ಹಾಲಿವುಡ್‌ಗೆ ಜಿಗಿದರಾ ಕಿರಿಕ್ ಬೆಡಗಿ ರಶ್ಮಿಕಾ ? ವಿದೇಶಕ್ಕೆ ಹಾರಿದ್ದು `ಅವೆಂಜರ್ಸ್’ ಚಿತ್ರದಲ್ಲಿ ಅಭಿನಯಿಸೋಕಾ ?

ಸೌತ್ ಸಿನ್ಮಾ ಇಂಡಸ್ಟ್ರಿಯನ್ನಾಳುತ್ತಿರುವ ಸ್ಯಾಂಡಲ್‌ವುಡ್ ಕ್ವೀನ್ ರಶ್ಮಿಕಾ ಮಂದಣ್ಣಂಗೆ ಹಾಲಿವುಡ್ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಗ್ತಾ ? ಇಡೀ ಜಗತ್ತು ಬೆಕ್ಕಸ ಬೆರಗಾಗಿ ನೋಡಿದ ಹಾಲಿವುಡ್ ಸಿನಿಮಾ ಅವೆಂಜರ್ಸ್ ಸೀಕ್ವೆಲ್‌ನಲ್ಲಿ ನಟಿಸುವ ಚಾನ್ಸ್ ನ್ಯಾಷನಲ್ ಕ್ರಷ್ ರಶ್ಮಿಕಾಗೆ ಸಿಕ್ಕಿದೆಯಾ? ಮುಂಬೈನಿಂದ ವಿದೇಶಕ್ಕೆ ಹಾರಿದ್ದು ಹಾಲಿಡೇ ವೆಕೇಷನ್‌ಗಾಗಿಯಾ ಅಥವಾ ಇಂಗ್ಲೀಷ್ ಸಿನಿಮಾಗಾಗಿಯಾ? ಈ ಭಾರಿ ನಿನ್ನಿಂದ ಸ್ವಲ್ಪ ದೂರ ಹೋಗ್ತಿದ್ದೀನಿ.. ಆದರೆ ಆದಷ್ಟು ಬೇಗ ವಾಪಾಸ್ ಬರ‍್ತೀನಿ' ಅಂತ ಟ್ವೀಟ್ ಮಾಡಿ ರಶ್ಮಿಕಾ ಹೇಳಿದ್ದು ಯಾರಿಗೆ?ದಿ ನೆಕ್ಸ್ಟ್ ಕಾಸ್ಟಿಂಗ್ ಆಫ್ ಅವೆಂಜ‌ರ್ಸ್ ರಶ್ಮಿಕಾ ಅಂಡ್ ಔರಾ…ಹೀಗಂತ ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಫಾರಿನ್‌ಗೆ ಹಾರುವ ಸೂಚನೆ ಕೊಟ್ಟಿದ್ದು ಹಾಲಿವುಡ್ ಮೂವಿಗೋಸ್ಕರವಾ? ಈ ಎಲ್ಲಾ ಪ್ರಶ್ನೆಗಳು ಒಟ್ಟೊಟ್ಟಿಗೆ ಮೂಡೋದಕ್ಕೆ ಕಾರಣ ಪೊಗರು ಪೋರಿಯ ಪಾಸ್‌ಪೋರ್ಟ್ ಅಂಡ್ ಟ್ವೀಟು…

ದಿ ನೆಕ್ಸ್ಟ್ ಕಾಸ್ಟಿಂಗ್ ಆಫ್ ಅವೆಂಜರ್ಸ್ ' ರಶ್ಮಿಕಾ ಅಂಡ್ ಔರಾ... ಹೀಗೊಂದು ಸಾಲು ಗೀಚಿ, ಮುದ್ದಿನ ನಾಯಿಮರಿಯ ಜೊತೆ ಪ್ರೀತಿಯಿಂದ ಫೈಟಿಂಗ್ ಮಾಡುವ ವಿಡಿಯೋ ಅಪ್‌ಲೋಡ್ ಮಾಡಿ ಇನ್ನೂ 24 ಗಂಟೆ ಕಳೆದಿಲ್ಲ.. ಆಗಲೇ, ಪಾಸ್‌ಪೋರ್ಟ್ ಫೋಟೋ ಹಾಕಿ ? ಈ ಭಾರಿ ನಿನ್ನಿಂದ ಸ್ವಲ್ಪ ದೂರ ಹೋಗ್ತಿದ್ದೀನಿ.. ಆದರೆ ಆದಷ್ಟು ಬೇಗ ವಾಪಾಸ್ ಬರ‍್ತೀನಿ’ ಅಂತ ಒಂದೆರಡು ಸಾಲು ಗೀಚಿದ್ದಾರೆ. ಇನ್ನೊಂದು ಸ್ಟೇಟಸ್ ಹಾಕಿ `ಗೆಸ್ ಮಾಡಿ ನಾನ್ ಎಲ್ಲಿಗೆ ಹೋಗ್ತಿರಬಹುದು ಅಂತ’ ಫ್ಯಾನ್ಸ್ ಗೆ ಪ್ರಶ್ನೆ ಮಾಡಿದ್ದಾರೆ. ತಮ್ಮ ನೆಚ್ಚಿನ ನಟಿ ಗೆಸ್ ಮಾಡಿ ಎಂದಿದ್ದೇ ತಡ ಎಲ್ಲರೂ ತಮ್ಮ ಮೆದುಳನ್ನು ಯೋಚನಾ ಲಹರಿಗೆ ಹಚ್ಚಿದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿಯಾಗಿ ಉತ್ತರ ನೀಡುತ್ತಿದ್ದಾರೆ. ಆದರೆ, ಸೋಷಿಯಲ್ ಲೋಕದಲ್ಲಿ ಮಾತ್ರ ಬಹಳಷ್ಟು ಚರ್ಚೆಯಾಗ್ತಿರೋದು ರಶ್ಮಿಕಾ ವಿದೇಶಕ್ಕೆ ಹಾರಿರುವುದು ಹಾಲಿಡೇ ವೆಕೇಷನ್‌ಗಾಗಿ ಅಲ್ಲ ಬದಲಾಗಿ ಹಾಲಿವುಡ್ ಚಿತ್ರದಲ್ಲಿ ಅಭಿನಯಿಸಲಿಕ್ಕೆ..!?

ಹಾಲಿವುಡ್ ಚಿತ್ರದಲ್ಲಿ ಅಭಿನಯಿಸಲಿಕ್ಕಾಗಿಯೇ ಚಮಕ್ ಬ್ಯೂಟಿ ವಿದೇಶಿ ಪ್ರವಾಸ ಕೈಗೊಂಡಿರುವುದು ಎನ್ನುವ ಸುದ್ದಿ ಬಲವಾಗಿ ಕೇಳಿಬರೋದಕ್ಕೆ ಮೊದಲ ಕಾರಣ ದಿ ನೆಕ್ಸ್ಟ್ ಕಾಸ್ಟಿಂಗ್ ಆಫ್ ಅವೆಂಜರ್ಸ್' ರಶ್ಮಿಕಾ ಅಂಡ್ ಔರಾ... ಈ ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಫಾರಿನ್‌ಗೆ ಹಾರಿರುವುದು. ಬರೀ ಟ್ವೀಟ್ ಲೆಕ್ಕಚ್ಚಾರದಿಂದ ಸ್ಯಾಂಡಲ್‌ವುಡ್ ಸಾನ್ವಿ ಹಾಲಿವುಡ್‌ಗೆ ಎಗರಿರಬಹುದೆಂದು ಊಹಿಸಲು ಅಸಾಧ್ಯ. ಆದರೆ, ಮೊದಲ ಸಿನ್ಮಾದಲ್ಲೇ ನ್ಯಾಷನಲ್ ಕ್ರಷ್ ಎನಿಸಿಕೊಂಡು ಎರಡನೇ ಚಿತ್ರದಿಂದ ಇಡೀ ಸೌತ್ ಸಿನಿಮಾ ಇಂಡಸ್ಟ್ರಿಯನ್ನು ಆಳುತ್ತಿರುವ, ಸ್ಟಾರ್ ನಟಿಮಣಿಯರನ್ನು ಹಿಂದಿಕ್ಕಿ ಮುನ್ನುಗುತ್ತಿರುವ, ಬಹುಬೇಡಿಕೆಯ ಕೂರ್ಗ್ ಬ್ಯೂಟಿಗೆ ಇಂಗ್ಲೀಷ್ ಮಂದಿ ಚಾನ್ಸ್ ಕೊಟ್ಟಿರಬಹುದು. ನಗುವಲ್ಲೇ ಕಟ್ಟಿಹಾಕುವ, ನಡುವಲ್ಲೇ ಸೀಟಿಗೆ ಅಂಟಿಕೊಂಡು ಕೂರುವಂತೆ ಮಾಡುವ ಸುಂದರಿ ರಶ್ಮಿಕಾಗೆ ಹಾಲಿವುಡ್ ಮಂದಿ ರೆಡ್‌ಕಾರ್ಪೆಟ್ ಹಾಕಿರಬಹುದು. ಲಿಲ್ಲಿಯ ಪಾಲಿನ ಕೂಸು, ಲಿಲ್ಲಿಯ ಪಾಲಿನ ಜಗತ್ತೇ ಆಗಿರುವಔರಾ’ ನಾಯಿಮರಿಗೂ `ಅವೆಂಜರ್’ನಲ್ಲಿ ಕ್ಯಾಮೆರಾ ಎದುರಿಸುವ ಚಾನ್ಸ್ ದಕ್ಕಿರಬಹುದು ಯಾರಿಗ್ ಗೊತ್ತು.

ಅದ್ಯಾವ್ ಶುಭಲಗ್ನದಲ್ಲಿ ಕೂರ್ಗ್ ಬೆಡಗಿ ರಶ್ಮಿಕಾರನ್ನ ಸಿಂಪಲ್‌ಸ್ಟಾರ್ ರಕ್ಷಿತ್ ಶೆಟ್ರು ಕ್ಯಾಮೆರಾ ಮುಂದೆ ತಂದು ನಿಲ್ಲಿಸಿದ್ರೋ ಏನೋ ಗೊತ್ತಿಲ್ಲ. ಕೂರ್ಗ್ ಸುಂದರಿ ರಶ್ಮಿಕಾ ಮಂದಣ್ಣ ಬಿಡುವಿಲ್ಲದೇ ಮುಖಕ್ಕೆ ಬಣ್ಣ ಹಚ್ಚುತ್ತಿದ್ದಾರೆ, ಬಿಡುವಿಲ್ಲದೇ ಕ್ಯಾಮೆರಾ ಎದುರಿಸುತ್ತಿದ್ದಾರೆ, ಬಿಡುವಿಲ್ಲದೇ ಬೆಳೆಯುತ್ತಿದ್ದಾರೆ. ಹೌದು, ನ್ಯಾಚುರಲಿ ರಶ್ಮಿಕಾ ಗ್ರೋತ್ ಆಗುತ್ತಿದ್ದಾರೋ ಅದಕ್ಕಿಂತ ನೂರು ಪಟ್ಟು ಗ್ರೋತ್ ಕರಿಯರ್‌ನಲ್ಲಾಗುತ್ತಿದೆ. ಬ್ಯೂಟಿ ವಿತ್ ಬ್ರೈನ್ ಜೊತೆಗೆ ಅದೃಷ್ಟ ಕೈ ಹಿಡಿದಿದ್ದರಿಂದ ಚಮಕ್' ಚೆಲುವೆ ಸ್ಯಾಂಡಲ್‌ವುಡ್ ಗಡಿದಾಟಿದರು.ಚಲೋ’ ಎನ್ನುತ್ತಲೇ ಟಾಲಿವುಡ್ ಅಂಗಳಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ತೆಲುಗು ಚಿತ್ರರಂಗದ ಬಹುತೇಕ ಸೂಪರ್‌ಸ್ಟಾರ್‌ಗಳೊಟ್ಟಿಗೆ ಸ್ಕ್ರೀನ್ ಶೇರ್ ಸೈ ಎನಿಸಿಕೊಂಡರು. ತಮಿಳು ಸೂಪರ್‌ಸ್ಟಾರ್ ಕಾರ್ತಿಕ್‌ಗೆ ನಾಯಕಿಯಾಗಿ ಕಾಲಿವುಡ್‌ಗೆ ಕಾಲಿಟ್ಟಿರುವ ಸ್ಯಾಂಡಲ್‌ವುಡ್ ಸಾನ್ವಿ, ವಿವಾದಗಳಿಗೆ-ಅಪವಾದಗಳಿಗೆ ಸೊಪ್ಪು ಹಾಕದೇ ಮುಂದೆ ಮುಂದೆ ಸಾಗಿದ್ದರಿಂದಲೇ ಬಿಟೌನ್‌ಗೆ ಲಗ್ಗೆ ಇಡುವಂತಾಯ್ತು. ಬಿಗ್‌ಬಿ ಅಮಿತಾಬ್ ಬಚ್ಚನ್‌ರಂತಹ ದಿಗ್ಗಜರೊಟ್ಟಿಗೆ ಸ್ಕ್ರೀನ್ ಶೇರ್ ಮಾಡುವಂತಹ ಗೋಲ್ಡನ್ ಚಾನ್ಸ್ ಸಿಗ್ತು. ಇದೀಗ, ಹಾಲಿವುಡ್ `ಅವೆಂಜರ್ಸ್ ನಲ್ಲಿ ಪಾರ್ಟ್ ಆಗ್ಬೋದು ಎನ್ನುವ ಸುದ್ದಿ ಹರಿದಾಡ್ತಿದೆ ನೋಡೋಣ.

ಸದ್ಯಕ್ಕೆ, ಕೇವಲ ಪ್ರಶ್ನೆಯಾಗಿರುವ ಉತ್ತರವಿಲ್ಲದ ಪ್ರಶ್ನೆಗಳಿಗೆ ರಶ್ಮಿಕಾ ಫಾರಿನ್‌ನಲ್ಲಿ ಲ್ಯಾಂಡ್ ಆದ್ಮೇಲೆ ಉತ್ತರ ಸಿಗುತ್ತೆ. ಡಿಯರ್ ಕಾಮ್ರೇಡ್ ಲಿಲ್ಲಿ ವಿದೇಶಕ್ಕೆ ತೆರಳಿದ್ದು ಹಾಲಿವುಡ್ ಅವೆಂಜರ್ ಚಿತ್ರದ ಪಾರ್ಟ್ ಆಗಲಿಕ್ಕೋ ಅಥವಾ `ಡಿಯರ್’ ಕಾಮ್ರೇಡ್ ಹುಡುಗನ ಜೊತೆ ಹಾಲಿಡೇ ವೆಕೇಷನ್ ಮೂಡ್‌ಗೋ ಅಂತ. ಅಲ್ಲಿವರೆಗೂ ಜಸ್ಟ್ ವೇಯ್ಟ್ ಅಂಡ್ ವಾಚ್ ಅಷ್ಟೇ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ

Related Posts

error: Content is protected !!