ಅಪ್ಪು ಹೆಸರಲ್ಲಿ ಸ್ಟುಡಿಯೋ ಸ್ಥಾಪಿಸಿ; ಡಿ.ಕೆ.ಶಿವಕುಮಾರ್‌ ಸರ್ಕಾರಕ್ಕೆ ಒತ್ತಾಯ

ಪುನೀತ್‌ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್‌ ಮುಖಂಡ ಡಿ.ಕೆ.ಶಿವಕುಮಾರ್‌, “ನಾನು ಕುಟುಂಬದ ಅಭಿಮಾನಿ. ರಾಜಕಾರಣಿಯಾದರೂ ಸಹ, ರಾಜಕಾರಣದ ಜೊತೆಯಲ್ಲಿ ಫಿಲ್ಮ್ ಮಂಡಳಿಯಲ್ಲಿ ಕೆಲಸ ಮಾಡಿದವನು. ಪುನೀತ್ ಅವರ ಸಾವು ನಂಬಲು ಸಾಧ್ಯವಾಗಲೇ ಇಲ್ಲ. ಫೋನ್ ಬಂತು. ಹೋದೆ. ನಂಬಲು ಆಗಲೇ ಇಲ್ಲ. ಮನುಷ್ಯ ಹುಟ್ಟುಬೇಕಾದರೆ, ಉಸಿರು ಇರುತ್ತೆ ಹೆಸರು ಇರಲ್ಲ. ಸಾಯೋಬೇಕಾದರೆ, ಹೆಸರಿರುತ್ತೆ ಉಸಿರು ಇರಲ್ಲ. ಇದಕ್ಕೆ ಪುನೀತ್ ಅವರೇ ಸಾಕ್ಷಿ. ಹುಟ್ಟು ಸಾವು ಮಧ್ಯೆ ಏನು ಸಾಧನೆ ಮಾಡ್ತೀವಿ ಅನ್ನೋದು ಮುಖ್ಯ.

ಪುನೀತ್ ಅವರ ಸಾಧನೆ ದೊಡ್ಡದು. ಈ ಕುಟುಂಬದ ಸೇವೆ. ಚಿತ್ರರಂಗಕ್ಕೆ ಮಾತ್ರವಲ್ಲ, ಸಮಾಜಕ್ಕೆ ಸೀಮಿತವಾಗಿದೆ. ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ. ಮೈಸೂರಿನಿಂದ ಬಂದಿರುವ ಶಕ್ತಿಧಾಮ ಮಕ್ಕಳು ನೋವಲ್ಲಿ ಸಂತಾಪ ಸೂಚಿಸಿದ್ದಾರೆ. ಒಬ್ಬ ವ್ಯಕ್ತಿ ನಮ್ಮಿಂದ ದೂರ ಹೋಗಿಲ್ಲ. ಒಂದು ಶಕ್ತಿ ದೂರವಾಗಿದೆಯಷ್ಟೆ. ಸಿಎಂ. ಕರ್ನಾಟಕ ರತ್ನ ಘೋಷಣೆ ಖುಷಿಯಾಯ್ತು. ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗಿತ್ತು. ಪುನೀತ್ ಅವರ ಆದರ್ಶ ಜೀವಂತ.


ಸಿಎಂ ಅವರಿಗೆ ಈ ವೇಳೆ ಮನವಿ ಮಾಡಿದ ಡಿ.ಕೆ.ಶಿವಕುಮಾರ್‌, ಪ್ರಶಸ್ತಿ ಘೋಷಣೆ ಮಾಡಿದ್ದೀರಿ, ನನ್ನ ಮನವಿ ಎಂದರೆ, ಪುನೀತ್ ಹೆಸರಲ್ಲಿ ಒಂದು ಯುವ ಕಲಾವಿದರನ್ನು ಸಂಸ್ಥೆ ಅಥವಾ ಸ್ಟುಡಿಯೋ ಅವರ ಹೆಸರಲ್ಲಿ ಮಾಡಿ. ಕಂಠೀರವ ಸ್ಟುಡಿಯೋ ಯಾವುದೋ ಕಾಲದಲ್ಲಿ ಆಗಿದೆ. ವಿಶೇಷ ನಟ, ಯಾವುದೇ ಕಾಂಟ್ರವರ್ಸಿ ಇಲ್ಲದೆ ಇರುವ ನಟ. ಮುಂದಿನ ದಿನಗಳಲ್ಲಿ ನೀವು ತೀರ್ಮಾನ ತೆಗೆದುಕೊಳ್ಳಿ ಎಂದು ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.
ಪುನೀತ್ ನುಡಿ ನಮನ ಕಾರ್ಯಕ್ರಮದಲ್ಲಿ
ಡಿ.ಕೆ.ಶಿವಕುಮಾರ್

Related Posts

error: Content is protected !!