ಕಲಾವಿದ ,ಪತ್ರಕರ್ತ ಯತಿರಾಜ್ ಮತ್ತೊಂದು ಸಾಹಸಕ್ಕೆ ಅಣಿಯಾಗಿದ್ದಾರೆ. ‘ಪೂರ್ಣ ಸತ್ಯ’ ಚಿತ್ರದ ನಂತರ ಅವರೀಗ ಸೀತಮ್ಮನ ಮಗ ಹೆಸರಿನ ಮತ್ತೊಂದು ಚಿತ್ರಕ್ಕೆ ಡೈರೆಕ್ಟರ್ ಹ್ಯಾಟ್ ತೊಟ್ಟು ಆಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ. ಸೋನು ಫಿಲಂಸ್ ಲಾಂಚನದಲ್ಲಿ ಮಂಜುನಾಥ್ ನಾಯಕ್ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಚರಣ್, ಕಸಾಲ, ಸೋನು ಸಾಗರ್, ಬುಲೆಟ್ ರಾಜು ಕಲಾವಿದರಾಗಿ ಆಯ್ಕೆ ಆಗಿದ್ದಾರೆ. ಚಿತ್ರ ದ ಕುರಿತು ಮಾಹಿತಿಯನ್ನು ಚಿತ್ರ ತಂಡ ಬುಧವಾರ ರಿವೀಲ್ ಮಾಡಲಿದೆ. ಹಾಗೆಯೇ ಅದರ ಚಿತ್ರೀಕರಣ, ಸಂಗೀತ ಇತ್ಯಾದಿ ಮಾಹಿತಿಯೂ ನಾಳೆ ಹೊರ ಬೀಳಲಿದೆ . ಉಳಿದಂತೆ ಇಲ್ಲಿ ಕಲಾವಿದ ಯತಿರಾಜ್ ಅವರ ಮತ್ತೊಂದು ಪ್ರಯತ್ನವೇ ವಿಶೇಷ.
ಇದು ಅವಕಾಶ ಗಿಟ್ಟಿಸಿಕೊಂಡರು ಅಥವಾ ಸಿಕ್ಕಿದೆ ಎನ್ನುವುದಕ್ಕಿಂತ ಅವರ ಕಲಾಸೇವೆಯ ಪ್ರತಿಫಲವೇ ಹೌದು. ಯಾಕಂದ್ರೆ ವೃತ್ತಿಯಲ್ಲಿ ಪತ್ರಕರ್ತರಾಗಿದ್ದ ಯತಿರಾಜ್, ನಟನೆಯ ಮೇಲಿನ ಆಸಕ್ತಿಯಿಂದಲೇ ಕಲಾವಿದನಾಗಿ ಗುರುತಿಸಿಕೊಂಡವರು. ಅದಕ್ಕಾಗಿಯೇ ನಟ ಕಿಚ್ವ ಸುದೀಪ್ ಬಳಗವನ್ನು ಸೇರಿ, ಅವರೊಂದಿಗೆ ತೆರೆಮೇಲೆ ಕಾಣಿಸಿಕೊಂಡರು. ಮುಂದೆ ಅವರಿಗೆ ಅವಕಾಶಗಳೂ ಬಂದವು. ಅದೇ ಕಾರಣಕ್ಕೆ ಪತ್ರಕರ್ತ ವೃತ್ತಿಯ ಜತೆಗೆ ನಟನೆಗೂ ಹೆಚ್ಚು ಆದ್ಯತೆ ನೀಡಿದವರು ಈಗ ಪೂರ್ಣವದಿಯ ನಟ, ನಿರ್ದೇಶಕ ಹಾಗೂ ಬರಹಗಾರ.
ಇದುವರೆಗಿನ ಅವರ ಸಿನ ಪಯಣದಲ್ಲಿ ೧೬೫ಕ್ಕೂ ಹೆಚ್ಚು ಚಿತ್ರಗಳಿಗೆ ನಟನಾಗಿ ಬಣ್ಣ ಹಚ್ಚಿದ್ದಾರೆ. ಕನ್ನಡದ ಜತೆಗೆ ತಮಿಳಿ ಚಿತ್ರ ರಂಗದಲ್ಲೂ ನಟನಾಗಿ ಕಾಣಿಸಿಕೊಂಡಿದ್ದಾರೆ. ಬಹುತೇಕ ಸ್ಟಾರ್ ಸಿನಿಮಾಗಳಲ್ಲಿ ಸಹ ನಟನಾಗಿ ಅಭಿನಯಸಿ, ಸೈ ಎನಿಸಿಕೊಂಡಿದ್ದಾರೆ. ಹಾಗೆಯೇ ಫೇರ್ ಅಂಡ್ ಲವ್ಲಿ , ಪೂರ್ಣ ಸತ್ಯ ಹಾಗೂ ಈಗ ಸೀತಮ್ಮನ ಮಗ ಚಿತ್ರವೂ ಸೇರಿಮೂರು ಸಿನಿಮಾಗಳಿಗೆ ಕತೆ ಬರೆದಿದ್ದಾರೆ. ಈ ಪೈಕಿ ಈಗ ಅವರದ್ದೇ ನಿರ್ದೇಶನ ಎರಡನೇಸಿನಿಮಾ ‘ಸೀತಮ್ಮನ ಮಗ’
‘ ವೃತ್ತಿಯಲ್ಲಿ ಪತ್ರಕರ್ತನಾಗಿದ್ದ ನನಗೆ ಕಥೆಗಳ ಬರವಣಿಗೆ ಅನ್ನೋದು ಒಂದು ಹುಚ್ಚು. ಸದಾ ಒಂದಲ್ಲೊಂದು ಬಗೆಯ ಸಿನಿಮಾ ಕಥೆ ತಲೆಗೆ ಹೊಳೆದಾಗ ಅದನ್ನು ಬರೆಯುವುದು ತೀಡುವುದು ಸಹಜವೇ ಆಗಿತ್ತು. ಅದೇ ಹಾದಿಯಲ್ಲಿ ನಾನು ಸಿದ್ದ ಪಡಿಸಿದ ಕಥೆಗಳ ಪೈಕಿ ಮೊದಲು ಫೇರ್ ಅಂಡ್ ಲವ್ಲಿ ಸಿನಿಮಾವಾಯಿತು. ಅದಕ್ಕೆ ಬೇರೆಯವರು ನಿರ್ದೇಶನಮಾಡಿದರು .
ಕೊನೆಗೆ ನನಗೆ ತೀವ್ರವಾಗಿ ಅನಿಸಿದ್ದು ನನ್ನದೇ ಕಥೆಗೆ ನಾನೇ ನಿರ್ದೆಶನ ಮಾಡಿದರೆ ಹೇಗಿರುತ್ತೆ ಅಂತ . ಅದೇ ಹಾದಿಯಲ್ಲಿ’ ಪೂರ್ಣ ಸತ್ಯ’ ಸಿನಿಮಾ ಮಾಡಿದೆ. ಈಗ ಸೀತಮ್ಮನ ಮಗ. ಇದೆಲ್ಲ ಕಷವೃತ್ತಿಯಲ್ಲಿಆದರೆ,ಒಬ್ಬ ಸಹ ನಟನಾದವನಿಗೆ ಹೀರೋ ಆಗುವ ಕನಸು, ಹೀರೋ ಸಿನಿಮಾ ನಿರ್ಮಾಣ ಮಾಡುವ ಕನಸು ಎಷ್ಟು ಸಹಜವೋ ಹಾಗೆಯೇ ಸಿನಿಮಾ ಕಥೆ ಬರೆಯುವವನಿಗೆ ನಿರ್ದೇಶಕನಾಗುವ ಹಂಬಲವೂ ಸಹಜ. ಅದೇ ಹಾದಿಯಲ್ಲೀಗ ಸೀತಮ್ಮನ ಮಗ’ ಎನ್ನುತ್ತಾರೆ ಯತಿರಾಜ್.