ಡಿಫೆರೆಂಟ್ ಟೈಟಲ್ ಮೂಲಕವೇ ಸ್ಯಾಂಡಲ್‌ವುಡ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಾ ಬಂದಿದ್ದ ಮಡ್ಡಿ ಹೆಸರಿನ ಚಿತ್ರ ಇದೇ ಡಿಸೆಂಬರ್ 10 ಕ್ಕೆ ಗ್ರಾಂಡ್ ರಿಲೀಸ್ ಆಗುತ್ತಿದೆ. ಕನ್ನಡದ ಜತೆಗೆ ತೆಲುಗು, ತಮಿಳು, ಹಿಂದಿ, ಮಲಯಾಳಂ, ಇಂಗ್ಲೀಷ್ ಭಾಷೆಗಳಲ್ಲೂ ತೆರೆಗೆ ಬರುತ್ತಿದೆ. ಇದೊಂದು ಹೊಸಬರ ಚಿತ್ರವಾದರೂ ಸಿನಿಮಾ ನಿರ್ಮಾಣದಲ್ಲಿ ಸಾಕಷ್ಟು ಪಳಗಿದ ಅನುಭವಿಗಳೇ ಸೇರಿಕೊಂಡು ನಿರ್ಮಾಣ ಮಾಡಿದ ಅಂತಾರಾಷ್ಟ್ರೀಯ ಗುಣಮಟ್ಟದ ಸಿನಿಮಾ ಇದು. ಹಾಗಂತ ಚಿತ್ರ ತಂಡ ಮಾತು.
ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದು ಮಡ್ ರೇಸ್ ಕುರಿತ ಚಿತ್ರ. ಕಳೆದ ಐದು ವರ್ಷಗಳ ಕಾಲ ಮಡ್ ರೇಸ್ ಬಗ್ಗೆ ಅಧ್ಯಯನ ನಡೆಸಿ ಈ ಕಥೆ ಸಿದ್ದಪಡಿಸಿದ್ದೇನೆ. ಇದು ಎರಡು ತಂಡಗಳ ನಡುವಿನ ಸ್ಪರ್ಧೆಯ ವಿಶೇಷತೆ ಇರುವ ಚಿತ್ರ. ಇದರ ಜತೆಗೆ ಫ್ಯಾಮಿಲಿ ಸೆಂಟಿಮೆಂಟ್, ಭಾವನಾತ್ಮಕ ಅಂಶಗಳು ಮತ್ತು ಸಾಹಸದ ತಿರುವುಗಳನ್ನೂ ಈ ಸಿನಿಮಾದಲ್ಲಿ ಮಿಕ್ಸ್ ಆಗಿವೆ.
- ನಿರ್ದೇಶ ಕ ಪ್ರಗ್ಬಲ್ ದಾಸ್.
ಪಿಕೆ7 ಪ್ರೊಡಕ್ಷನ್ಸ್ ಹೌಸ್ ಅಡಿಯಲ್ಲಿ ಪ್ರೇಮ್ ಕೃಷ್ಣ ದಾಸ್ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹಾಕಿದ್ದು, ಡಾ. ಪ್ರಗ್ಬಲ್ ದಾಸ್ ಆಕ್ಷನ್ ಕಟ್ ಹೇಳಿದ್ದಾರೆ. ಅವರಿಗಿದು ಮೊದಲ ಹೆಜ್ಜೆ. ಚಿತ್ರದ ಮೊದಲ ಟೀಸರ್ ಕೆಲ ತಿಂಗಳ ಹಿಂದಷ್ಟೇ ಬಿಡುಗಡೆ ಆಗಿದ್ದು, ಅಭೂತಪೂರ್ವ ಮೆಚ್ಚುಗೆ ಪಡೆದುಕೊಂಡಿದೆ. ಈಗ ಬಿಡುಗಡೆಯ ಹೊಸ್ತಿಲಿಗೆ ಬಂದಿದೆ. ಅದೇ ರೀತಿ ಚಿತ್ರಕ್ಕೆ ಒಟಿಟಿಯಲ್ಲಿ ಬಹು ಬೇಡಿಕೆ ಇದ್ದರೂ, ಚಿತ್ರಮಂದಿರದಲ್ಲಿಯೇ ಸಿನಿಮಾ ರಿಲೀಸ್ ಮಾಡಲು ತಂಡ ನಿರ್ಧರಿಸಿದೆ.
ಒಟ್ಟು 13 ಕ್ಯಾಮರಾಗಳನ್ನು ಈ ಚಿತ್ರದ ಶೂಟಿಂಗ್ ನಲ್ಲಿ ಬಳಕೆ ಮಾಡಿಕೊಳ್ಳಲಾಗಿದೆಯಂತೆ. ಸ್ಯಾನ್ ಲೋಕೇಶ್ ಸಂಕಲನ, ರವಿ ಬಸ್ರೂರು ಚಿತ್ರಕ್ಕೆ ಸಂಗೀತ ಹಾಗೂ ಹಾಲಿವುಡ್ ಸಿನಿಮಾಗಳ ಛಾಯಾಗ್ರಹಣ ವಿಭಾಗದಲ್ಲಿ ಕೆಲಸ ಮಾಡಿರುವ ಕೆ.ಜಿ ರತೀಶ್ ಅವರ ಛಾಯಾಗ್ರಹಣದ ಕೈ ಚಳಕ ಈ ಚಿತ್ರದಲ್ಲಿದೆ. ನೈಸರ್ಗಿಕ ಅರಣ್ಯ ಪ್ರದೇಶದಲ್ಲಿ ಇಡೀ ಸಿನಿಮಾದ ಶೂಟಿಂಗ್ ಆಗಿದ್ದು, ಸಿಂಕ್ ಸೌಂಡ್ ಟೆಕ್ನಾಲಜಿ ಬಳಸಿ ಸಿನಿಮಾ ಮೂಡಿಬಂದಿದ್ದು, ಬಹುತೇಕ ಹೊಸಬರೇ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಯುವನ್, ರಿಧಾನ್ ಕೃಷ್ಣ, ಅನುಷಾ ಸುರೇಶ್, ಅಮಿತ್ ಶಿವದಾಸ್ ನಾಯರ್, ಹರೀಶ್ ಪೆರಾಡಿ, ವಿಜಯನ್, ರೆಂಜಿ ಪೆನಿಕರ್ ತಾರಾಗಣದಲ್ಲಿದ್ದಾರೆ.
ಚಿತ್ರದ ಟೈಟಲೇ ಹೇಳುವ ಹಾಗೆ ಇದು ಮಡ್ ರೇಸ್ ಕುರಿತ ಕಥಾ ಹಂದರ ಚಿತ್ರ. ಚಿತ್ರದ ನಿರ್ದೇಶಕರು ಕಳೆದ ಐದು ವರ್ಷಗಳ ಕಾಲ ಮಡ್ ರೇಸ್ ಬಗ್ಗೆ ಅಧ್ಯಯನ ನಡೆಸಿ ಈ ಕಥೆ ಸಿದ್ದಪಡಿಸಿದ್ದಾರಂತೆ. ಹಾಗಾದ್ರೆ ಆ ರೇಸ್ ವಿಶೇಷತೆ ಏನು ಅನ್ನೋದು ಚಿತ್ರದ ಒಳಗಿನ ಕಥಾಹಂದರ.ʼ ಇದು ಎರಡು ತಂಡಗಳ ನಡುವಿನ ಸ್ಪರ್ಧೆಯ ವಿಶೇಷತೆ ಇರುವ ಚಿತ್ರ. ಇದರ ಜತೆಗೆ ಫ್ಯಾಮಿಲಿ ಸೆಂಟಿಮೆಂಟ್, ಭಾವನಾತ್ಮಕ ಅಂಶಗಳು ಮತ್ತು ಸಾಹಸದ ತಿರುವುಗಳನ್ನೂ ಈ ಸಿನಿಮಾದಲ್ಲಿ ಮಿಕ್ಸ್ ಆಗಿವೆ ಎನ್ನುತ್ತಾರೆ ನಿರ್ದೇಶ ಕ ಪ್ರಗ್ಬಲ್ ದಾಸ್. ಚಿತ್ರದ ಮೋಷನ್ ಪೋಸ್ಟರ್ ಅನ್ನು ಈ ಹಿಂದೆ ಕಾಲಿವುಡ್ ನಟ ವಿಜಯ್ ಸೇತುಪತಿ, ಕನ್ನಡದಲ್ಲಿ ಶ್ರೀಮುರಳಿ, ಬಾಲಿವುಡ್ ನಟ ಅರ್ಜುನ್ ಕಪೂರ್ ಬಿಡುಗಡೆ ಮಾಡಿದ್ದರು. ಅದಾದ ಬಳಿಕ ಹಲವು ಭಾಷೆಗಳ ಟೀಸರ್ ಅನ್ನು ಶಿವರಾಜಕುಮಾರ್, ಫಹಾದ್ ಪಾಸಿಲ್, ಉನ್ನಿ ಮುಕುಂದನ್, ಅಪರ್ಣ ಬಾಲಮುರಳಿ ಸೇರಿ ಹಲವು ಸ್ಟಾರ್ ನಟರು ಬಿಡುಗಡೆ ಮಾಡಿದ್ದರು.ಇದೀಗ ಈ ಬಹುನಿರೀಕ್ಷಿತ ಸಿನಿಮಾ ಡಿ.10ಕ್ಕೆ ಚಿತ್ರ ಬಿಡುಗಡೆ ಆಗುತ್ತಿದೆ.
– ಎಂಟರ್ ಟೈನ್ ಮೆಂಟ್ ಬ್ಯುರೋ ಸಿನಿಲಹರಿ