ಅಭಿಮಾನಿಗಳ ಪ್ರೀತಿಯೇ ಹಾಗೆ. ಅದರಲ್ಲೂ ಸಿನಿಮಾ ವಿಷಯಕ್ಕೆ ಬಂದರಂತೂ ಅಭಿಮಾನಿಗಳ ಅಭಿಮಾನ ಕೊಂಚ ಜಾಸ್ತಿಯೇ ಇರುತ್ತೆ. ಅದೆಷ್ಟೋ ಸಿನಿಮಾ ನಟರ ಅಭಿಮಾನಿಗಳು ತಮ್ಮ ಹೀರೋ ಮುಂದೆ ಅನೇಕ ಬೇಡಿಕೆಗಳನ್ನಿಡುವುದು ಗೊತ್ತೇ ಇದೆ. ಅದು ಹೊಸದಲ್ಲ ಬಿಡಿ. ಅಂತಹ ಪಟ್ಟು ಹಿಡಿದ ಅಭಿಮಾನಿಗಳ ಆಸೆಯನ್ನೂ ಈಡೇರಿಸಿರುವ ಅದೆಷ್ಟೋ ಸ್ಟಾರ್ ನಟರು ನಮ್ಮ ಕನ್ನಡದಲ್ಲಿದ್ದಾರೆ. ಈಗಲೂ ಅಭಿಮಾನಿಗಳೇ ನಮ್ಮ ಪ್ರೀತಿ ಅಂದುಕೊಂಡವರಿದ್ದಾರೆ. ಈಗ ವಿಷಯ ಏನಪ್ಪಾ ಅಂದ್ರೆ, ನಟ ದುನಿಯಾ ವಿಜಯ್ ಅವರ ಅಭಿಮಾನಿಯೊಬ್ಬರು ತನ್ನ ಮದುವೆಗೆ ದುನಿಯಾ ವಿಜಯ್ ಬರಬೇಕು. ಬರದೇ ಹೋದರೆ, ತಾಳಿ ಕಟ್ಟಿಸಿಕೊಳ್ಳುವುದೇ ಇಲ್ಲ ಎಂದು ಪಟ್ಟು ಹಿಡಿದ ಸುದ್ದಿ ಹೊರಬಿದ್ದಿದೆ.
ಹೌದು, ದಾವಣಗೆರೆ ಮೂಲದ ಅಭಿಮಾನಿ ಹೆಸರು ಅನುಷಾ. ಇವರು ಅಪ್ಪಟ ದುನಿಅ ವಿಜಯ್ ಅವರ ಅಭಿಮಾನಿ. ಈಗ ಈ ಅಭಿಮಾನಿಯ ಮದುವೆ ನಡೆಯಲಿದೆ. ಹಾಗಾಗಿ, ತನ್ನ ಮದುವೆಗೆ ದುನಿಯಾ ವಿಜಯ್ ಅವರು ಬರಬೇಕು ಎಂಬುದು ಈ ಅಭಿಮಾನಿಯ ವಿಶೇಷವಾದ ಬೇಡಿಕೆ. ಈ ಕಾರಣಕ್ಕೆ ದಕ್ಕೆ ಕಾರಣ ನಟ ದುನಿಯಾ ವಿಜಯ್. ಅದು ಹೇಗೆ ಅಂದರೆ ದಾವಣಗೆರೆ ಮೂಲಕ ಈ ಯುವತಿ ನಟ ದುನಿಯಾ ವಿಜಯ್ ಅವರ ಅಪ್ಪಟ್ಟ ಅಭಿಮಾನಿ. ಹಾಗಾಗಿ ಅವರಿಗೆ ಮದುವೆ ಆಹ್ವಾನ ನೀಡಿದ್ದಾಳೆ. ದುನಿಯಾ ವಿಜಯ್ ಅವರಿಗೆ ಮದುವೆ ಆಹ್ವಾನ ನೀಡಿರೋದು ಮಾತ್ರವಲ್ಲ, ಆಕೆ ದುನಿಯಾ ವಿಜಯ್ ಮದುವೆಗೆ ಬರಲೇಬೇಕು ಎಂದು ಪಟ್ಟು ಹಿಡಿದ್ದಾಳೆ.
ಅನುಷಾ ದುನಿಯಾ ವಿಜಯ್ ಅವರ ಅಭಿಮಾನಿ. ಹಾಗಾಗಿ ಸ್ಯಾಂಡಲ್‍ವುಡ್ ನಟ ದುನಿಯಾ ವಿಜಯ್ ಅವರು ಆಗಮಿಸಿ ಆಶೀರ್ವಾದ ಮಾಡಿದರೆ ಮಾತ್ರ ಮದುವೆಯಾಗುತ್ತೇನೆ ಎಂದು ಪಟ್ಟು ಹಿಡಿದಿದ್ದಿ. ದುನಿಯಾ ವಿಜಯ್ ಬರುವವರೆಗೂ ತಾಳಿ ಕಟ್ಟಿಸಿ ಕೊಳ್ಳುವುದಿಲ್ಲ ಅಂತ ಹಠ ಹಿಡಿದಿದ್ದಾಳೆ. ತನ್ನ ಮದುವೆಗೆ ದುನಿಯಾ ವಿಜಯ್ ಅವರ ಆಶೀರ್ವಾದ ಬೇಕು ಎನ್ನುತ್ತಿದ್ದಾಳೆ. ಮದುವೆಗೆ ಯಾರು ಬರದಿದ್ದರೂ ಪರವಾಗಿಲ್ಲ. ಆದರೆ, ದುನಿಯಾ ವಿಜಯ್ ಬರಬೇಕು. ಇಲ್ಲದಿದ್ದರೆ ಮದುವೆ ಆಗುವುದಿಲ್ಲ ಎಂಬ ನಿರ್ಧಾರ ಮಾಡಿದ್ದಾಳಂತೆ! ಇನ್ನೊಂದು ವಿಶೇಷವೆಂದರೆ, ಅನುಷಾ ಮಾತ್ರವಲ್ಲ, ಅವರ ಕುಟುಂಬ ಕೂಡ ದುನಿಯಾ ವಿಜಯ್ ಅವರ ಅಭಿಮಾನಿಯಾಗಿದೆ. ಅವರ ಮನೆಗೆ “ದುನಿಯಾ ಋಣ” ಎಂದೇ ಹೆಸರಿಟ್ಟಿದ್ದಾರೆ. ಕಳೆದ ಐದಾರು ವರ್ಷಗಳ ಹಿಂದೆ ಮನೆ ಕಟ್ಟಿದ್ದು ಗೃಹ ಪ್ರವೇಶಕ್ಕೆ ನಟ ದುನಿಯಾ ವಿಜಯ್ ಬರಬೇಕೆಂದು ಆಗಲೂ ಮನೆಯನ್ನು ಹಾಗೆಯೇ ಬಿಟ್ಟಿದ್ದರು. ನಂತರ ವಿಷಯ ತಿಳಿದ ದುನಿಯಾ ವಿಜಯ್, ಅವರ ಮನೆಯ ಗೃಹ ಪ್ರವೇಶಕ್ಕೆ ಹೋಗಿ ಶುಭ ಕೋರಿ ಬಂದಿದ್ದರು.
ಅಂದಹಾಗೆ, ನವೆಂಬರ್ 29ಕ್ಕೆ ಅನುಷಾ ಮದುವೆ ಇದೆ. ಶಿವಾನಂದ ಭಜಂತ್ರಿ ಅವರ ಪುತ್ರಿ ಅನುಷಾ ಪ್ರಕಾಶ್ ಎಂಬ ಯುವಕನ ಜೊತೆ ಮದುವೆಯಾಗುತ್ತಿದ್ದಾರೆ. ವಿಶೇಷವೆಂದರೆ, ತನ್ನ ಮದುವೆಯ ಆಮಂತ್ರಣ ಪತ್ರಿಕೆಯಲ್ಲೂ ತಮ್ಮ ಫೋಟೊ ಪಕ್ಕ ದುನಿಯಾ ವಿಜಯ್ ಅವರ ಫೋಟೊವನ್ನು ಮುದ್ರಿಸಿದ್ದಾರೆ. ಜೊತೆಗೆ ‘ಒಂಟಿ ಸಲಗ’ ಎಂದು ತಮ್ಮ ಕೈಗೆ ಅನುಷಾ ಹಚ್ಚೆ ಹಾಕಿಸಿಕೊಂಡಿದ್ದಾರೆ. ಅದೇನೆ ಇರಲಿ, ದುನಿಯಾ ವಿಜಯ್ ಅಭಿಮಾನಿಗಳಿಗೆ ಯಾವತ್ತೂ ನಿರಾಸೆ ಮಾಡಿದವರಲ್ಲ. ಈ ಅಭಿಮಾನಿಯ ಮದುವೆಗೆ ಹೋಗಿ, ಅವರ ಆಸೆ ಪೂರೈಸುತ್ತಾರಾ ಕಾದು ನೋಡಬೇಕಿದೆ.