ಪುನೀತ್ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಅವರ ಬೆಳ್ಳಿ ನಾಣ್ಯ ಬಿಡುಗಡೆ ಮಾಡಲಾಯಿತು. ಸಾಯಿ ಗೋಲ್ಡ್ ಪ್ಯಾಲೇಸ್ ನ ಶರವಣ ಅವರು ಅಪ್ಪು ನೆನಪಿಗಾಗಿ ಬೆಳ್ಳಿ ನಾಣ್ಯ ಬಿಡುಗಡೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಮಾಡಿಸಿದರು.
ಈ ವೇಳೆ ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್, ಸುಧಾಕರ್, ಆರಗ ಜಾನೇಂದ್ರ, ಅಶೋಕ್ ಇತರರು ಇದ್ದರು.
ಈ ಕಾರ್ಯಕ್ರಮ ನಂತರ ಗಾಯಕರಾದ ವಿಜಯಪ್ರಕಾಶ್, ಮಂಜುಳ ಗುರುರಾಜ್, ಗುರುಕಿರಣ್, ಅನುರಾಧ ಭಟ್, ಹೇಮಂತ್ ಕುಮಾರ್, ಶಮಿತಾ ಮಲ್ನಾಡ್, ರಾಜೇಶ್ ಕೃಷ್ಣ, ಚೈತ್ರಾ, ಚೇತನ್ ಸೇರಿದಂತೆ ಇತರೆ ಗಾಯಕರೆಲ್ಲರೂ ಪುನೀತ ನಮನ ಕಾರ್ಯಕ್ರಮದಲ್ಲಿ ಗೀತನಮನ ಅರ್ಪಿಸಿದರು. ಕಾಣದಂತೆ ಮಾಯವಾದನು ಹಾಡನ್ನು ತರ್ಜುಮೆ ಮಾಡಿ ಎಲ್ಲರೂ ಮನದುಂಬಿ ದುಃಖಭರಿತವಾಗಿಯೇ ಹಾಡಿದರು.