ಸದ್ಯ ಭಾರತೀಯ ಚಿತ್ರರಂಗದಲ್ಲಿ ಆರ್ಆರ್ಆರ್ ಜೋರು ಸದ್ದು ಮಾಡುತ್ತಿರುವ ಚಿತ್ರ. ಇದಕ್ಕೆ ಕಾರಣ, ರಾಜಮೌಳಿ ನಿರ್ದೇಶನದ ಚಿತ್ರ. ಅಷ್ಟೇ ಅಲ್ಲ, ಜೂ.ಎನ್ಟಿಆರ್,ರಾಮ್ ಚರಣ್, ಅಜಯ್ ದೇವಗನ್ ಮತ್ತು ಆಲಿಯಾ ಭಟ್ ಸೇರಿದಂತೆ ಇತರೆ ಸ್ಟಾರ್ ನಟರು ನಟಿಸಿರೋದು. ಇದಷ್ಟೇ ಅಲ್ಲ, ಇದು ಕನ್ನಡದಲ್ಲೂ ರಿಲೀಸ್ ಆಗುತ್ತಿರುವುದು ಮತ್ತೊಂದು ವಿಶೇಷ. ಹೌದು, ಆರ್ಆರ್ಆರ್ ಬಹುನಿರೀಕ್ಷೆಯ ಸಿನಿಮಾ. ಜನರು ಸಿನಿಮಾ ನೋಡಲು ಕಾತುರದಲ್ಲಿದ್ದಾರೆ
. ಸಿನಿಮಾ ಬಿಡುಗಡೆ ಮುನ್ನವೇ ನಿರ್ದೇಶಕ ರಾಜಮೌಳಿ ಮುಂಬೈಗೆ ಹೋಗಿ, ಅಲ್ಲಿ ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡಿದ್ದರು. ಅದು ಸಾಕಷ್ಟು ಸುದ್ದಿಯಾಗಿತ್ತು. ರಾಜಮೌಳಿ ನಿರ್ದೇಶನವೆಂದರೆ, ಒಂದಷ್ಟು ಕುತೂಹಲ ಇದ್ದೇ ಇರುತ್ತದೆ. ಈ ಸಿನಿಮಾದ ಮೇಲೂ ಸಾಕಷ್ಟು ನಿರೀಕ್ಷೆ ಇದೆ. ಆರ್ಆರ್ಆರ್ ಸಿನಿಮಾದ ಪ್ರಚಾರ ಕಾರ್ಯ ಎಲ್ಲೆಡೆ ಹಬ್ಬಿದೆ. ಈಗ ಬೆಂಗಳೂರಿಗೂ ಚಿತ್ರತಂಡ ಭೇಟಿ ಕೊಡುತ್ತಿದೆ ಅನ್ನುವುದು ವಿಶೇಷತೆಗಳಲ್ಲೊಂದು. ನವೆಂಬರ್ 26ರಂದು ಬೆಂಗಳೂರಿಗೆ ಆರ್ಆರ್ಆರ್ ಸಿನಿಮಾ ತಂಡ ಆಗಮಿಸಲಿದ್ದು, ಚಿತ್ರದ ಪ್ರಚಾರ ಮಾಡಲಿದೆ.
ಆರ್ಆರ್ಆರ್ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ತೆಲುಗು, ತಮಿಳು, ಕನ್ನಡ, ಹಿಂದಿ, ಮಲಯಾಳಂನಲ್ಲೂ ರಿಲೀಸ್ ಆಗುತ್ತಿದೆ. ಕನ್ನಡಕ್ಕೂ ಡಬ್ ಆಗಿ ಈ ಚಿತ್ರ ತೆರೆಗೆ ಬರುತ್ತಿರುವುದು ವಿಶೇಷ. ಹಾಗಾಗಿಯೇ ಚಿತ್ರತಂಡ ‘ಆರ್ಆರ್ಆರ್’ ಸಿನಿಮಾದ ಪ್ರಚಾರ ಕಾರ್ಯವನ್ನು ಬೆಂಗಳೂರಿನಲ್ಲಿ ಮಾಡುತ್ತಿದ್ದಾರೆ.
ಡಿಸೆಂಬರ್ ಮೊದಲ ವಾರದಲ್ಲಿ ಆರ್ಆರ್ಆರ್ ಚಿತ್ರದ ಟ್ರೇಲರ್ ರಿಲೀಸ್ ಆಗಲಿದೆ. ಈಗಾಗಲೇ ಚಿತ್ರದ ಟೀಸರ್ಗಳು ಮತ್ತು ಹಾಡುಗಳು ಜೋರಾಗಿಯೇ ಸೌಂಡು ಮಾಡಿವೆ. ಆರ್ಆರ್ಆರ್ ಟ್ರೇಲರ್ ಕನ್ನಡದಲ್ಲೂ ರಿಲೀಸ್ ಆಗಲಿದೆ. ಚಿತ್ರದ ಹಾಡುಗಳು ಕನ್ನಡದಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದಿವೆ.