ಭಾರತೀಯ ಚಿತ್ರರಂಗದಲ್ಲಿ ನಯಾ ಇತಿಹಾಸವನ್ನು ಬರೆಯೋದ್ರಲ್ಲಿ ಸಂಶಯವೇ ಇಲ್ಲ ಎಂದು ಹೇಳಲಾಗುತ್ತಿರುವ ಆ ಒಂದು ಚಿತ್ರ ಗಂಧದಗುಡಿಯ ಅಭಿನಯ ಚಕ್ರವರ್ತಿ, ಸ್ಯಾಂಡಲ್ವುಡ್ನ ಬಾದ್ಷಾ ಕಿಚ್ಚ ಸುದೀಪ್ ಅವರ ಕೈ ಸೇರಿದೆ. ಹಾಗಂತ ಆ ಸಿನಿಮಾದಲ್ಲಿ ಕನ್ನಡದ ಮಾಣಿಕ್ಯ ಅಭಿನಯಿಸ್ತಿಲ್ಲ ಬದಲಾಗಿ ಆ ಚಿತ್ರವನ್ನು ಕರುನಾಡ ಮೂಲೆ ಮೂಲೆಗೆ ತಲುಪಿಸುವ ಜವಬ್ದಾರಿಯನ್ನು ಹೊತ್ಕೊಂಡಿದ್ದಾರೆ. ಹಾಗಾದ್ರೆ, ಆ ಮೂವೀ ಯಾವುದು? ಸ್ಯಾಂಡಲ್ವುಡ್ ಬಚ್ಚನ್ಗೆ ಬಿಟೌನ್ ಕ್ಯೂಟ್ ಅಂಡ್ ಮೋಸ್ಟ್ ಟ್ಯಾಲೆಂಟೆಡ್ ಕಪಲ್ಸ್ ರಣವೀರ್ ಹಾಗೂ ದೀಪಿಕಾ ಜೈ ಎಂದಿದ್ದೇಕೆ ? ಈ ಇಂಟ್ರೆಸ್ಟಿಂಗ್ ಸ್ಟೋರಿ ನಿಮ್ಮ ಮುಂದೆ
ಸ್ಯಾಂಡಲ್ವುಡ್ ಬಾದ್ಷಾ ಕಿಚ್ಚ ಸುದೀಪ್ ಸೌತ್ಗೆ ಮಾತ್ರ ಸೀಮಿತವಾಗಿಲ್ಲ ಅದರಾಚೆಗೂ ಬೆಳೆದಿದ್ದಾರೆ. ವರ್ಲ್ಡ್ ವೈಡ್ ಅಭಿಮಾನಿಗಳನ್ನು ಸಂಪಾದನೆ ಮಾಡಿರುವ ರನ್ನ, ಜಗತ್ತಿನ ತುಂಬೆಲ್ಲಾ ಹವಾ ಮೆಂಟೇನ್ ಮಾಡಿದ್ದಾರೆ. ಸ್ಯಾಂಡಲ್ವುಡ್-ಕಾಲಿವುಡ್-ಟಾಲಿವುಡ್-ಬಾಲಿವುಡ್ನಲ್ಲಿ ಧಗಧಗಿಸಿರೋ ಮಾಣಿಕ್ಯನಿಗೆ ಹಾಲಿವುಡ್ ಮಂದಿ ರತ್ನಗಂಬಳಿ ಹಾಸಿದ್ದು ಕನ್ನಡಿಗರ ಕಣ್ಮುಂದೆಯೇ ಇದೆ. ಹೀಗೆ ಇಂಗ್ಲೀಷ್ ಮಂದಿಯ ಕಣ್ಣುಕುಕ್ಕಿರೋ ಕಿಚ್ಚ, ಭಾರತೀಯ ಚಿತ್ರರಂಗ ಕೂತೂಹಲದಿಂದ ಕಾಯ್ತಿರೋ ಹೆಮ್ಮೆಯ ಸಿನಿಮಾವನ್ನು ಕನ್ನಡಿಗರಿಗೆ ತೋರಿಸಬೇಕು ಎಂದು ಹೊರಟಿದ್ದಾರೆ. ಅಷ್ಟಕ್ಕೂ, ಇಂಡಿಯನ್ ಸಿನಿಮಾ ಇಂಡಸ್ಟ್ರಿ ಕಣ್ಣರಳಿಸಿ ಕೂತಿರೋ ಆ ಸಿನಿಮಾ ಬೇರಾವುದು ಅಲ್ಲ… 1983ರಲ್ಲಿ ಇಡೀ ಜಗತ್ತು ಬೆಕ್ಕಸ ಬೆರಗಾಗಿ ಇಂಡಿಯಾದತ್ತ ನೋಡಿದಂತಹ ಆ ಒಂದು ಘಟನೆಯನ್ನು ಆಧರಿಸಿ ಸಿದ್ದಗೊಂಡಿರೋ `83′
ಅಷ್ಟಕ್ಕೂ 1983ರಲ್ಲಿ ಏನ್ ನಡೀತು? ಅದ್ಯಾವ ಐತಿಹಾಸಿಕ ಘಟನೆಗೆ ಭಾರತ ಸಾಕ್ಷಿಯಾಯ್ತು ಅಂತ ನಿಮ್ಮೆಲ್ಲರಿಗೂ ಗೊತ್ತೆಯಿದೆ. ಭಾರತೀಯರು ಮಾತ್ರವಲ್ಲ ಜಗತ್ತಿನಾದ್ಯಂತ ಯಾರೂ ಊಹಿಸದ ಚರಿತ್ರ್ಯೆ ಇತಿಹಾಸದ ಪುಟಗಳಲ್ಲಿ ದಾಖಲಾಯ್ತು. ಹೌದು, 1983ರಲ್ಲಿ ಕಪಿಲ್ ದೇವ್ ನಾಯಕತ್ವದ ಭಾರತೀಯ ತಂಡ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ ಮೊದಲ ಭಾರಿಗೆ ಭಾರತಕ್ಕೆ ವಿಶ್ವಕಪ್ ತಂದುಕೊಟ್ಟರು. ಅಲ್ಲಿವರೆಗೂ ಕ್ರಿಕೆಟ್ ಸಾಮ್ರಾಜ್ಯವನ್ನು ಆಳುತ್ತಿದ್ದ ವಿಂಡೀಸ್ ತಂಡಕ್ಕೆ ಮಣ್ಣುಮುಕ್ಕಿಸಿ ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ಭಾರತೀಯರು ವರ್ಲ್ಡ್ ಕಪ್ನ ಎತ್ತಿಹಿಡಿದರು. ಈ ಮೂಲಕ ಯಾರೂ ತಿಕ್ಕಿ ಅಳಿಸಲಾಗದ ಇತಿಹಾಸ ಸೃಷ್ಟಿಗೆ ಕಾರಣಕರ್ತರಾದರು. ಈಗ ಇದೇ ರೋಚಕ ಘಟನೆ ಬೆಳ್ಳಿತೆರೆ ಮೇಲೆ ರಾರಾಜಿಸಲಿದೆ. ಕಬೀರ್ ಖಾನ್ ನಿರ್ದೇಶನದಲ್ಲಿ `83′ ಹೆಸರಲ್ಲಿ ಸಿನಿಮಾ ಅದ್ದೂರಿಯಾಗಿ ಮೂಡಿಬಂದಿದೆ.
ಕಪಿಲ್ ದೇವ್ ಪಾತ್ರಕ್ಕೆ ಬಿಟೌನ್ ಹ್ಯಾಂಡ್ಸಮ್ ಹಂಕ್ ರಣವೀರ್ ಸಿಂಗ್ ಜೀವ ತುಂಬಿದ್ದಾರೆ. ಕಪಿಲ್ ದೇವ್ ಪತ್ನಿ ರೂಮಿ ಭಾಟಿಯಾ ಪಾತ್ರದಲ್ಲಿ ನಟಿ ದೀಪಿಕಾ ಮಿಂಚಿದ್ದಾರೆ. ರಿಯಲ್ ಲೈಫ್ನಲ್ಲಿ ಸತಿಪತಿಗಳಾಗಿರುವ ವೀರ್-ಡಿಪ್ಪಿ `83′ ಚಿತ್ರದಲ್ಲಿ ಪತಿ-ಪತ್ನಿಯಾಗಿಯೇ ಕಾಣಿಸಿಕೊಂಡಿದ್ದಾರೆ. ಸುನೀಲ್ ಗಾವಸ್ಕರ್ ಪಾತ್ರಕ್ಕೆ ತಹೀರ್ ರಾಜ್ ಭಾಸಿನ್, ಪಿ,ಆರ್ ಮಾನ್ಸಿಂಗ್ ಪಾತ್ರದಲ್ಲಿ ಪಂಕಜ್ ತ್ರಿಪಾಠಿ, ಕೃಷ್ಣಮಾಚಾರಿ ಶ್ರೀಕಾಂತ್ ಪಾತ್ರದಲ್ಲಿ ಜೀವಾ, ಮೊಹಿಂದರ್ ಅಮರನಾಥ್ ಪಾತ್ರಕ್ಕೆ ಸಾಕಿಬ್ ಸಲೀಂ, ಸಂದೀಪ್ ಪಾಟೀಲ್ ಪಾತ್ರಕ್ಕೆ ಚಿರಾಗ್ ಪಾಟೀಲ್ ಜೀವತುಂಬಿ ಅಭಿನಯಿಸಿದ್ದಾರೆ. ಸದ್ಯ ಇದರ ಟೀಸರ್ ರಿಲೀಸ್ ಆಗಿದ್ದು ಕ್ರಿಕೆಟ್ ಪ್ರೇಮಿಗಳನ್ನು ಮಾತ್ರವಲ್ಲ ಚಿತ್ರ ಪ್ರೇಮಿಗಳನ್ನು ಕೂಡ ಹುಚ್ಚೆಬ್ಬಿಸಿದೆ.
ಇಂಟ್ರೆಸ್ಟಿಂಗ್ ಅಂದರೆ ‘83'ಪ್ಯಾನ್ ಇಂಡಿಯಾ ತುಂಬೆಲ್ಲಾ
’83’ ಚಿತ್ರವನ್ನು ಕರುನಾಡಿನ ಮೂಲೆ ಮೂಲೆಗೂ ತಲುಪಿಸುವ ಜವಬ್ದಾರಿಯನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೊತ್ತುಕೊಂಡಿದ್ದಾರೆ. ಇದೇ ಡಿಸೆಂಬರ್ 24 ರಂದು ಸಿನಿಮಾ ಜಗತ್ತಿನಾದ್ಯಂತ ತೆರೆಗೆ ಬರುತ್ತಿದೆ. ನಟಿ ದೀಪಿಕಾ ಪಡುಕೋಣೆ ಹಾಗೂ ನಿರ್ದೇಶಕ ಕಬೀರ್ ಖಾನ್ ಸಹನಿರ್ಮಾಪಕರಾಗಿದ್ದು, ಕರ್ನಾಟಕದಲ್ಲಿ `83′ ಡಿಸ್ಟ್ರಿಬ್ಯೂಟ್ ಮಾಡೋದಕ್ಕೆ ಕಿಚ್ಚನಿಗೆ ಒಪ್ಪಿಗೆ ಕೊಟ್ಟಿದ್ದಾರೆ.ಬಿಡುಗಡೆಯಾಗ್ತಿ ರುವುದು
.ಯಸ್,ಮೂಲ ಹಿಂದಿ ಭಾಷೆಯಲ್ಲಿ ನಿರ್ಮಾಣಗೊಂಡಿದೆಯಾದರೂ ಕೂಡ ಕನ್ನಡ-ತೆಲುಗು-ತಮಿಳು-ಮಲೆಯಾಳಂ ಭಾಷೆಗೆ ಡಬ್ ಆಗ್ತಿದೆ. ಕನ್ನಡ ಭಾಷೆಯಲ್ಲಿ ಡಬ್ ಆಗಿರುವ
ಬಾದ್ ಷಾ ಸುದೀಪ್ಗೆ ಸಿನಿಮಾ ಮೇಲೆ ಎಷ್ಟು ಪ್ರೀತಿ ಮತ್ತು ಆಸಕ್ತಿ ಇದೆಯೋ ಅಷ್ಟೇ ಪ್ರೀತಿ ಮತ್ತು ಆಸಕ್ತಿ ಕ್ರಿಕೆಟ್ ಮೇಲೆ ಕೂಡ ಇದೆ. ಹೀಗಾಗಿಯೇ, ‘ಸೆಲೆಬ್ರಿಟಿ ಕ್ರಿಕೆಟ್ ಲೀಗ್'ನಂತಹ ತಂಡ ಕಟ್ಟಿ ಸ್ಟಾರ್ಗಳನ್ನು ಒಟ್ಟುಗೂಡಿಸಿದ್ದು.ನಾವೆಲ್ಲರೂ ಒಂದೇ ಎನ್ನುವ ಒಗ್ಗಟ್ಟಿನ ಮಂತ್ರದ ಜೊತೆಗೆ ಕ್ರಿಕೆಟ್ ಪ್ರೇಮವನ್ನು ಹೊರಗಾಕಿದ್ದರು.ಟೈಮ್ ಸಿಕ್ಕಾಗ ಮೈದಾನಕ್ಕಿಳಿದು ಬ್ಯಾಟ್ ಬೀಸುವ,ಫ್ಲೈಟ್ ಏರಿ ಕ್ರಿಕೆಟ್ ನೋಡಲಿಕ್ಕೆ ಹೊರದೇಶಕ್ಕೂ ಹೋಗಿಬರುವ ಕಿಚ್ಚ,ಕ್ರಿಕೆಟ್ ಮೇಲಿನ ಪ್ರೀತಿಗಾಗಿ ವರ್ಲ್ಡ್ ಕಪ್ ಕಥೆಯ
’83’ ಚಿತ್ರವನ್ನು ಕನ್ನಡಿರಿಗೆ ತೋರ್ಸೋಕೆ ಹೊರಟಿದ್ದಾರೆ. ಶುಭವಾಗಲಿ ಕೋಟಿಗೊಬ್ಬ
ಎಂಟರ್ಟೈನ್ಮೆಂಟ್ ಬ್ಯೂರೋ ಸಿನಿಲಹರಿ