ಗಂಧದಗುಡಿಯ ಬೆಂಕಿಚೆಂಡಿಗೆ ಬೆಣ್ಣೆಯಂತಹ ಚೆಲುವೆ ಸಿಕ್ಕಿದ್ದಾಳೆ. ಬಹದ್ದೂರ್ ಗಂಡಿನ ಬಗಲಲ್ಲಿ ನಿಲ್ಲೋದಕ್ಕೆ ಜಿಗಿಜಿಗಿದು ಬಂದಿರುವ ಆಕೆ, ‘Who is martin'ಎಂದು ಪ್ರಶ್ನೆ ಮಾಡಿ ಕೊನೆಗೆ ಆಕ್ಷನ್ಪ್ರಿನ್ಸ್ ಪಕ್ಕದಲ್ಲಿ ನಿಂತಿದ್ದಾಳೆ.ಹಾಗಾದ್ರೆ ಯಾರಾಕೆ? ಅದ್ದೂರಿ ಹುಡುಗನಿಗೆ ಜೊತೆಯಾಗುವ ಅವಕಾಶ ಸಿಕ್ಕಿದ್ದೇಗೆ?
‘ಮಾರ್ಟಿನ್’ ಮಹಾನಟಿಯ ಚರಿತ್ರ್ಯೆ ಏನು? ಈ ಕ್ಷಣ ನಿಮ್ಮ ಮುಂದೆ `ಮಾರ್ಟಿನ್ ಹೀರೋಯಿನ್ ಮ್ಯಾಟರ್’ ನೋಡ್ಬಿಡಿ
ಅದ್ದೂರಿ ಹುಡುಗನ ‘ಮಾರ್ಟಿನ್'ಚಿತ್ರಕ್ಕೆ ನಾಯಕಿ ಯಾರಾಗ್ತಾರೆ? ಇದೊಂದು ಪ್ರಶ್ನೆ ಇತ್ತೀಚೆಗೆ ಮಿಲಿಯನ್ ಡಾಲರ್ ಸ್ವರೂಪ ಪಡೆದಿತ್ತು.ಆಕ್ಷನ್ಪ್ರಿನ್ಸ್ ಗೆ
ಜೊತೆಯಾಗುವ ಅದೃಷ್ಟ ಅದ್ಯಾವ ನಟಿಗೆ ಸಿಗುತ್ತೆ? ಅದ್ಯಾರನ್ನು ಚಿತ್ರತಂಡ ಹೀರೋಯಿನ್ನಾಗಿ ಆಯ್ಕೆಮಾಡಿಕೊಳ್ಳುತ್ತೆ? ಎನ್ನುವ ಕೂತೂಹಲ ಧ್ರುವ ಸರ್ಜಾರ ವಿಐಪಿಗಳನ್ನು ಹಾಗೂ ಗಾಂಧಿನಗರದ ಮಂದಿಯನ್ನು ಬಹುವಾಗಿ ಕಾಡಿತ್ತು. ಫೈನಲೀ,ವಿಐಪಿಗಳ ಕೌತುಕಕ್ಕೆ ತೆರೆಬಿದ್ದಿದೆ.
ಮಾರ್ಟಿನ್’ ಚಿತ್ರಕ್ಕೆ ನಾಯಕಿ ಸೇರಿಕೊಂಡಿದ್ದು ಆಗಿದೆ.
ಹಾಗಾದ್ರೆ ಯಾರು ಆ ಚೆಲುವೆ? ಈ ಕೂತೂಹಲಕ್ಕೆ ಉತ್ತರ ನಟಿ ವೈಭವಿ ಶಾಂಡಿಲ್ಯ. ಮರಾಠಿ ಹಾಗೂ ತಮಿಳು ಚಿತ್ರಗಳಲ್ಲಿ ಗುರ್ತಿಸಿಕೊಂಡಿರುವ ಈ ನಟಿಗೆ ಇದು ಮೊದಲ ಕನ್ನಡ ಸಿನಿಮಾವೇನಲ್ಲ. ಈ ಹಿಂದೆ ಶರಣ್ ಹಾಗೂ ಚಿಕ್ಕಣ್ಣ ಜೊತೆ ‘ರಾಜ್-ವಿಷ್ಣು' ಹೆಸರಿನ ಸಿನಿಮಾ ಮಾಡಿದ್ದರು.ಅನಂತ್ರ ಭಟ್ರು ಗಣಿ ಜೊತೆ ಗಾಳಿಪಟ ಹಾರ್ಸೋಕೆ ಸೆಲೆಕ್ಟ್ ಮಾಡಿಕೊಂಡರು.ಈಗ ಎ.ಪಿ ಅರ್ಜುನ್ ಸಾಹೇಬ್ರು
‘ಮಾರ್ಟಿನ್’ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಆಕ್ಷನ್ಪ್ರಿನ್ಸ್ ಗೆ ಜೋಡಿಯನ್ನಾಗಿಸಿ ಸಾಂಸ್ಕೃತಿಕ ನಗರಿಯಲ್ಲಿ ಶೂಟಿಂಗ್ ಕೂಡ ಶುರು ಹಚ್ಚಿಕೊಂಡಿದ್ದಾರೆ. ಸದ್ಯ, ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದೆ, ಅಲ್ಲಿ ಧ್ರುವ ಸರ್ಜಾ ಹಾಗೂ ವೈಭವಿ ಕಾಂಬಿನೇಷನ್ ದೃಶ್ಯಗಳ ಶೂಟಿಂಗ್ ಭರದಿಂದ ಸಾಗಿದೆ.
ಕಳೆದ ಎರಡು ದಿನಗಳಿಂದ ಬಹದ್ದೂರ್ ಹುಡುಗ ಹಾಗೂ ನಟಿ ವೈಭವಿ ಜೊತೆಯಾಗಿ ಲುಕ್ ಕೊಟ್ಟಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ‘ಮಾರ್ಟಿನ್'ಚಿತ್ರದ ನಾಯಕಿ ಇವರೇ ಇರ್ಬೋದು ಎನ್ನುವ ಶಂಕೆ ಮೂಡಿತ್ತಾದರೂ ಕೂಡ ಫಿಲ್ಮ್ ಟೀಮ್ ಖಚಿತಪಡಿಸಿರಲಿಲ್ಲ.ಆದರೆ,ಧ್ರುವ ಬಾಸ್ ತಮ್ಮ ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ಶೂಟಿಂಗ್ ಸೆಟ್ನ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.ಇತ್ತ
‘ಮಾರ್ಟಿನ್’ ಅಂಗಳಕ್ಕೆ ಬಂದು ಸೇರಿಕೊಂಡಿರುವ ನಟಿ ವೈಭವಿ ಕೂಡ `Who is martin’ಎಂದು ಕೇಳುತ್ತಾ ಎಕ್ಸ್ ಪ್ರೆಷನ್ ಕೊಟ್ಟಿರುವ ವಿಡಿಯೋ ಝಲಕ್ನ ಹಂಚಿಕೊಂಡಿದ್ದಾರೆ. ಅಲ್ಲಿಗೆ, ಬಹದ್ದೂರ್ ಗಂಡಿಗೆ ಬೆಣ್ಣೆಯಂತಹ ಚೆಲುವೆ ಸಿಕ್ಕಹಾಗೇ ಅಲ್ಲವೇ.
‘ಮಾರ್ಟಿನ್'ಆಕ್ಷನ್ಪ್ರಿನ್ಸ್ ಅಭಿನಯದ ಬಹುನಿರೀಕ್ಷೆಯ ಸಿನಿಮಾ.ಅದ್ದೂರಿ ಜೋಡಿ ಮತ್ತೆ ಒಂದಾಗಿರುವ ಕಾರಣಕ್ಕೆ
‘ಮಾರ್ಟಿನ್’ ಸಿನಿಮಾದ ಮೇಲಿರುವ ನಿರೀಕ್ಷೆ ಮುಗಿಲುಮುಟ್ಟಿದೆ. ನಟ ಧ್ರುವ ಸರ್ಜಾ-ನಿರ್ದೇಶಕ ಎ.ಪಿ ಅರ್ಜುನ್ ಕಾಂಬಿನೇಷನ್ನ `ಮಾರ್ಟಿನ್’ ಚಿತ್ರ ಹೊಸ ಮೇನಿಯಾ ಸೃಷ್ಟಿಸೋದ್ರಲ್ಲಿ ಡೌಟೇ ಇಲ್ಲ ಎನ್ನುವ ಮಾತು ಕೂಡ ಕೇಳಿರ್ತಿದೆ. ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ನಿರ್ಮಾಣಗೊಳ್ತಿರೋ ಈ ಚಿತ್ರಕ್ಕೆ ಉದಯ್. ಕೆ.ಮೆಹ್ತಾ ಬಂಡವಾಳ ಹೂಡಿದ್ದಾರೆ. ಐದು ಭಾಷೆಯಲ್ಲಿ ಅದ್ದೂರಿಯಾಗಿಯೇ ಸಿನಿಮಾ ಬರಬೇಕು ಎಂದು ಅನ್ನದಾತರು ಕೋಟಿ ಕೋಟಿ ಹಣ ಹೂಡಿಕೆ ಮಾಡ್ತಿದ್ದಾರೆ. ಚಿತ್ರತಂಡ ಕೂಡ ಆದಷ್ಟು ಬೇಗ ಸಿನಿಮಾ ಮುಗಿಸಬೇಕು, ವರ್ಷದೊಳಗೆ ಸಿನಿಮಾ ರಿಲೀಸ್ ಮಾಡ್ಬೇಕು ಎನ್ನುವ ಉತ್ಸಾಹದಲ್ಲಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.
ವಿಶಾಲಾಕ್ಷಿ, ಎಂಟರ್ಟೈನ್ಮೆಂಟ್ ಬ್ಯೂರೋ ಸಿನಿಲಹರಿ