್ದೇಶಕರು ಹೇಳಿದರು. ಆದರೆ, ನನಗೆ ತುಂಬ ಜನ ಜರ್ನಲಿಸ್ಟ್ ಫ್ರೆಂಡ್ಸ್ ಇದ್ದಾರೆ. ಹಾಗಾಗಿ, ಪತ್ರಕರ್ತೆ ಪಾತ್ರಕ್ಕೆ ಬೇಕಾದ ಬೇಸಿಕ್ ತಯಾರಿಗಳು ನನಗೆ ಗೊತ್ತಿದೆ. ಆದರೆ ಶೂಟಿಂಗ್ ಮಾಡುವಾಗ ಸ್ವಲ್ಪ ಕಷ್ಟ ಆಯ್ತು. ಕೀಬೊರ್ಡ್ ಮೇಲೆ ಟೈಪ್ ಮಾಡಲು ಗೊತ್ತಾಗುತ್ತಿರಲಿಲ್ಲ. ಅಲ್ಲದೇ ಪತ್ರಕರ್ತೆಯಾಗಿ ಸೀರಿಯಸ್ ಆಗಿ ಕಾಣಿಸಿಕೊಳ್ಳಬೇಕಿತ್ತು. ಅದು ಸ್ವಲ್ಪ ಕಷ್ಟ ಎನಿಸಿತು. ನನಗೆ ಎಲ್ಲಿಯೂ ನಗುವುದಕ್ಕೆ ಬಿಟ್ಟಿಲ್ಲ ‘ ಎನ್ನುತ್ತಾ ಅಲ್ಲಿ ನಗದೆ ಇದಿದ್ದನ್ನು ಪತ್ರಕರ್ತರ ಮುಂದೆ ಮನಸು ಬಿಚ್ಚಿ ನಕ್ಕರು.
ಇನ್ನು ನಟಿ ಶುಭಾ ಅವರಿಗೆ ‘ರೈಮ್ಸ್’ ಚಿತ್ರದ ಅವಕಾಶ ಸಿಕ್ಕಿದ್ದು ಚಿತ್ರದ ನಾಯಕ ನಟ ಅಜಿತ್ ಜೈರಾಜ್ ಮೂಲಕವಂತೆ. ‘ ರೈಮ್ಸ್ ಒಂದು ವಿಶಿಷ್ಟವಾದ ಚಿತ್ರ . ನನ್ನ ಕೆರಿಯರ್ ನಲ್ಲಿ ಕ್ರೈಮ್ ರಿಪೊರ್ಟರ್ ಪಾತ್ರವನ್ನೇ ಮಾಡಿರಲಿಲ್ಲ. ಫಸ್ಟ್ ಇಂತಹ ಪಾತ್ರಕ್ಕೆ ಬಣ್ಣ ಹಚ್ವಿದ್ದೇನೆ.ಹಾಗೆ ಯೇ ಇದೊಂದು ವಿಭಿನ್ನವಾದ ಕಥಾ ಹಂದರದ ಚಿತ್ರ. ಕ್ರೈಮ್ ಥ್ರಿಲ್ಲರ್ ಕಥೆ. ನಿರ್ದೇಶಕರು ತುಂಬಾ ಅದ್ಬುತವಾಗಿಯೇ ತೆರೆಗೆ ತಂದಿದ್ದಾರೆ.ನಂಗೂ ಈ ಸಿನಿಮಾ ದೊಡ್ಡ ಕುತೂಹಲಹುಟ್ಟಿಸಿದೆ. ಜನರಿಗೆ ಇದು ಖಂಡಿತಾ ಇಷ್ಟವಾಗುತ್ತೆ’ ಎನ್ನುವ ವಿಶ್ವಾಸದ ಮಾತು ಶುಭಾ ಪೂಂಜಾ ಅವರದು.
ರಿಯಲ್ ಐ ಆಮ್ ಎಂಜಾಯ್ಡ್. ಹಾಗೆಯೇ ಅಲ್ಲಿ ಅನೇಕ ಕಾರಣಕ್ಕೆ ಭಾವುಕಳಾಗಿದ್ದೇನೆ. ಹಾಗೆಯೇ ಆ ಮನೆ ಅನೇಕ ಬಗೆಯ ಪಾಠ ಕಲಿಸಿದೆ. ನಾನು ಹೊರಗಡೆ ಇದ್ದಾಗ ಬಿಗ್ ಬಾಸ್ ಬಗ್ಗೆ ಅಂದುಕೊಂಡಿದ್ದಕ್ಕೂ, ಅಲ್ಲಿಗೆ ನಾನು ಕಂಟೆಸ್ಟೆಡ್ ಆಗಿ ಹೋದ ಮೇಲೆ ಆದ ಅನುಭಕ್ಕೂ ಅಜಗಜಾಂತರ ವ್ಯತ್ಯಾಸ. ಹೀಗೆಲ್ಲ ಇರುತ್ತಾ ಅನಿಸಿತು. ಒಳ್ಳೆಯ ಸ್ನೇಹಿತರು ಸಿಕ್ಕರು. ಕೆಲವರ ಅವಗುಣಗಳು ಅನಾವರಣವಾದವು. ಎಲ್ಲಕ್ಕಿಂತ ಮುಖ್ಯವಾಗಿ ನಾನೇನು ಅಂತ ರಾಜ್ಯದ ಜನತೆಗೆ ತೋರಿಸಿಕೊಳ್ಳುವುದಕ್ಕೂ ಸಾಧ್ಯವಾಯಿತು. ಇದೆಲ್ಲ ನಾನು ಅಲ್ಲಿಗೆ ಹೊಗಿಲ್ಲದಿದ್ದರೆ ಆಗುತ್ತಿರಲಿಲ್ಲ. ಅದರ ಜತೆಗೆ ನಾನೊಬ್ಬ ನಟಿಯಾಗಿ ಪಡೆದುಕೊಂಡಿದ್ದ ಪ್ಯಾನ್ಸ್ ಫಾಲೋವರ್ಸ್ ಸಂಖ್ಯೆ ಕೂಡ ಅಧಿಕವಾಗಿದೆ. ಅದುಮೂರು ಪಟ್ಟು ಜಾಸ್ತಿ ಅಂದ್ರೆ ನೀವು ನಂಬಲೇಬೇಕು. ಇದೆಲ್ಲ ಅಲ್ಲಿಗೆ ಹೋಗಿದ್ದರಿಂದಲೆ ಅಲ್ಲವೇ?
ಬಿಗ್ ಬಾಸ್ ಮನೆ ಪಕ್ಕಾ ಸುಸಜ್ಜಿತ ಎನ್ನುವುದರ ಜತೆಗೆ ಶುದ್ದತೆಗೆ ಇನ್ನೊಂದು ಮಾದರಿ. ಪ್ರತಿದಿನವೂ ಅಲ್ಲಿ ಸ್ಯಾನಿಟೈಸ್ಡ್ ಮಾಡಲಾಗುತ್ತಿತ್ತು. ಹಾಗೆಯೇ ನಮ್ಮಗಳ ಆರೋಗ್ಯಕ್ಕಾಗಿಯೇ ಅಲ್ಲಿ ಡಾಕ್ಟರ್ ಇದ್ದರು. ಆದರೆ, ನಾವೆಲ್ಲ ಮಂಗನಿಂದ ಮಾನವರಾದವರಲ್ವಾ? ಸುಮ್ಮನೆ ಕೂರುವ ಅಭ್ಯಾಸವೇ ಇರುತ್ತಿರಲಿಲ್ಲ . ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿದ್ದು ಒಂದಷ್ಟು ಬೇಸರ ತರಿಸಿತ್ತು. ಹಾಗಾಗಿಒಂದಿ ನ ಕುತೂಹಲಕ್ಕೆ, ಕಾತರಕ್ಕೆ ಹೊರಗಡೆ ನೋಡ್ಬೇಕು ಅಂತ ಕಾಂಪೌಂಡ್ ಗೋಡೆ ಹತ್ತಿ ನೋಡಿದ್ದೆವು. ಅಲ್ಲಿ ಒಂದು ಅಂಬೂಲೆನ್ಸ್ ಇತ್ತು. ಜತೆಗೆ ಡಾಕ್ಟರ್ ಕೂಡ ಇದ್ದರು.