ಲೇಡಿಸೂಪರ್ಸ್ಟಾರ್ ನಯನತಾರಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 37 ನೇವಸಂತಕ್ಕೆ ಕಾಲಿಟ್ಟಿರೋ ಸೌತ್ಸುಂದರಿ ನಯನತಾರಾ ಭಾಯ್ಫ್ರೆಂಡ್ ವಿಘ್ನೇಶ್ ಶಿವನ್ ಹಾಗೂ ಇಂಡಸ್ಟ್ರಿಯ ಸ್ನೇಹಿತರ ಜೊತೆ ಬರ್ತ್ ಡೇ ಸೆಲಬ್ರೇಟ್ ಮಾಡ್ಕೊಂಡಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಸ್ನೇಹಿತೆ ನಯನತಾರಾ ಹುಟ್ಟುಹಬ್ಬದ ಸಂಭ್ರಮದಲ್ಲಿ ಆ್ಯಪಲ್ ಬ್ಯೂಟಿ ಸಮಂತಾ ಭಾಗಿಯಾಗಿದ್ದರು. ವಿಜಯ್ ಸೇತುಪತಿ ಸೇರಿದಂತೆ ಹಲವು ಕಾಲಿವುಡ್ ಸ್ಟಾರ್ಗಳು ಪಾಲ್ಗೊಂಡಿದ್ದರು.
ಅದ್ದೂರಿಯಾಗಿ ಜನ್ಮದಿನ ಆಚರಣೆ ಮಾಡಿಕೊಂಡ ನಯನತಾರಾ, ಗೆಳೆಯ ವಿಘ್ನೇಶ್ ಶಿವನ್ ಕೊಟ್ಟ ಸಪ್ರೈಸ್ಗೆ ಸಖತ್ ಥ್ರಿಲ್ಲಾದರು. ಹೌದು, `ಕಾತು ವಾಕುಲ ರೆಂಡು ಕಾದಲ್
‘ ಚಿತ್ರದ ಫಸ್ಟ್ ಲುಕ್ನ ನೋಡಿ ಖುಷಿಪಟ್ಟರು.
ಕಾತು ವಾಕುಲ ರೆಂಡು ಕಾದಲ್’ ಸೂಪರ್ ಸುಂದರಿಯ ಅಪ್ಕಮ್ಮಿಂಗ್ ಚಿತ್ರವಾಗಿದ್ದು, ವಿಘ್ನೇಶ್ ಶಿವನ್ ಆಕ್ಷನ್ ಕಟ್ ಹೇಳಿದ್ದಾರೆ. ‘ನಾನುಂ ರೌಡಿಧಾನ್'ಚಿತ್ರದ ನಂತರ ಲವ್ಬರ್ಡ್ಸ್ ಜತೆಯಾಗಿ ಮಾಡ್ತಿರೋ
‘ಕಾತು ವಾಕುಲ ರೆಂಡು ಕಾದಲ್’ ಮೇಲೆ ನಿರೀಕ್ಷೆಗಳು ಗರಿಗೆದರಿವೆ.