ನಿರ್ಮಾಪಕ ರವಿ ಗರಣಿ ಅವರಿಗೆ ಸಿನಿಮಾ ನಿರ್ಮಾಣ ಹೊಸದಲ್ಲ, ಸಾಕಷ್ಟು ಸಿರಿಯಲ್ ಹಾಗು ಸಿನಿಮಾನಿರ್ಮಾಣದ ಅನುಭವದ ಮೂಲಕ’ ಗೋವಿಂದ ಗೋವಿಂದ’ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ಅವರು ಸಿನಿಮಾ ಬಗ್ಗೆ ದೊಡ್ಡ ನಿರೀಕ್ಷೆ ಇದೆ..
‘ನಮ್ಮದು ಒಳ್ಳೆಯ ಸಿನಿಮಾ, ಹೆಚ್ಚು ಜನರಿಗೆ ನಮ್ಮ ಸಿನಿಮಾ ವಿಚಾರ ತಲುಪಿಸಬೇಕು’ ಎನ್ನುವ ಅವರು, ಪ್ರೇಕ್ಷಕರು ಈ ಸಿನಿಮಾ ಯಾಕೆ ನೊಡ್ಬೇಕು ಅಂದ್ರೆ, ಕೋರೋನಾ ಕಾಲದಲ್ಲಿ ಅವರಿಗೂ ಮನೆಯಲ್ಲಿಯೇ ಇದ್ದು ಬೇಜಾರಾಗಿದೆ. ಅವರಿಗೆ ಈಗ ಒಂದು ಮನರಂಜನೆ ಬೇಕು. ಅಂತಹ ಜನರಿಗೆ ಮನೆಯವರೆಲ್ಲ ಕುಳಿತು ಎಂಜಾಯ್ ಮಾಡಬಹುದಾದ ಸಿನಿಮಾ. ವಿತೌಟ್ ಕಟ್ಸ್, ಬಿಪ್ಸ್ ಕೂಡ ಇಲ್ಲ. ಶುದ್ದವಾದ ಮನರಂಜನೆ ಕೊಡುವಂತಹ ಸಿನಿಮಾ. ಹಾಗಾಗಿ ಪ್ರೇಕ್ಷಕರು ಈ ಸಿನಿಮಾ ನೋಡ್ಬೇಕು ಅನ್ನೋದು ನನ್ನಮನವಿ ಅಂತಾರೆ ನಿರ್ಮಾಪಕ ರವಿ.ಆರ್.ಗರಣಿ.
ಚಿತ್ರಕ್ಕೆ ಬಂಡವಾಳ ಹಾಕಿರುವ ಮೂವರು ನಿರ್ಮಾಪಕರ ಪೈಕಿನಿರ್ಮಾಪಕ ಕಿಶೋರ್ ಮಧುಗಿರಿ, 30 ವರ್ಷದಿಂದ ವಿತರಣೆ ವಲಯದಲ್ಲಿದ್ದಾರೆ. ಇದೇ ಮೊದಲ ಬಾರಿಗೆ ಗೋವಿಂದ ಗೋವಿಂದ ಮೂಲಕ ಸಿನೆಮಾ ನಿರ್ಮಾಣಕ್ಕೆ ಬಂದಿದ್ದಾರೆ. ಅವರ ಪ್ರಕಾರ ಇದುಪಕ್ಕಾ ಪ್ಯಾಮಿಲಿ ನೋಡುವಂತಹ ಸಿನಿಮಾ.’
ಇಲ್ಲಿ ಫಸ್ಟ್ ನೈಟ್ ಇಲ್ಲ-ಕಾಂಟ್ರವರ್ಸಿಯೂ ಇಲ್ಲ!
ಹಾಗೆಯೇ ಶೈಲೇಂದ್ರಬಾಬು, ‘ನಮ್ಮ ಸಿನಿಮಾದಲ್ಲಿ ಫಸ್ಟ್ನೈಟ್ ಇಲ್ಲ. ಕಾಂಟ್ರವರ್ಸಿ ಇಲ್ಲ. ಒಳ್ಳೆಯ ಕತೆ ಇರುವ ಸುಂದರ ಸಿನಿಮಾ’ ಎನ್ನುತ್ತಾರೆ.’ಗೋವಿಂದ ಗೋವಿಂದ’ ಒಂದೊಳ್ಳೆಯ ಚಿತ್ರ. ನಾನು ಚಿತ್ರರಂಗದಲ್ಲಿ ಮೂರು ದಶಕಗಳಿಂದ ಇದ್ದೇನೆ. ಒಂದು ಸಂಪೂರ್ಣ ಹಾಸ್ಯ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದೇನೆ. ತುಂಬಾ ಗ್ಯಾಪ್ ನಂತರ ನನ್ನ ನಟನೆಯ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಹಾಸ್ಯಕ್ಕೆ ಕೊರತೆ ಇಲ್ಲ. ಹೀಗಾಗಿ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆಂಬ ನಂಬಿಕೆ ಇದೆ. ಹಾಗೂ ಮೊದಲ ಬಾರಿಗೆ ಒಂದು ಸಿನಿಮಾವನ್ನು ಬೇರೆ ಭಾಷೆಗಳಿಗೆ ಡಬ್ ಮಾಡಿ, ಒಟ್ಟಿಗೆ ಬಿಡುಗಡೆ ಮಾಡುತ್ತಿದ್ದೇನೆ. ಏಕಕಾಲದಲ್ಲಿ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ತೆರೆಗೆ ಬರುತ್ತಿದೆ ಎನ್ನುತ್ತಾರೆ ಶೈಲೇಂದ್ರ ಬಾಬು