ನಿರ್ಮಾಪಕ ಶೈಲೇಂದ್ರ ಬಾಬು ಪುತ್ರ ಸುಮನ್ ಶೈಲೇಂದ್ರ ಇದೇ ಮೊದಲು ಪಕ್ಕಾ ಹಾಸ್ಯ ಪ್ರಧಾನ ಕಥಾ ಹಂದರ ‘ ಗೋವಿಂದ ಗೋವಿಂದ ‘ ಚಿತ್ರದ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ವಾರ ಅಂದರೆ, ನವೆಂಬರ್ 26ಕ್ಕೆ ಈ ಚಿತ್ರ ರಾಜ್ಯಾ ದ್ಯಂತ ನೂರಾರು ಚಿತ್ರ ಮಂದಿರಗಳಿಗೆ ಬಲಗಾಲಿಟ್ಟು ಆಗಮಿಸುತ್ತಿರುವ ಸಿನಿಮಾ ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿದೆ….
ತಿಲಕ್ ಚೊಚ್ಚಲ ನಿರ್ದೇಶನದ ಈ ಚಿತ್ರದಲ್ಲಿ ಸುಮಂತ್ ಶೈಲೇಂದ್ರ, ಭಾವನಾ, ರೂಪೇಶ್ ಶೆಟ್ಟಿ, ಕವಿತಾ ಗೌಡ ಪ್ರಧಾನ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.ತಿಳಿ ಹಾಸ್ಯದ ಕಥೆಯೊಂದಿಗೆ ನೋಡುಗನ ಮನಸನ್ನೇ ಹಗುರಗೊಳಿಸುವ ಈ ಚಿತ್ರಕ್ಕೆ ನಿರ್ಮಾಪಕರು ಮಾತ್ರ ಭರ್ಜರಿ ತೂಕದವರೇ ಹೌದು. ಹಿರಿಯ ನಿರ್ಮಾಪಕ ಶೈಲೇಂದ್ರ ಬಾಬು, ಹಿರಿಯ ನಿರ್ದೇಶಕ ರವಿ ಗರಣಿ ಮತ್ತು ಮಧುಗಿರಿಯ ಶಾಂತಲಾ ಚಿತ್ರಮಂದಿರದ ಮಾಲೀಕರಾದ ಕಿಶೋರ್ ಮಧುಗಿರಿ ಅವರು ಈ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹಾಕಿದವರು.
ಎಂಟ್ರಿಯೇ ಬೆಸ್ಟ್ ಎನ್ನುವಂತೆ ಚಿತ್ರದ ಶೀರ್ಷಿಕೆಯೇ ಇಲ್ಲಿ ವಿಶೇಷ. ಗೋವಿಂದ ಗೋವಿಂದ ಎನ್ನುವ ಟೈಟಲ್ ಗೆ ‘ಹುಂಡಿ ನಮ್ದು, ಕಾಸು ನಿಮ್ದು’ ಎನ್ನುವ ಟ್ಯಾಗ್ ಲೈನ್ ನೀಡಿದೆ ಚಿತ್ರ ತಂಡ . ಒಂದು ಹಾಸ್ಯ ಪ್ರಧಾನ ಕಂಥಾ ಹಂದರದ ಕಥೆಯ ಜತೆಗೆ ನಿರ್ಮಾಣ , ನಿರ್ದೇಶನ ಹಾಗೂ ಕಲಾವಿದರ ಮೂಲಕ ಸಾಕಷ್ಟು ಸುದ್ದಿಯಲ್ಲಿರುವ ಈ ಚಿತ್ರವು ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಅದೇ ನಂಬಿಕೆ ಮೇಲೆ ಚಿತ್ರ ನೋಡಲು ಚಿತ್ರ ಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುವುದು ಅಷ್ಟೇ ಖಚಿತ ಎನ್ನುವ ವಿಶ್ವಾಸ ಚಿತ್ರ ತಂಡದ್ದು.
ಬಿಡುಗಡೆಯ ಈ ಸಂದರ್ಭದಲ್ಲಿ ಚಿತ್ರದ ವಿಶೇಷತೆ ಕುರಿರು ಮಾತನಾಡುವ ನಿರ್ದೇಶಕ ತಿಲಕ್, ‘ಮೊದಲ ಬಾರಿಗೆ ನಿರ್ದೇಶನ ಮಾಡಿದ್ದೇನೆ, ಒಪ್ಪಿಸಿಕೊಳ್ಳಿ’ ಎಂದರು.
ಮುಂದಿನ ಅವರ ಮಾತು, ಚಿತ್ರದ ಕಥೆಯ ವಿಶೇಷತೆ ಕುರಿತದ್ದು..’ ಗೋವಿಂದ ಗೋವಿಂದ ಅಂದಾಕ್ಷಣ ಇದೊಂದು ಭಕ್ತಿಯ ಕುರಿತ ಕಥೆಯೇ ಅಂತೆಂದುಕೊ ಳ್ಳುವುದು ಸಹಜ. ಆದರೆ ಇದು ಪಕ್ಕಾ ಹಾಸ್ಯ ಪ್ರಧಾನ ಚಿತ್ರ. ಎಲ್ಲೂ ಆಶ್ಲೀಲ ಎನಿಸುವ ದೃಶ್ಯಗಳಿಲ್ಲ, ಅಂತಹ ಸಂಭಾಷಣೆಯೂ ಇಲ್ಲ. ಫ್ಯಾಮಿಲಿ ಸಮೇತ ಕುಳಿತುಕೊಂಡು ನೋಡುವ ಪಕ್ಕಾ ಫ್ಯಾಮಿಲಿ ಕಥಾ ಹಂದರದ ಚಿತ್ರ. ಪ್ರತಿಯೊಂದು ದೃಶ್ಯ, ಪ್ರತಿಯೊಂದು ಪಾತ್ರವೂ ಇಲ್ಲಿ ಅಷ್ಟೇ ಮುಖ್ಯ. ಯಾವುದು ಅನವಶ್ಯಕ ಎಂದೆಸೊದಿಲ್ಲ. ಈಗಿನ ಯಂಗರ್ ಜನರೇಷನ್ ಗೆ ಏನೆಲ್ಲಮನರಂಜನೆ ಬೇಕೋ ಅದೆಲ್ಲ ಇಲ್ಲಿದೆ. ಪೈಸಾ ವಸೂಲ್ ಅಂತಾರಲ್ಲ ಅಂತಹ ಸಿನಿಮಾ ಇದು’ ಎನ್ನುತ್ತಾರೆ ತಿಲಕ್.
ಕವಿತಾ ಗೌಡ, ಸುಮಂತ್
ನಾಯಕ ನಟ ಸುಮಂತ್ ಶೈಲೇಂದ್ರ ಈಗ ಹೊಸ ಅವತಾರದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳುವ ತವಕದಲ್ಲಿದ್ದಾರೆ. ದಿಲ್‌ವಾಲಾ’ ಸಿನಿಮಾ ಸೇರಿದಂತೆ ಯಂಗ್ ಆಂಡ್ ಎನರ್ಜಿಟಿಕ್ ಆ್ಯಕ್ಷನ್ ಸಿನಿಮಾಗಳ ಮೂಲಕವೇ ಚಿತ್ರರಂಗಕ್ಕೆ ಬಂದ ಸುಮಂತ್ ಶೈಲೇಂದ್ರ ಈಗ ರೊಮ್ಯಾಂಟಿಕ್ ಥ್ರಿಲ್ಲರ್, ಕಾಮಿಡಿ ‘ಗೋವಿಂದ ಗೋವಿಂದ’ ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆ ಮೇಲೆ ಬರುತ್ತಿದ್ದಾರೆ. ‘ನನ್ನ ಸಿನಿ ಜರ್ನಿಯಲ್ಲಿ ಇದೊಂದು ವಿಶೇಷ ವಾದ ಸಿನಿಮಾ. ಅದಕ್ಕೆ ಕಾರಣ ಈ ಚಿತ್ರದ ಕಥಾ ಹಂದರ. ಇದುವರೆಗೂ ಆ್ಯಕ್ಷನ್, ಥ್ರಿಲ್ ಎಲಿಮೆಂಟ್ಸ್ ಒಳಗೊಂಡ ಸಿನಿಮಾಮಾಡಿದ್ದೆ . ಫಸ್ಟ್ ಟೈಮ್ ಪಕ್ಕಾ ಕಾಮಿಡಿ ಕಿಕ್ ಸಿನಿಮಾ ಮಾಡಿದ್ದೇನೆ. ಸಾಮಾನ್ಯವಾಗಿ ಕುಣಿಯೋದು, ಆ್ಯಕ್ಷನ್ ಮಡೋದು ಸುಲಭ. ಆದರೆ ನಗಿಸೋದು ತುಂಬಾ ಕಷ್ಟ. ಅಂತಹ ಕಷ್ಟದ ಕೆಲಸವನ್ನು ಫಸ್ಟ್ ಟೈಮ್ ನಾನಿಲ್ಲಿ ನಿಭಾಯಿಸಿದ್ದೇನೆ ಎಂದರು.
ರವಿ.ಆರ್.ಗರಣಿ, ನಿರ್ಮಾಪಕರು
ಹಾಗೆಯೇ ಪ್ರತೀ ಸಿನಿಮಾ ಬಿಡುಗಡೆಯಾ ಗುವಾಗಲೂ ಜೊತೆಗೊಂದು ದೊಡ್ಡ ಸಿನಿಮಾ ರಿಲೀಸ್ ಆಗುತ್ತದೆ. ಆದರೂ ಜನ ನನ್ನ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಈ ಸಲವೂ ಪ್ರೇಕ್ಷಕರು ಸಿನಿಮಾ ನೋಡಿ ಗೆಲ್ಲಿಸುತ್ತಾರೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ಸುಮನ್ ಶೈಲೇಂದ್ರ.ಚಿತ್ರದಲ್ಲಿ ಸುಮಂತ್ ಕಾಲೇಜ್ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಟ ರೂಪೇಶ್ ಶೆಟ್ಟಿ ಇಲ್ಲೊಂದು ವಿಶೇಷ ಪಾತ್ರಕ್ಮೆ ಬಣ್ಣ ಹಚ್ವಿದ್ದಾರಂತೆ, ‘ಇದು ಒತ್ತಡ ಮರೆಸುವ ಸಿನೆಮಾ. ಕುಟುಂಬ ಸಮೇತರಾಗಿ ನೋಡಿ ಆನಂದಿಸಬಹುದು’
ಎಂದರು. ಹಾಗೆಯೇ ನಟಿ ಕವಿತಾ, ಕಲಾವಿದರಾದ ಪವನ್, ವಿಜಯ್ ಚೆಂಡೂರ್, ಕಾರ್ಯಕಾರಿ ನಿರ್ಮಾಪಕ ಜನಾರ್ದನ್ ಚಿತ್ರದ ಕುರಿತು ವಿಶ್ವಾಸ ವ್ಯಕ್ತಪಡಿಸಿದರು. ಸಂಗೀತ ನಿರ್ದೇಶಕ ಹಿತನ್ ಹಾಸನ್, ‘ಈ ಸಿನೆಮಾ ನೋಡುತ್ತಾ ನಿರಾಳರಾಗಬಹುದು’ ಎಂದು ಭರವಸೆ ನೀಡುತ್ತಾರೆ.