ಗೋಲ್ಡನ್ ಸ್ಟಾರ್ ಗಣೇಶ್ ಸನ್ ವಿಹಾನ್ಗೆ ದಿವ್ಯ ಕನಸುಗಳಿವೆ. ಆದರೆ, ಎರಡೇ ಎರಡೇ ಕನಸುಗಳನ್ನು ಕ್ಯಾಮೆರಾ ಮುಂದೆ ಹೇಳಿಕೊಂಡಿದ್ದಾನೆ. ಅದರಲ್ಲಿ ಮೊದಲನೆಯ ಕನಸು ಸಂಗೀತ ಲೋಕದ ಸ್ವರ ಸಾಮ್ರಾಟ, ಗಾನ ಗಾರುಡಿಗ ಎಸ್ಪಿಬಿಯವರಂತಾಗಬೇಕು ಎನ್ನುವುದು. ಎರಡನೆಯದು ಇಳೆಯರಾಜ ಆಗ್ಬೇಕು ಎನ್ನುವ ಮಹದಾಸೆ. ಈ ದಿವ್ಯ ಕನಸು ಸದ್ಯಕ್ಕೆ ಸಖತ್' ಸಿನ್ಮಾದ ರೀಲ್ಗಷ್ಟೇ ಸೀಮಿತವಾಗಿರಬಹುದು. ಆದರೆ, ಮನಸ್ಸು ಮಾಡಿದರೆ ಯಾವುದು ಅಸಾಧ್ಯವಲ್ಲ ಅಲ್ಲವೇ. ಅಷ್ಟಕ್ಕೂ, ವಿಹಾನ್ ನಾನ್ ಎಸ್.ಪಿ ಬಾಲು ಆಗ್ಬೇಕು, ಇಳೆಯರಾಜ ಆಗ್ಬೇಕು ಅಂತ ಹೇಳಿದ್ದು
ಸಖತ್’ ಸಿನಿಮಾಗಾಗಿ. ಹೌದು, `ಸಖತ್’ ಸಿನ್ಮಾ ಬಿಡುಗಡೆಗೆ ಸಜ್ಜಾಗಿದ್ದು ಜೂನಿಯರ್ ಬಾಲು ಪಾತ್ರದ ಟೀಸರ್ ಹೊರಬಿದ್ದಿದೆ. ಅದರಲ್ಲಿ ಎಸ್ಪಿಬಿ ಹಾಗೂ ಇಳೆಯರಾಜ ಆಗುವ ಸಂಭಾಷಣೆ ರಿವೀಲ್ ಆಗಿದೆ
ಸಖತ್' ಗೋಲ್ಡನ್ಸ್ಟಾರ್ ಗಣೇಶ್ ಅಭಿನಯದ ಮೋಸ್ಟ್ ಎಕ್ಸ್ ಪೆಕ್ಟೆಡ್ ಚಿತ್ರ. ಸಿಂಪಲ್ ಸುನಿ ಹಾಗೂ ಗಣಿ ಎರಡನೇ ಭಾರಿ ಒಂದಾಗಿ ಮಾಡಿರುವ ಸಿನಿಮಾ. ಬೆಳ್ಳಿತೆರೆ ಮೇಲೆ ಚಮಕ್ ಮಾಡಿ ಸಿನಿರಸಿಕರ ಹೃದಯ ಗೆದ್ದಿದ್ದ ಈ ಜೋಡಿ ಮತ್ತೆ ಒಂದಾಗಿ
ಸಖತ್’ ಮಾಡಿರುವ ಕಾರಣಕ್ಕೆ ಚಿತ್ರದ ಮೇಲಿರುವ ನಿರೀಕ್ಷೆ ದುಪ್ಪಟ್ಟಾಗಿದೆ. ಮಳೆ ಹುಡುಗನ ನಯಾ ಲುಕ್-ಗೆಟಪ್ನ ಜೊತೆಗೆ ಪಾತ್ರದ ಮೇಲೆ ಕೂತೂಹಲ ಗರಿಗೆದರಿದೆ. ಗಣಿ ನಿಜಕ್ಕೂ ಕುರುಡನ ಪಾತ್ರ ಮಾಡಿದ್ದಾರಾ? ಅಥವಾ ಟೀಸರ್ನಲ್ಲಿ ಕುರುಡನಂತೆ ಅಭಿನಯಿಸಿ ಸಿಲ್ವರ್ಸ್ಕ್ರೀನ್ ಮೇಲೆ ಬಂದಾಗ ಚಮಕ್ ಕೊಡ್ತಾರಾ ಎನ್ನುವ ಸಣ್ಣದೊಂದು ಸಂಶಯ ಎಲ್ಲರನ್ನೂ ಕೌತುಕದಿಂದ ಕಾಯುವಂತೆ ಮಾಡಿದೆ. ಈ ಮಧ್ಯೆ ಬಿಡುಗಡೆಗೊಂಡಿರುವ ಗೋಲ್ಡನ್ ಸನ್ ಟೀಸರ್ ನಿರೀಕ್ಷೆ ಹೆಚ್ಚಿಸಿದೆ. ಜೂನಿಯರ್ ಬಾಲು ಪಾತ್ರ ನೋಡುಗರ ಗಮನ ಸೆಳೆಯುತ್ತಿದೆ.
ಜೂನಿಯರ್ ಬಾಲು ಪಾತ್ರಕ್ಕೆ ವಿಹಾನ್ ಜೀವತುಂಬಿದ್ದಾನೆ. ಅಂದ್ಹಾಗೇ, ವಿಹಾನ್ ಗಂಧದಗುಡಿಯ ಗೋಲ್ಡನ್ಸ್ಟಾರ್ ಪುತ್ರ. ಚಿನ್ನದ ಸ್ಪೂನ್ ಬಾಯಲ್ಲಿಟ್ಟುಕೊಂಡೇ ಧರೆಗಿಳಿದಿರೋ ವಿಹಾನ್ ಸಿಕ್ಕಾಪಟ್ಟೆ ಚೂಟಿ ಅಷ್ಟೇ ಟ್ಯಾಲೆಂಟೆಡ್. ಅಪ್ಪ-ಅಮ್ಮನಂತೆ ಅದ್ಬುತ ಪ್ರತಿಭೆಯುಳ್ಳ ಹಾಗೂ ಹೈಪರ್ ಆಕ್ಟೀವ್ ಇರುವ ವಿಹಾನ್ ಬಾಲ್ಯದಿಂದಲೇ ಮುಖಕ್ಕೆ ಬಣ್ಣ ಹಚ್ಚಿಕೊಂಡು ಬಣ್ಣದ ಲೋಕದಲ್ಲಿ ಮೆರೆಯುತ್ತಿದ್ದಾರೆ. ತನ್ನಂತೆ ತನ್ನ ಮಗ ಮಾಯಲೋಕದಲ್ಲಿ ಮಿಂಚಬೇಕು ಎನ್ನುವ ಕನಸೊತ್ತಿರುವ ಗಣಿ ತನ್ನ ಅಭಿನಯದ ಸಿನಿಮಾಗಳ ಮೂಲಕ ಮಗನನ್ನು ಬೆಳ್ಳಿತೆರೆಗೆ ಪರಿಚಯಿಸುತ್ತಿದ್ದಾರೆ. ಜೂನಿಯರ್ ಗೋಲ್ಡನ್ ಸ್ಟಾರ್ ತಂದೆಯಂತೆ ಬಣ್ಣದ ಲೋಕದಲ್ಲಿ ಮಿಂಚೋದಕ್ಕೆ ಒಂದೊಂದು ಹೆಜ್ಜೆ ಇಟ್ಟುಕೊಂಡು ಮುನ್ನಡೆಯುತ್ತಿದ್ದಾರೆ.
ಹೌದು, ಅಪ್ಪನ ಗೀತಾ' ಚಿತ್ರದ ಮೂಲಕ ಬಿಗ್ಸ್ಕ್ರೀನ್ಗೆ ಲಗ್ಗೆ ಇಟ್ಟ ವಿಹಾನ್, ಜೂನಿಯರ್ ಗೋಲ್ಡನ್ ಸ್ಟಾರ್ ಆಗಿ
ಗೀತಾ’ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡರು. ಅಪ್ಪನ ಬಾಲ್ಯದ ಪಾತ್ರಕ್ಕೆ ಬಣ್ಣ ಹಚ್ಚಿದ ವಿಹಾನ್ ತನ್ನ ಪಾತ್ರಕ್ಕೆ ತಾನೇ ಡಬ್ಬಿಂಗ್ ಮಾಡಿಕೊಟ್ಟು ಅಪ್ಪನಿಂದ ಮಾತ್ರವಲ್ಲ ಪ್ರೇಕ್ಷಕ ಮಹಾಷಯರಿಂದ ಸೈ ಎನಿಸಿಕೊಂಡಿದ್ದ.
ಇದೀಗ ತಂದೆಯ ಬಹುನಿರೀಕ್ಷಿತ ಸಖತ್' ಚಿತ್ರದಲ್ಲಿ ಜೂನಿಯರ್ ಗಣಪನಾಗಿ ಅಬ್ಬರಿಸಿದ್ದಾನೆ. ಈ ಚಿತ್ರಕ್ಕೂ ವಿಹಾನ್ ಡಬ್ಬಿಂಗ್ ಮಾಡಿದ್ದು, ಮಗನ ಅಭಿನಯಕ್ಕೆ ಹಾಗೂ ಮಾತಿಗೆ ಗೋಲ್ಡನ್ ಸ್ಟಾರ್ ಗಣೇಶ್ ಅವ್ರೇ ಫಿದಾ ಆಗಿದ್ದಾರೆ. ರಿಲೀಸ್ ಆಗಿ ಯೂಟ್ಯೂಬ್ನಲ್ಲಿ ಕುಣಿಯುತ್ತಿರುವ ಟೀಸರ್ ನೋಡಿ ಗಣಿ ದಿಲ್ ಖುಷ್ ಆಗಿದ್ದಾರೆ. ಇನ್ನೇನಿದ್ರು ಅಭಿಮಾನಿ ದೇವರುಗಳು ಥಿಯೇಟರ್ಗೆ ಬಂದು ಸಿನಿಮಾ ನೋಡಿ ಅಪ್ಪ-ಮಗನ
ಸಖತ್’ ಸಿನಿಮಾ ಎಷ್ಟು ಸಖತ್ತಾಗಿದೆ ಅನ್ನೋದನ್ನು ತಿಳಿಸಬೇಕು.
ಎಂಟರ್ಟೈನ್ಮೆಂಟ್ ಬ್ಯೂರೋ ಸಿನಿಲಹರಿ