ನನ್ನ ಆತ್ಮ ಹೇಳ್ತಿದೆ, ಅಪ್ಪು ವಾಪಾಸ್‌ ಬಂದೇ ಬರ್ತಾನೆ; ಜಗ್ಗೇಶ್‌ ಭಾವುಕ ಮಾತು…

ಪುನೀತ್‌ ನುಡಿ ನಮನ ಕಾರ್ಯಕ್ರಮದಲ್ಲಿ ಜಗ್ಗೇಶ್‌, ಪುನೀತ್‌ ಅವರ ಕುರಿತು ಭಾವುಕರಾಗಿ ಮಾತಾಡಿದರು. “ಅವರು ನಮ್ಮನ್ನು ಕಳಿಸಿಕೊಡಬೇಕಿತ್ತು. ನಾವು ಅವರನ್ನು ಕಳಿಸಿಕೊಡುವಂತಹ ಸ್ಥಿತಿ ಬಂದಿದೆ. ಕನ್ನಡ ಚಿತ್ರರಂಗಕ್ಕೆ ಗಟ್ಟಿಯಾದ ನಟ ಅವರು. ಗಟ್ಟಿ ಕಲಾವಿದರಲ್ಲಿ ಈತನೂ ಒಬ್ಬ. ಸಮಾಧಾನ ನಮಗೇ ನಾವು ಮಾಡಿಕೊಳ್ಳಬೇಕು. ನಾವು ನಾಲ್ಕೈದು ವರ್ಷಗಳಿಂದ ಬೇರೆ ಆಯಾಮದಲ್ಲಿ ಹೊರಟು ಹೋದ್ವಿ. ಈತನ ಸಾವು ಆದಮೇಲೆ, ಶೇ.30ರಷ್ಟು ಆಶಾಭಾವ ಇತ್ತು. ಅದೂ ಹೊರಟು ಹೋಯ್ತು. ಪುನೀತ್‌ ನಮ್ಮನ್ನು ಬಿಟ್ಟು ಹೋಗಿಲ್ಲ. ಆತ ಮತ್ತೆ ಬಂದೇ ಬರ್ತಾನೆ ಎಂದು ನನ್ನ ಆತ್ಮ ಹೇಳ್ತಾ ಇದೆ ವಾಪಾಸ್‌ ಬರ್ತಾನೆ. ಬಹಳ ವಿಶೇಷವಾಗಿ ಬರ್ತಾನೆ ಎಂದರು.

ಇನ್ನೂ ಮಾಡಬೇಕು ಎಂಬ ಭಾವಗಳು, ಭಾವನೆಗಳಿದ್ದವು. ಬರ್ತಾನೆ ಎಂಬ ನಂಬಿಕೆ ಇದೆ. ಪುನೀತ್‌ ಎಲ್ಲೂ ಹೋಗಿಲ್ಲ. ನಮ್ಮೊಳಗಿದ್ದಾನೆ. ಕಲಾವಿದ ಎಷ್ಟು ಅದೃಷ್ಟವಂತ ಅನ್ನುವುದಕ್ಕೆ ಇದೊಂದೆ ನಿದರ್ಶನ ಸಾಕು. ಭಾರವಾದ ಹೃದಯವಿದೆ. ಶ್ರದ್ಧಾಂಜಲಿ ಹೇಳೋಕೆ ನಂಬಿಕೆ ಇಲ್ಲ.
ಆತ ಒಂದು ಸಂದೇಶ ಬಿಟ್ಟು ಹೋದ.

ಎಂಥ ಒಂದು ಮೆಸೇಜ್‌ ಅಂದರೆ, ಎಲ್ಲರ ಮನಸ್ಸಲ್ಲೂ ಒಂದು ಭಾವ ಬಂತು. ಯಾವುದೂ ಶಾಶ್ವತವಲ್ಲ. ಎಲ್ಲವೂ ನಶ್ವರ. ದೇವರು ಕರೆದಾಗ ಹೋಗಬೇಕು ಎಂಬ ಮೆಸೇಜ್‌ ಕೊಟ್ಟು ಹೋದ. ನಾವು ಎರಡು ಹೆಜ್ಜೆ ಕೆಳಗಿಳಿದು, ಇದೇ ರೀತಿ ಕಲಾವಿದರು ಒಂದೇ ರೀತಿ ಬದುಕೋಣ…

Related Posts

error: Content is protected !!