- ವಿಶಾಲಾಕ್ಷಿ
“ಮದಗಜ" ರೋರಿಂಗ್ಸ್ಟಾರ್ ಶ್ರೀಮುರುಳಿ ನಟನೆಯ ಹೈವೋಲ್ಟೇಜ್ ಸಿನಿಮಾ. ಟೈಟಲ್ನಿಂದಲೇ ಹೈಪ್ ಕ್ರಿಯೇಟ್ ಮಾಡ್ಕೊಂಡು, ಕಂಟೆಂಟ್ನಿಂದ ಮತ್ತು ಕ್ವಾಲಿಟಿಯಿಂದ ಬಜಾರ್ನಲ್ಲಿ ಹವಾ ಎಬ್ಬಿಸಿರುವ
ಮದಗಜ’ ಫಿಲ್ಮ್ ಟೀಮ್, ಈಗ ಇಂಟ್ರುಡಕ್ಷನ್ ಸ್ಯಾಂಪಲ್ ತೋರ್ಸಿ ಸಿನಿಮಾ ಪ್ರೇಮಿಗಳಿಂದ ಜೈಕಾರ ಹಾಕಿಸಿಕೊಳ್ತಿದ್ದಾರೆ. ಟೈಟಲ್ ಟ್ರ್ಯಾಕೇ ಇಷ್ಟು ರಿಚ್ ಆಗಿರುವಾಗ ಇಡೀ ಸಿನಿಮಾ ಇನ್ನೆಷ್ಟು ರಿಚ್ ಆಗಿರಬೇಡ ಅಂತ ಮಾತನಾಡಿಕೊಳ್ಳುವಂತೆ ಮಾಡಿದ್ದಾರೆ. ಗಾಂಧಿನಗರದ ಮಂದಿ ಮಾತ್ರವಲ್ಲ ಒಂದು ಕ್ಷಣ ಪರಭಾಷೆಯವರು ತಿರುಗಿ ನೋಡುವಂತಹ ಸಿನಿಮಾ ಇದಾಗುತ್ತೆ ಎನ್ನುವ ಸೂಚನೆ ಹೀರೋ ಇಂಟ್ರುಡಕ್ಷನ್ ಸಾಂಗ್ನಿಂದನೇ ಸಿಗುತ್ತಿದೆ.
ಯುದ್ದ ಸಾರಿದ.. ಚಂಡಮಾರುತ.. ಧೈರ್ಯ ಗೆಲ್ಲುತ.. ನಿಂತ ಪರ್ವತ.. ಮದಗಜ ಟೈಟಲ್ ಟ್ರ್ಯಾಕ್ ಹಾಡಿನ ಕೆಂಡದಂತಹ ಸಾಲುಗಳಿವು. ಕೆಜಿಎಫ್ ಸಿನಿಮಾದ ಗರ್ಭದಿ ನನ್ನಿರಿಸಿ ಊರಲಿ ನಡೆಯುತಿರೆ' ಅಂತ ಹೆತ್ತವ್ವನ ಮೇಲೆ ಗೀತೆ ರಚಿಸಿದ್ದ ಕಿನ್ನಾಲ್ ರಾಜ್ ಅವರು ಮದಗಜನಿಗೋಸ್ಕರ
ಅನ್ಯಾಯಕ್ಕೆ ಟಕ್ಕರ್..ಎದುರಾಳಿಗೆ ಆಫ್ ಮೀಟರ್..ನಮ್ಮೂರ ಬ್ರದರ್ ..ಕ್ಯಾರೆಕ್ಟರ್ ಬ್ಲಾಕ್ಬಸ್ಟರ್’ ಅಂತ ರೋರಿಂಗ್ ಪದಗಳನ್ನು ಪೋಣಿಸಿಕೊಟ್ಟಿದ್ದಾರೆ. ಸಂತೋಷ್ ವೆಂಕಿ ಹಾಡಿದ್ದಾರೆ. ಕೆಜಿಎಫ್ ಮ್ಯೂಸಿಕ್ ಕೊಟ್ಟು ಇಡೀ ಜಗತ್ತನ್ನೇ ದಂಗುಬಡಿಸಿರುವ ರವಿ ಬಸ್ರೂರ್ ಅವರು ಈಗ ರೋರಿಂಗ್ ಬ್ರದರ್ಗೆ ಜಬರ್ದಸ್ತ್ ಟ್ಯೂನ್ ಹಾಕಿಕೊಟ್ಟಿದ್ದಾರೆ. ಇಂಟ್ರುಡಕ್ಷನ್ ಹಾಡಿನಲ್ಲೇ `ಮದಗಜ’ನ ಮೈಲೇಜ್ ಹೆಚ್ಚಿಸಿದ್ದಾರೆ.
ಹೌದು, ಟೈಟಲ್ ಟ್ರಾಕ್ನಿಂದ ಮದಗಜ'ನಿಗೆ ಮಗದೊಂದು ತೂಕ ಬಂದಿದೆ. ಅದಕ್ಕೆ ಕಾರಣ ನಿರ್ದೇಶಕರ ಕಲ್ಪನೆ-ಅದಕ್ಕೆ ತಕ್ಕಂತೆ ಮೇಕಿಂಗ್-ಕ್ಯಾಚಿ ಲಿರಿಕ್ಸ್-ಮ್ಯೂಸಿಕ್ ಕಂಪೋಸಿಷನ್-ಸಿಂಗಿಂಗ್ ಜೊತೆಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡರ ಖಜಾನೆಯ ಕೋಟಿ ಕೋಟಿ ಹಣ. ಉಮಾಪತಿಯವರು ಒಬ್ಬ ಫ್ಯಾಷನೇಟ್ ಪ್ರೊಡ್ಯೂಸರ್. ಸಿನಿಮಾ ಮಾಡೋದೇ ಬ್ಯುಸಿನೆಸ್ಗೋಸ್ಕರ ಎನ್ನುವ ಇವರು ಸಿನಿಮಾ ಕ್ವಾಲಿಟಿ ಮತ್ತು ಕ್ವಾಂಟಿಟಿ ವಿಚಾರದಲ್ಲಿ ಯಾವತ್ತೂ ಕಾಂಪ್ರಮೈಸ್ ಆಗೋದಿಲ್ಲ.
ಎಷ್ಟು ಕೋಟಿ ಬೇಕಾದರೂ ಸುರಿಯೋದಕ್ಕೆ ಸಿದ್ದ. ಆದರೆ, ತಾನು ನಿರ್ಮಾಣ ಮಾಡಿರುವ ಸಿನಿಮಾವನ್ನು ಬರೀ ಗಾಂಧಿನಗರದವರು ಮಾತ್ರವಲ್ಲ ಪರಭಾಷೆಯವರು ತಿರುಗಿ ನೋಡ್ಬೇಕು ಅಂತಾರೇ. ಈ ಹಿಂದೆ ಹೆಬ್ಬುಲಿ ಹಾಗೂ ರಾಬರ್ಟ್ ಸಿನಿಮಾವನ್ನು ಹೊರರಾಜ್ಯದವರು ಕಣ್ಣರಳಿಸಿ ನೋಡಿದ್ದುಂಟು, ಪರಭಾಷಾ ಅಂಗಳದಲ್ಲಿ ಆ ಚಿತ್ರಗಳು ಕಮಾಯಿ ಮಾಡಿದ್ದುಂಟು. ಇದೀಗ
ಮದಗಜ’ನ ಸರದಿ.
ಮದಗಜ' ಬಿಗ್ಬಜೆಟ್ ಸಿನಿಮಾ. ಕೋಟಿ ಸೆಟ್-ಕಾಸ್ಟ್ಲೀ ಮೇಕಿಂಗ್ನಿಂದನೇ ನೋಡುಗರ ಕಣ್ಣು ಕುಕ್ಕುತ್ತಿದೆ. ಬರೋಬ್ಬರಿ 25 ಕೋಟಿ ವೆಚ್ಚದಲ್ಲಿ ತಯ್ಯಾರಾಗುತ್ತಿದ್ದು ಇಂಟ್ರುಡಕ್ಷನ್ ಹಾಡಿಗೆ ಒಂದು ಕೋಟಿ 72 ಲಕ್ಷ ಸುರಿದಿದ್ದಾರೆ. ಮೋಹನ್ ಬಿ.ಕೆರೆ ಸ್ಟುಡಿಯೋದಲ್ಲಿ ಭರ್ತಿ ಒಂದು ತಿಂಗಳು ಸೆಟ್ ವರ್ಕ್ ಕೆಲಸ ನಡೆದಿತ್ತು. ಎಲಿಫೆಂಟ್ ಥೀಮ್ನಲ್ಲಿ ಮೂರು ವೆರೈಟಿ ಸೆಟ್ ಹಾಕಲಾಗಿತ್ತು. ರಾಬರ್ಟ್ ಸಿನಿಮಾಗಾಗಿ ದರ್ಶನ್ಗೆ ಬೈಕ್ ಡಿಸೈನ್ ಮಾಡಿದ್ದ ಪ್ರಶಾಂತ್,
ಮದಗಜನಿಗೆ’ ಸ್ಪೆಷಲ್ ಬೈಕ್ ತಯ್ಯಾರಿ ಮಾಡಿಕೊಟ್ಟರು.
ಚೇತನ್ ಕಾಸ್ಟ್ಯೂಮ್ ಡಿಸೈನ್ ಮಾಡಿದರು. ಸುಮಾರು 15 ದಿನ ಮುರುಳಿಯವರು ಡ್ಯಾನ್ಸ್ ಪ್ರಾಕ್ಟೀಸ್ ಮಾಡಿಕೊಂಡು ರೆಡಿಯಾದರು. ಹೀಗೆ ಸಕಲ ತಯ್ಯಾರಿ ಮಾಡಿಕೊಂಡು ಅಖಾಡದಲ್ಲಿ ಧುಮ್ಕಿದ ರೋರಿಂಗ್ ಸ್ಟಾರ್ 150 ಜನ ಡ್ಯಾನ್ಸರ್ ಮಧ್ಯೆ ಧಗಧಗಿಸಿದ್ದರು. ಮುರುಳಿ ಮಾಸ್ಟರ್ ಕೊರಿಯಾಗ್ರಫಿ ಮಾಡಿದರೆ, ಡಿಓಪಿ ನವೀನ್ ಕುಮಾರ್ ಕ್ಯಾಮೆರಾ ಕಣ್ಣಲ್ಲಿ ಅತ್ಯದ್ಬುತವಾಗಿ ಸೆರೆ ಹಿಡಿದರು. ನಿರ್ದೇಶಕ ಮಹೇಶ್ ಅವರ ಕಲ್ಪನೆಯಂತೆ ಹೀರೋ ಇಂಡ್ರುಡಕ್ಷನ್ ಸಾಂಗ್ ಮಾಸ್ ಥೀಮ್ನಲ್ಲಿ ಭರ್ಜರಿಯಾಗಿ ಮೂಡಿಬಂತು. ಇದೀಗ ಯೂಟ್ಯೂಬ್ ಅಂಗಳದಲ್ಲಿ ರೋರ್ ಮಾಡ್ತಿದೆ.
ಉಮಾಪತಿ, ನಿರ್ಮಾಪಕರು
ಮದಗಜನ ಧಮಾಕೇದಾರ್ ಇಂಟ್ರುಡಕ್ಷನ್ ಸಾಂಗ್ನ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ರಿಲೀಸ್ ಮಾಡ್ಬೇಕಿತ್ತು. ನವೆಂಬರ್ ೦೧ರಂದು ಅದ್ದೂರಿಯಾಗಿ ಇವೆಂಟ್ ಮಾಡಿ ಅಪ್ಪು ಕೈನಲ್ಲಿ ಬಿಡುಗಡೆ ಮಾಡ್ಸೋಕೆ ಚಿತ್ರತಂಡ ತಯ್ಯಾರಿ ನಡೆಸಿತ್ತು. ಅಪ್ಪು ಕೂಡ ಮದಗಜ'ನ ಸಾಂಗ್ ನೋಡಿ ಮೆಚ್ಚಿಕೊಂಡಿದ್ದರು. ಅಷ್ಟರಲ್ಲಿ ವಿಧಿಯ ಕೈವಾಡ ದೊಡ್ಮನೆ ಹುಡುಗ ಕಣ್ಮರೆಯಾದರು.
ಮಹೇಶ್ ಕುಮಾರ್, ನಿರ್ದೇಶಕರು
ಶೋ ಮಸ್ಟ್ ಗೋ ಆನ್ ಎನ್ನುವ ಹಾಗೇ
ಮದಗಜ’ ಚಿತ್ರ ಬಿಡುಗಡೆಗೆ ತಯ್ಯಾರಾಗಿದೆ. ಅದ್ದೂರಿಗೆ ಮತ್ತೊಂದು ಹೆಸರೇ ಮದಗಜ' ಎನ್ನುವಂತೆ ನಿರ್ಮಾಣಗೊಂಡಿದೆ. ವಿಷ್ಯೂಯಲಿ ರಿಚ್ ಆಗಿರುವ
ಮದಗಜ’ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಬಡಿಸಲು ತಯ್ಯಾರಾಗಿದೆ. ನಮ್ಮದು ಬಫೆ ಸಿಸ್ಟಮ್ ವೆಜ್ ಬೇಕೋ ವೆಜ್ ತಿನ್ನಿ.. ನಾನ್ ವೆಜ್ ಬೇಕೋ ನಾನ್ ವೆಜ್ ತಿನ್ನಿ.. ಕಾಸು ಕೊಟ್ಟು ಬಂದವರಿಗೆ ಸಂತೃಪ್ತಿಯಾಗೋದ ಮಾತ್ರ ಸತ್ಯ ಎಂದಿದ್ದಾರೆ ನಿರ್ಮಾಪಕರು.
ಇನ್ನೂ,ಹಳ್ಳಿ ಸೊಗಡಿನ ಸಿನಿಮಾ ಮಾಡಿ ಚೊಚ್ಚಲ ಚಿತ್ರದಲ್ಲೇ ಜೈಕಾರ ಹಾಕಿಸಿಕೊಂಡಿದ್ದ ನಿರ್ದೇಶಕ ಅಯೋಗ್ಯ ಖ್ಯಾತಿಯ ಮಹೇಶ್, ಎರಡನೇ ಚಿತ್ರದಲ್ಲೇ ರೋರಿಂಗ್ ಸ್ಟಾರ್ ಕಾಲ್ಶೀಟ್ ಗಿಟ್ಟಿಸಿಕೊಂಡು, ಸ್ಟಾರ್ ಪ್ರೊಡ್ಯೂಸರ್ ಉಮಾಪತಿಯವರಿಂದ ದುಡ್ಡುಹಾಕ್ಸಿ ಪ್ಯಾನ್ ಇಂಡಿಯಾ ತಲುಪೋದಕ್ಕೆ ಹೊರಟಿದ್ದಾರೆ. ಕನ್ನಡದ ಜೊತೆಗೆ ತೆಲುಗು-ತಮಿಳು ಭಾಷೆಯಲ್ಲಿ ರಿಲೀಸ್ಗೆ ಸಜ್ಜಾಗಿದೆ. ಚಿತ್ರದಲ್ಲಿ ಅತೀ ದೊಡ್ಡ ತಾರಾಬಳಗವೇ ಇದೆ.
ರೋರಿಂಗ್ಸ್ಟಾರ್- ಆಶಿಕಾ ರಂಗನಾಥ್ ಜೋಡಿಯಾಗಿದ್ದು, ಜಗಪತಿ ಬಾಬು, ರಂಗಾಯಣ ರಘು, ಗರುಡರಾಮ್, ದೇವಯಾನಿ, ಚಿಕ್ಕಣ್ಣ, ಶಿವರಾಜ್ ಕೆ ಆರ್ ಪೇಟೆ, ಧರ್ಮಣ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಡಿಸೆಂಬರ್ ೦೩ರಂದು ತೆರೆಗೆ ತರೋದಕ್ಕೆ ಫಿಲ್ಮ್ ಟೀಮ್ ರೆಡಿಯಾಗ್ತಿದೆ. ಅಭಿಮಾನಿ ದೇವರುಗಳ ಆಶೀರ್ವಾದ ಮದಗಜನ ಮೇಲಿದ್ದರೆ ಶ್ರೀಮುರುಳಿಯ ಹೊಸ ಮೇನಿಯಾ ಸೃಷ್ಟಿಯಾಗೋದು ಗ್ಯಾರಂಟಿ.
ಎಂಟರ್ಟೈನ್ಮೆಂಟ್ ಬ್ಯೂರೋ ಸಿನಿಲಹರಿ