ಅಪ್ಪು ಸಾಧನೆಯ ಶಿಖರ- ಪುನೀತ ನಮನದಲ್ಲಿ ಸಿಎಂ ಬೊಮ್ಮಾಯಿ ಗುಣಗಾನ

ಅಪ್ಪು ನಮ್ಮೆಲ್ಲರಿಗೂ ಬಹಳ ಆತ್ಮಿಯ. ಅವನನ್ನು ಬಾಲ್ಯದಿಂದ ನಾನು ಬಲ್ಲೆ. ಬಾಲ್ಯದಲ್ಲೇ ಪ್ರತಿಭೆಯ ಚಿಲುಮೆ ಹೊಂದಿದವರು. ಕರ್ನಾಟಕದ ಇತಿಹಾಸದಲ್ಲಿ ಬಾಲನಟರಾಗಿ ರಾಷ್ಟ್ರಪ್ರಶಸ್ತಿ ಪಡೆದ ಏಕಮಯ ನಟ ಪುನೀತ್‌ ರಾಜಕುಮಾರ್.‌ ಅಪ್ಪು ಸಾಧನೆಯ ಶಿಖರ. ಅಂತಹ ಶಿಖರವನ್ನು ಕಳೆದುಕೊಂಡಿದ್ದೇವೆ.
ನಾನು, ಸುಮ್ಮನೆ ಅವನ ಚಿತ್ರಗಳನ್ನು ನೋಡುತ್ತಿದ್ದೆ. ಅವನ ತಂದೆ, ಈ ಕನ್ನಡ ನಾಡು ಕಂಡಂತಹ ಶ್ರೇಷ್ಠ ಕಲಾವಿದರು ಡಾ.ರಾಜಕುಮಾರ್‌. ಅವರ ಜೊತೆ ನಟನೆ ಮಾಡುವಾಗ, ಪಾತ್ರದ ಅನುಗುಣವಾಗಿ, ತಮ್ಮ ಸಂಬಂಧ ಬಿಟ್ಟು ನಟನೆ ಮಾಡ್ತಾರೆ. ಚಿಕ್ಕವಯಸ್ಸಲ್ಲಿ ಅವರು ಜಾಗೃತಿ ಇರುವುದಂಥದ್ದು ಸುಲಭವಲ್ಲ.


ಮುಂದೆ ಅವನು, ಸ್ಟಾರ್‌ ಆಗುವಂಥದ್ದು ನಿಶ್ಚಿತ, ಪವರ್‌ ಸ್ಟಾರ್‌ ಆಗುವಂಥದ್ದು ನಿಶ್ಚಿತವಾಗಿತ್ತು. ಆ ನಟನೆ, ಯಶಸ್ಸಿನ ನಡುವೆ, ಸಿಲ್ವರ್‌ ಲೈನಿಂಗ್‌ ಅಂತ ಏನು ಕರೀತಿವೆ. ಅವನ ನುಡಿ ವಿನಯ ಯಾರಿಂದಲೂ ಸಾಧ್ಯವಿಲ್ಲ. ಅಣ್ಣ್ರಾವ್ರಿಗೆ ಇದ್ದಂತಹ ನಯ, ವಿನಯ ಯಾರಲ್ಲಿ ಇದ್ದರೆ ಅದು ಪುನೀತ್‌ ಅವರಲ್ಲಿ ಕಾಣಬೇಕು. ರಾಘಣ್ಣ ಜೊತೆ ಅದ್ಭುತ ಸಂಬಂಧ. ಆಸ್ಪತ್ರೆಯಲ್ಲಿರುವಾಗ, ಧೈರ್ಯವಾಗಿ ಹೇಳುತ್ತಿದ್ದರು.
ತನ್ನ ಅಭಿಮಾನಿಗಳಿಗೆ ಸೂಜಿಗಲ್ಲಿನಂತೆ ಅವನು ಆಕರ್ಷಣೆ ಮಾಡಿರುವುದು ಸಹಜ. ಎಲ್ಲರು ಮಾಡ್ತಾರೆ. ಆದರೆ, ಆ ಆಕರ್ಷಣೆ ಹಿಡಿದಿಟ್ಟುಕೊಳ್ಳುವುದು ದೊಡ್ಡ ಕಲೆ. ಆದು ಅಪ್ಪುಗಿತ್ತು. ಇಷ್ಟೆಲ್ಲಾ ಇದ್ದು, ಮಾಡಿಯೂ ಮಾಡದಂತಿರುವ ಪರೋಪಕಾರಿಯಾಗಿರುವ ಕೆಲಸಗಳು ನಮ್ಮ ಕನ್ನಡ ನಾಡಿನ ಶರಣರು ಹೇಳ್ತಾರೆ,

ಶರಣರನ್ನು ಮರಣದಲ್ಲಿ ನೋಡಿ, ಮರಣದ ನಂತರ, ಜನ ಯಾವ ರೀತಿ ಭಾವನೆಗಳನ್ನು, ಅನುಭವಗಳನನು ವ್ಯಕ್ತಪಡಿಸ್ತಾರೆ, ಅದು ಮನುಷ್ಯನ ವ್ಯಕ್ತಿತ್ವ ಬಿಂಬಿಸುತ್ತದೆ. ಅಪ್ಪು ನಮ್ಮನ್ನು ಅಗಲಿದ ಮೇಲೆ ಪ್ರತಿಯೊಬ್ಬರು ಆಡಿರುವ ಮಾತುಗಳು, ಮುತ್ತುಗಳು ಅವನ ಪರಿಪೂರ್ಣ ವ್ಯಕ್ತಿತ್ವ ನಮ್ಮ ನಾಡಿಗೆ ಪರಿಚಯವಾಗಿದೆ. ನಾನು ಅವನ ಅಗಲಿಕೆಯ ಸುದ್ದಿ ಕೇಳಿದಾಗ, ನಂಬಲೇ ಇಲ್ಲ. ಅರ್ಧ ಗಂಟೆ ಬೇರೆ ಕಡೆ ಮಾಹಿತಿ ಪಡೆದೆ ಸಣ್ಣ ವಯಸ್ಸಲಿ ಆಗಲು ಸಾಧ್ಯವೇ ಅಂತ, ನಿಜವಾಯ್ತು. ಆ ಘಟನೆ ನಾವ್ಯಾರೂ ಮರೆಯೋಕೆ ಸಾಧ್ಯವೇ ಇಲ್ಲ. ಒಂದು ಮಾತನ್ನು ಹೇಳೋಕೆ ಇಷ್ಟಪಡ್ತೀನಿ.

ಆದ ಘಟನೆಯಿಂದ ಅಂತಿಮ ಕ್ರಿಯೆವರೆಗೆ ಡಾ.ರಾಜಕುಮಾರ್‌ ಅವರ ಕುಟುಂಬದ ಪ್ರತಿಯೊಬ್ಬ ಸದಸ್ಯರು ನಡೆದುಕೊಂಡಿರುವ ರೀತಿ ಇದೆಯಲ್ಲ. ಅತ್ಯಂತ ಆದರ್ಶಪ್ರಾಯವಾಗಿದೆ ಕನ್ನಡಿಗರ ಪರವಾಗಿ ನಾನು ಆ ಕುಟುಂಬಕ್ಕೆ ನಮನ ಸಲ್ಲಿಸ್ತೀನಿ.
ಅವರ ಸಹಕಾರ ಒಂದು ಕಡೆ ಇನ್ನೊಂದು ಕಡೆ ಅಭಿಮಾನಿಗಳದ್ದು, ಅಪ್ಪು ಅವರ ವಿನಯಶೀಲತೆಗೆ ತಕ್ಕಂತೆ ಅವರ ಅಂತಿಮಯಾತ್ರೆಯನ್ನು ನಡೆಸಿಕೊಡಲು ಸಾಧ್ಯವಾಯ್ತು. ಕೋಟಿ ಕೋಟಿ ಅಭಿಮಾನಿಗಳಿಗೂ ನಮನ ಸಲ್ಲಿಸ್ತೀನಿ. ಸರ್ಕಾರದ ಎಲ್ಲಾ ಇಲಾಖೆ ಅಧಿಕಾರಿಗಳು ಹಗಲಿರುಳು ಕೆಲಸ ಮಾಡಿದ್ದಾರೆ. ಅವರಿಗೂ ವಿಶೇಷ ಧನ್ಯವಾದ ಹೇಳೋಕೆ ಇಷ್ಟಪಡ್ತೀನಿ ಎಂದರು ಸಿಎಂ ಬೊಮ್ಮಾಯಿ.

Related Posts

error: Content is protected !!