ಸ್ಯಾಂಡಲ್ವುಡ್ನ ಯಜಮಾನ, ಬಾಕ್ಸ್ಆಫೀಸ್ನ ಸುಲ್ತಾನ ದರ್ಶನ್, ಐಷರಾಮಿ ಕಾರುಗಳಿಗೆ ಒಡೆಯನಾಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರೋ ಸಂಗತಿ. ಚಾಲೆಂಜಿಂಗ್ ಸ್ಟಾರ್ ಬಳಿ ಕೋಟಿ ಕೋಟಿ ಬೆಲೆ ಬಾಳುವ ಕಾರುಗಳಿವೆ. ಹತ್ತಾರು ಕಾರುಗಳಿಗೆ ಯಜಮಾನರಾಗಿರೋ ದರ್ಶನ್ ಇದೀಗ 90 ಲಕ್ಷ ಮೌಲ್ಯದ ದುಬಾರಿ ಕಾರನ್ನು ಖರೀದಿಸಿದ್ದಾರೆ. ನೆಚ್ಚಿನ ನಟನ ಹೊಸ ಕಾರನ್ನು ನೋಡಿ ಸಂತಸ ವ್ಯಕ್ತಪಡಿಸ್ತಿರೋ ಡಿಬಾಸ್ ಅಭಿಮಾನಿಗಳು, ಸೋಷಿಯಲ್ ಜಗತ್ತಿನಲ್ಲಿ ದಚ್ಚು ಕಾರಿನ ಪೋಟೋಗಳನ್ನು ಹಾಗೂ ವಿಡಿಯೋಗಳನ್ನು ವೈರಲ್ ಮಾಡ್ತಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಕಾರುಗಳಂದ್ರೆ ಬಲು ಪ್ರೀತಿ. ಹೌದು, ಕಾರ್ ಕ್ರೇಜ್ ಹೊಂದಿರುವ ದಚ್ಚು, ವರ್ಷಕ್ಕೊಂದು ಕಾರು ಖರೀದಿ ಮಾಡಿಯೇ ತೀರುತ್ತಾರೆ. ಮಾರುಕಟ್ಟೆಗೆ ಹೊಸ ಮಾಡೆಲ್ ಕಾರು ಬಂದ್ರೆ ಸಾಕು, ಆ ಕಾರಿನ ಮೇಲೆ ಕಣ್ಣು ಬಿದ್ದರೆ ಸಾಕು ಡಿಬಾಸ್ ಅಂಗಳಕ್ಕೆ ಆ ಕಾರು ಬಂದು ನಿಂತಿರುತ್ತೆ. ಅದೇ ರೀತಿ, ಯಜಮಾನರ ಅಖಾಡಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಹೊಸ ಕಾರಿನ ಹೆಸರು ಟೊಯೋಟೋ ವೆಲ್ಫೈರ್. ಟೊಯೋಟೋ ಕಂಪೆನಿಯ ಈ ಕಾರು ಬರೋಬ್ಬರಿ 90 ಲಕ್ಷ ಬೆಲೆ ಬಾಳುತ್ತೆ.
ಅಚ್ಚರಿ ಅಂದರೆ ಇದಕ್ಕಿಂತ ದುಬಾರಿ ಬೆಲೆಯ ಕಾರುಗಳು ಚಕ್ರವರ್ತಿಯ ಅಂಗಳದಲ್ಲಿವೆ. ಹೌದು, ಸುಮಾರು ಐದು ಕೋಟಿ ಬೆಲೆಬಾಳುವ ಲ್ಯಾಂಬೋರ್ಗಿನಿ ಉರುಸ್ ಗಾಡಿ ಸ್ಯಾಂಡಲ್ವುಡ್ ಸಾರಥಿಯನ್ನು ಸವಾರಿ ಮಾಡಿಸುತ್ತಿದೆ. ಹಳದಿ ಹಾಗೂ ಬಿಳಿ ಬಣ್ಣದ ಎರಡು ಲ್ಯಾಂಬೋರ್ಗಿನಿ, ರೇಂಜ್ ರೋವರ್, ಫೋರ್ಡ್ ಮುಸ್ಟಾಂಗ್, ಬಿ ಎಂ ಡಬ್ಲ್ಯೂ, ಹಮ್ಮರ್, ಆಡಿ ಕ್ಯೂ 7, ಜಾಗ್ವಾರ್, ಫಾರ್ಚುನರ್, ಮಿನಿಕೂಪರ್, ಬೆಂಜ್, ಐ 20 ಸೇರಿದಂತೆ ಹಲವು ಐಷರಾಮಿ ಕಾರುಗಳು ಒಡೆಯನ ಬಳಿಯಿವೆ. ಕೋಟ್ಯಾಂತರ ಮಂದಿ ಅಭಿಮಾನಿಗಳು ಆರಾಧಿಸುವ-ಅಭಿಮಾನಿಸುವ ಆರಾಧ್ಯದೈವ ದಾಸನನ್ನು ಕ್ಷೇಮವಾಗಿ-ಸುರಕ್ಷಿತವಾಗಿ ನೋಡಿಕೊಳ್ಳುತ್ತಿವೆ.
ಹೊಸ ಕಾರುಗಳನ್ನು ಪರ್ಚೈಸ್ ಮಾಡಿದಾಗ ತಾಯಿ ಚಾಮುಂಡೇಶ್ವರಿ ಸನ್ನಿಧಿಗೆ ಹೋಗಿ ಪೂಜೆ ಮಾಡಿಸಿಕೊಂಡು ಬರೋದು ವಾಡಿಕೆ. ಅದರಂತೇ, ಗೆಳೆಯರ ಜೊತೆ ಚಾಮುಂಡಿ ತಾಯಿಯ ದರ್ಶನ ಪಡೆದಿದ್ದಾರೆ. ಸ್ನೇಹಿತರ ಜೊತೆ ರೈಡ್ ಹೋಗಿರುವ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಸದ್ಯ, ‘ಕ್ರಾಂತಿ'ಸಿನಿಮಾದಲ್ಲಿ ಡಿಬಾಸ್ ಬ್ಯುಸಿಯಾಗಿದ್ದಾರೆ.ಬೆಂಗಳೂರಿನಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ.ವಿ ಹರಿಕೃಷ್ಣ ನಿರ್ದೇಶನ ಚಿತ್ರಕ್ಕಿದ್ದು,ಶೈಲಜಾ ನಾಗ್ ನಿರ್ಮಾಣದಲ್ಲಿ
‘ಕ್ರಾಂತಿ’ ಮೂಡಿಬರ್ತಿದೆ.
ವಿಶಾಲಾಕ್ಷಿ,ಎಂಟರ್ಟೈನ್ಮೆಂಟ್ ಬ್ಯೂರೋ ಸಿನಿಲಹರಿ